ನ್ಯೂಸ್

ಅಂತರ್​ಧರ್ಮೀಯರ ಮದುವೆಗೆ ವಿಶೇಷ ಕಾಯ್ದೆ

ಪಕ್ಷದ ಮುಖಂಡ ಫರ್ಹಾದ್ ಜಿರಾರ್ ಅಹ್ಮದ್ ಅವರು ಕೆಲ ದಿನಗಳ ಹಿಂದೆ ಮದುವೆಯಾದರು. ಇವರದ್ದು ಅಂತರ್​ಧರ್ವಿುಯ ಮದುವೆ. ಮತಾಂತರವಾಗದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಇದೇ ರೀತಿ ಅಂತರ್​ಧರ್ವಿುಯ ಜೋಡಿಗಳು ಜಾತ್ಯತೀತ ವೈಯಕ್ತಿಕ ಕಾನೂನಿನ ಅನುಸಾರ ಮದುವೆಯಾಗಲು ಆಯ್ದುಕೊಳ್ಳುವ ಮಾರ್ಗವೆಂದರೆ 1954ರ ವಿಶೇಷ ವಿವಾಹ ಕಾಯ್ದೆ (ವಿವಿಕಾ).

ಮದುವೆಯಾಗಿರುವುದನ್ನು ಸಾರ್ವಜನಿಕವಾಗಿ ಪ್ರಕಟಿಸಿದ ಸಂದರ್ಭದಲ್ಲಿ ನಟಿ ಸ್ವರಾ ಭಾಸ್ಕರ್ ಅವರು ಮದುವೆಯ ಧಾರ್ವಿುಕ ಕಾನೂನುಗಳಿಗೆ ಪರ್ಯಾಯ ಮಾರ್ಗ ಒದಗಿಸುವ ವಿಶೇಷ ವಿವಾಹ ಕಾಯ್ದೆಯನ್ನು ಶ್ಲಾಘಿಸಿದರು. ಹಾಗಿದ್ದರೆ ಏನಿದು ವಿಶೇಷ ವಿವಾಹ ಕಾಯಿದೆ ? ಇದು ವಿವಾಹದ ಧಾರ್ವಿುಕ ಸಂಹಿತೆಗಳಿಗಿಂತ ಹೇಗೆ ಭಿನ್ನವಾಗಿದೆ? ಮದುವೆ, ವಿಚ್ಛೇದನ, ದತ್ತು ಮುಂತಾದ ವೈಯಕ್ತಿಕ ಕಾನೂನಿನ ಸಂಗತಿಗಳು ಧಾರ್ವಿುಕ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ. ಮುಸ್ಲಿಂ ಸಮುದಾಯದವರಿಗೆ 1954ರ ಮುಸ್ಲಿಂ ವಿವಾಹ ಕಾಯ್ದೆ, ಹಿಂದೂಗಳಿಗೆ 1955ರ ಹಿಂದೂ ವಿವಾಹ ಕಾಯ್ದೆ ಅಸ್ತಿತ್ವದಲ್ಲಿವೆ. ಆದರೆ, ಬೇರೆ ಬೇರೆ ಧರ್ಮಕ್ಕೆ ಸೇರಿದವರು ಇಂತಹ ಕಾಯ್ದೆಗಳ ಅನುಸಾರ ಮದುವೆಯಾಗಬೇಕಾದರೆ, ವಿವಾಹಕ್ಕೆ ಮೊದಲು ಸಂಗಾತಿಯ ಪೈಕಿ ಒಬ್ಬರು ಇನ್ನೊಬ್ಬರ ಧರ್ಮಕ್ಕೆ ಮತಾಂತರಗೊಳ್ಳಬೇಕಾಗುತ್ತದೆ. ಆದರೆ, ಅಂತರ್​ಧರ್ವಿುಯ ಜೋಡಿಗಳು ತಮ್ಮ ಧಾರ್ವಿುಕ ಗುರುತನ್ನು ಬಿಟ್ಟುಕೊಡದೆ ಅಥವಾ ಮತಾಂತರವನ್ನು ಆಶ್ರಯಿಸದೆ ಮದುವೆಯಾಗುವ ಅವಕಾಶವನ್ನು ವಿಶೇಷ ವಿವಾಹ ಕಾಯ್ದೆ ಒದಗಿಸುತ್ತದೆ.

ನಾಗರಿಕ ಮತ್ತು ಧಾರ್ವಿುಕ ವಿವಾಹಗಳನ್ನು ಗುರುತಿಸುವ ಭಾರತೀಯ ವ್ಯವಸ್ಥೆಯು 1949 ರ ಬ್ರಿಟನ್ನಿನ ವಿವಾಹ ಕಾಯ್ದೆಯನ್ನು ಹೋಲುತ್ತದೆ. ಯಾವುದೇ ಒಂದು ಧರ್ಮದ ಕಾಯ್ದೆಗಳನ್ನು ಹೊರತುಪಡಿಸಿ ಮಾಡಿಕೊಳ್ಳುವ ನಾಗರಿಕ ವಿವಾಹಕ್ಕೆ ಮಾನ್ಯತೆ ಒದಗಿಸುವ ದೃಷ್ಟಿಯಿಂದ ಭಾರತದಲ್ಲಿ ವಿವಿಕಾವನ್ನು 1872ರಲ್ಲಿಯೇ ಜಾರಿಗೊಳಿಸಲಾಗಿತ್ತು. 1954ರಲ್ಲಿ ವಿಚ್ಛೇದನ ಇತ್ಯಾದಿಗಳ ನಿಬಂಧನೆಗಳ ತಿದ್ದುಪಡಿಗಳೊಂದಿಗೆ ಮರುಜಾರಿ ಮಾಡಲಾಯಿತು.

ವಿವಿಕಾ ಅನುಸಾರ ಯಾರು ಮದುವೆಯಾಗಬಹುದು?: ಕಾಯ್ದೆಯು ಭಾರತದಾದ್ಯಂತ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಜೈನರು ಮತ್ತು ಬೌದ್ಧರು ಸೇರಿದಂತೆ ಎಲ್ಲಾ ಧರ್ಮಗಳ ಜನರಿಗೆ ಅನ್ವಯಿಸಬಹುದಾಗಿದೆ. ಕೆಲ ಸಾಂಪ್ರದಾಯಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ನಿಷೇಧಿತ ಸಂಬಂಧದ ಪ್ರಕರಣಗಳಲ್ಲಿ ಕೂಡ ಜೋಡಿಗಳಿಗೆ ವಿವಿಕಾ ಅನ್ವಯಿಸುತ್ತದೆ. 1952ರಲ್ಲಿ ವಿಶೇಷ ವಿವಾಹ ಮಸೂದೆಯನ್ನು ಪ್ರಸ್ತಾಪಿಸಿದಾಗ, ಏಕಪತ್ನಿತ್ವದ ಅಗತ್ಯವನ್ನು ಮೂಲಭೂತವಾಗಿ ಪರಿಗಣಿಸಲಾಯಿತು. ವಿವಿಕಾದ ಸೆಕ್ಷನ್ 4ರ ಪ್ರಕಾರ, ಮದುವೆಯಾಗುವ ಸಮಯದಲ್ಲಿ ವಧು ಮತ್ತು ವರರ ಪೈಕಿ ಯಾರಿಗೂ ಜೀವಂತವಾಗಿರುವ ಪತಿ ಅಥವಾ ಪತ್ನಿ ಇರಬಾರದು. ಅಲ್ಲದೆ, ಅವರು ಮಾನಸಿಕ ಅಸ್ವಸ್ಥತೆಯ ಪರಿಣಾಮವಾಗಿ ಮದುವೆಗೆ ಒಪ್ಪಿಗೆ ನೀಡಲು ಅಸಮರ್ಥವಾದ ಸ್ಥಿತಿಯಲ್ಲಿ ಇರಬಾರದು. ಮರುಕಳಿಸುವ ಹುಚ್ಚುತನದ ಸಮಸ್ಯೆ ಹೊಂದಿರಬಾರದು. ಮದುವೆ ಮತ್ತು ಸಂತಾನೋತ್ಪತ್ತಿಗೆ ಅನರ್ಹರು ಎನ್ನಬಹುದಾದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಾರದು.

ಮದುವೆ ವಿಧಾನ: ವಿವಿಕಾದ ಸೆಕ್ಷನ್ 5ರ ಪ್ರಕಾರ, ಮದುವೆಯಾಗುವ ಜೋಡಿಯ ಪೈಕಿ ಯಾರಾದರೊಬ್ಬರು ತಾವು ವಾಸಿಸುವ ಜಿಲ್ಲೆಯಲ್ಲಿನ ಅಧಿಕಾರಿಗೆ ಕನಿಷ್ಠ 30 ದಿನಗಳ ಮೊದಲು ನೋಟಿಸ್ ನೀಡಬೇಕಾಗುತ್ತದೆ. ವಿವಾಹವನ್ನು ನೆರವೇರಿಸುವ ಮೊದಲು, ವಧು-ವರರು ಮತ್ತು ಮೂವರು ಸಾಕ್ಷಿಗಳು ಮದುವೆ ಅಧಿಕಾರಿಯ ಮುಂದೆ ಘೊಷಣಾ ಅರ್ಜಿಗೆ ಸಹಿ ಹಾಕಬೇಕಾಗುತ್ತದೆ. ಈ ಘೊಷಣೆಯನ್ನು ಅಂಗೀಕರಿಸಿದ ನಂತರ, ಜೋಡಿಗೆ ವಿವಾಹ ಪ್ರಮಾಣಪತ್ರ ನೀಡಲಾಗುತ್ತದೆ. ವಿವಿಕಾ ಅಡಿಯಲ್ಲಿ ವಿಧಿವಿಧಾನಗಳ ಪ್ರಕಾರ ಮದುವೆಯಾದ ಪುರಾವೆ ಇದಾಗಿರುತ್ತದೆ.

ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನಆಕ್ಷೇಪಣೆಗೆ ಅವಕಾಶ: ವಿವಿಕಾದ ಸೆಕ್ಷನ್ 6ರ ಪ್ರಕಾರ, ಮದುವೆಯಾಗಬಯಸುವ ಜೋಡಿಗಳು ನೀಡುವ ನೋಟಿಸ್​ನ ನೈಜ ಪ್ರತಿಯನ್ನು ಮದುವೆ ನೋಟಿಸ್ ಬುಕ್​ನಲ್ಲಿ ಇರಿಸಲಾಗುತ್ತದೆ. ಯಾವುದೇ ಶುಲ್ಕವಿಲ್ಲದೆ ತಪಾಸಣೆಗೆ ಇದು ಮುಕ್ತವಾಗಿರುತ್ತದೆ. ನೋಟಿಸ್ ಪಡೆದ ನಂತರ ಮದುವೆಯ ಅಧಿಕಾರಿಯು ಮದುವೆಗೆ ಯಾವುದೇ ಆಕ್ಷೇಪಣೆಗಳಿದ್ದರೆ ಅದನ್ನು ಆಹ್ವಾನಿಸುವುದಕ್ಕಾಗಿ ಕಚೇರಿಯ ಕೆಲವು ಎದ್ದುಕಾಣುವ ಸ್ಥಳಗಳಲ್ಲಿ ಅದನ್ನು ಪ್ರಕಟಿಸಬೇಕಾಗುತ್ತದೆ. ವಿವಿಕಾದ ಸೆಕ್ಷನ್ 7 ಮದುವೆ ಆಕ್ಷೇಪಣೆಗೆ ಸಂಬಂಧಿಸಿದ್ದಾಗಿದೆ. ನೋಟಿಸ್ ಪ್ರಕಟಣೆಯ ದಿನಾಂಕದಿಂದ ಮೂವತ್ತು ದಿನಗಳ ಮುಕ್ತಾಯದ ಮೊದಲು ಯಾವುದೇ ವ್ಯಕ್ತಿ ಮದುವೆಗೆ ಆಕ್ಷೇಪ ವ್ಯಕ್ತಪಡಿಸಲು ಅವಕಾಶವಿರುತ್ತದೆ. ವಿವಿಕಾದ ಸೆಕ್ಷನ್ 4ರಲ್ಲಿ ನಿರ್ದಿಷ್ಟಪಡಿಸಿದ ಒಂದು ಅಥವಾ ಹೆಚ್ಚಿನ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕಾಗಿ ಮದುವೆಗೆ ಆಕ್ಷೇಪಿಸಲು ಅವಕಾಶ ದೊರೆಯುತ್ತದೆ. ಮದುವೆ ಅಧಿಕಾರಿ ಈ ಬಗ್ಗೆ ವಿಚಾರಿಸಿ, ಈ ಆಕ್ಷೇಪಣೆ ಮದುವೆಗೆ ಯಾವುದೇ ರೀತಿಯ ಕಾನೂನು ಅಡ್ಡಿಯನ್ನುಂಟು ಮಾಡುವುದಿಲ್ಲ ಎಂದು ಮನವರಿಕೆ ಆಗುವವರೆಗೆ ಆಥವಾ ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿ ಅದನ್ನು ಹಿಂತೆಗೆದುಕೊಳ್ಳದ ಹೊರತು ಮದುವೆ ನೆರವೇರಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಅಪಾರ್ಟ್​​ಮೆಂಟ್​​ನ 11ನೇ ಮಹಡಿಯಿಂದ ಕೆಳಕ್ಕೆ ಬಿದ್ದ ಯುವತಿ ಸ್ಥಳದಲ್ಲೇ ಸಾವು!ಗೌಪ್ಯತೆಗೆ ನ್ಯಾಯಾಲಯ ಒತ್ತು: ಮದುವೆಯಾಗಲು ಮುಂದಾಗುವ ಜೋಡಿಗಳಿಗೆ ಕಿರುಕುಳವನ್ನುಂಟು ಮಾಡುತ್ತಿವೆ ಎಂಬ ಕಾರಣಕ್ಕೆ, ಮದುವೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವ ಬಗೆಗೆ ಟೀಕೆಗಳೂ ಇವೆ. 2009ರಲ್ಲಿ ವಿವಿಕಾ ಕುರಿತಂತೆ ತೀರ್ಪು ನೀಡಿದ ದೆಹಲಿ ಹೈಕೋರ್ಟ್, ಗೌಪ್ಯತೆಯ ಹಕ್ಕನ್ನು ಒತ್ತಿಹೇಳಿತು. ವಿಳಾಸ ಪರಿಶೀಲಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣೆಯ ಮೂಲಕ, ಮದುವೆಯಾಗಬಯಸುವ ಜೋಡಿಯ ನಿವಾಸದ ವಿಳಾಸಗಳಿಗೆ ಪೋಸ್ಟ್ ಮಾಡುವ ಪ್ರಕ್ರಿಯೆ ರದ್ದುಗೊಳಿಸಿತು. ಇಬ್ಬರು ವಯಸ್ಕರ ವೈವಾಹಿಕ ಯೋಜನೆಗಳನ್ನು ಅನಧಿಕೃತವಾಗಿ ಬಹಿರಂಗಪಡಿಸುವುದರಿಂದ ಮದುವೆಗೆ ಅಪಾಯ ಉಂಟಾಗಬಹುದು. ಕೆಲವು ಸಂದರ್ಭಗಳಲ್ಲಿ, ಪೋಷಕರ ಹಸ್ತಕ್ಷೇಪದಿಂದಾಗಿ ಮದುವೆಯಾಗುವ ಜೋಡಿಯ ಜೀವಕ್ಕೆ ಅಪಾಯವ ಉಂಟಾಗಬಹುದು ಎಂದು ನ್ಯಾಯಾಲಯ ಹೇಳಿದೆ.

ಕನಿಷ್ಠ ವಯಸ್ಸು: ವಿವಿಕಾ ಅಡಿಯಲ್ಲಿ ಮದುವೆಯಾಗಲು ಕನಿಷ್ಠ ವಯಸ್ಸು ಪುರುಷರಿಗೆ 21 ವರ್ಷಗಳು ಮತ್ತು ಮಹಿಳೆಯರಿಗೆ 18 ವರ್ಷ.

ನೋಟಿಸ್ ಅವಧಿಗೆ ತಕರಾರು: ವಿವಿಕಾ ಅನುಸಾರ ಮದುವೆಯಾಗ ಬಯಸುವ ಜೋಡಿ ನೀಡಬೇಕಾದ ಕನಿಷ್ಠ 30 ದಿನಗಳ ನೋಟಿಸ್ ಅವಧಿಯ ಬಗೆಗೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯ ಗಳಲ್ಲಿ ಪ್ರಶ್ನಿಸಲಾಗಿದೆ. 2021ರ ಜನವರಿಯಲ್ಲಿ ಅಲಹಾ ಬಾದ್ ಹೈಕೋರ್ಟ್, ಕನಿಷ್ಠ 30 ದಿನಗಳ ನೋಟಿಸ್ ನೀಡುವುದು ಕಡ್ಡಾಯವೇನಲ್ಲ ಎಂದು ಹೇಳಿದೆ.

ವಿವಿಕಾ ಅನುಸಾರ ಮದುವೆಯಾದ ಸೆಲೆಬ್ರಿಟಿಗಳು

ಬಾಲಿವುಡ್ ಸ್ಟಾರ್ ಶಾರುಖ್ ಖಾನ್- ಗೌರಿ ಚಿಬ್ಬರ್; ನಟರಾದ ಕರಿನಾ ಕಪೂರ್- ಸೈಫ್ ಅಲಿ ಖಾನ್; ಕ್ರಿಕೆಟ್ ಆ ಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ- ನಟಿ ಶರ್ವಿುಳಾ ಟಾಗೋರ್; ನಟರಾದ ನಾಸೀರುದ್ದೀನ್ ಶಾ- ರತ್ನಾ ಪಾಠಕ್; ನಟರಾದ ಸುನೀಲ್ ದತ್- ನರ್ಗೀಸ್; ನಿರ್ಮಾಪಕಿ ಫರ್ಹಾ ಖಾನ್- ಶಿಶಿರ್ ಕುಂದರ್; ನಟ ಸುನೀಲ್ ಶೆಟ್ಟಿ - ಮನಾ ಖಾದ್ರಿ