ನ್ಯೂಸ್

ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

arunakunigal

ರಾಯಚೂರು: ಹೊಸ ವರ್ಷಾಚರಣೆ ಪ್ರಯುಕ್ತ ಕೇಕ್​ ಕತ್ತರಿಸಿ ಸಂಭ್ರಮಿಸುತ್ತಿದ್ದ ಯುವಕರ ಬೆನ್ನ ಹಿಂದೆಯೇ ದೆವ್ವ ಹಾದುಹೋಗಿದೆ!

ಇಂತಹ ಅಚ್ಚರಿ ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಜಕ್ಕಲದಿನ್ನಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಯುವಕರು ಕೇಕ್ ಕತ್ತರಿಸುತ್ತಿದ್ದರು. ಅದನ್ನು ಮತ್ತೊಬ್ಬ ವಿಡಿಯೋ ಮಾಡಿಕೊಳ್ಳುತ್ತಿದ್ದ. ಆ ವೇಳೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂಭಾಗದಲ್ಲಿ ಮನುಷ್ಯ ಆಕೃತಿಯ ಬಿಳಿ-ಬೂದು ಬಣ್ಣದ ನೆರಳು ಸಂಚರಿಸಿದೆ. ಈ ದೃಶ್ಯವೂ ಮೊಬೈಲ್​ನಲ್ಲಿ ಸೆರೆಯಾಗಿದೆ.

ಪೆಟ್ರೋಲ್ ಬಂಕ್ ಬಳಿ‌ ಕಾಣಿಸಿಕೊಂಡ ಈ ಆಕೃತಿಯನ್ನು ಭೂತ ಎಂದೇ ನಂಬಿದ ಜನತೆ ದಿಕ್ಕುಪಾಲಾಗಿ ಓಡಿದ್ದಾರೆ. ಇದು ಭೂತ ಛೇಷ್ಟೇಯೋ ಅಥವಾ ಬೇರೆ ಏನೋ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ.