ನವದೆಹಲಿ: ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಅವರು ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅವರು ಬರಲಾಗುವುದಿಲ್ಲ ಎಂದು ತಿಳಿಸಿದ್ದು, ಬೇರೊಬ್ಬ ಅತಿಥಿಗೆ ಭಾರತ ಆಹ್ವಾನ ನೀಡಿದೆ.
ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!
ಹೌದು. ಬ್ರಿಟನ್ನಲ್ಲಿ ರೂಪಾಂತರಿ ಕರೊನಾ ಸೋಂಕಿನ ಪ್ರಭಾವ ಹೆಚ್ಚಾಗಲಾರಂಭಿಸಿದೆ. ಅದೇ ಕಾರಣದಿಂದಾಗಿ ಮುಂಜಾಗ್ರತಾ ದೃಷ್ಟಿಯಿಟ್ಟುಕೊಂಡು, ಭಾರತಕ್ಕೆ ಬರಲಾಗುವುದಿಲ್ಲ ಎಂದು ಬೋರಿಸ್ ಜಾನ್ಸನ್ ಅವರು ತಿಳಿಸಿದ್ದಾರೆ. ಇದೀಗ ಅವರ ಬದಲಾಗಿ ಸುರಿನಾಮ್ ಅಧ್ಯಕ್ಷ ಚಂದ್ರಿಕಾಪ್ರಸಾದ್ ಸಂತೋಖಿಯವರಿಗೆ ಭಾರತ ಆಹ್ವಾನ ನೀಡಿದ್ದು, ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಜನವರಿ 26ರ ಗಣರಾಜ್ಯೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಚಂದ್ರಿಕಾ ಪ್ರಸಾದ್ ನೇತೃತ್ವ ವಹಿಸಿಕೊಂಡಿರುವ ಯುನೈಟೆಡ್ ಹಿಂದೂಸ್ತಾನಿ ಪಕ್ಷ ಸುರಿನಾಮ್‌ನಲ್ಲಿ ಅಧಿಕಾರದಲ್ಲಿದೆ. ಸ್ವಾತಂತ್ರ್ಯಾ ಪೂರ್ವದಲ್ಲಿ ಡಚ್ಚರ ಆಳ್ವಿಕೆಯಲ್ಲಿದ್ದ ಸುರಿನಾಮ್‌ನಲ್ಲಿ ಭಾರತೀಯರು ದೊಡ್ಡ ಪ್ರಮಾಣದಲ್ಲಿದ್ದಿದ್ದರಿಂದಾಗಿ ಭಾರತಕ್ಕೂ ಸುರಿನಾಮ್ಗೂ ಒಂದು ಅದ್ಭುತ ಸಂಬಂಧ ಮೊದಲಿನಿಂದಲೂ ಇದೆ. (ಏಜೆನ್ಸೀಸ್)