ನ್ಯೂಸ್

ಕಿಡ್ನಿಸ್ಟೋನ್​ ಆಪರೇಷನ್​ ಬಳಿಕ ಕಿಡ್ನಿಯೇ ನಾಪತ್ತೆ: ವೈದ್ಯರ ವಿರುದ್ಧ ದೂರು

ಪ್ರತಾಪಗಢ: ನರ್ಸಿಂಗ್ ಹೋಂನಲ್ಲಿ ಕಿಡ್ನಿಸ್ಟೋನ್​ ಆಪರೇಷನ್​ ಬಳಿಕ ಕಿಡ್ನಿಯೇ ನಾಪತ್ತೆಯಾಗಿರುವ ಆರೋಪ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಲಾಲ್ಗಂಜ್ ಕೊಟ್ವಾಲಿ ಪ್ರದೇಶದ ದೇವಪುರ್ ಚೌಕರ್‌ನಲ್ಲಿ ವಾಸಿಸುವ ಸಂಗೀತಾ ವರ್ಮಾ ತನ್ನ 18 ವರ್ಷದ ಮಗ ಸಚಿನ್​ಗೆ ನಗರದ ನರ್ಸಿಂಗ್ ಹೋಂನಲ್ಲಿ ಕಿಡ್ನಿಸ್ಟೊನ್ ಆಪರೇಷನ್​ ಮಾಡಿಸಿದ್ದರು. ಆ ಬಳಿಕ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವಂತೆ ಹೇಳಿ ಆತನನ್ನು ಡಿಸ್ಚಾರ್ಜ್​ ಮಾಡಲಾಗಿತ್ತು. ಮನೆಗೆ ತೆರಳಿದ ಹಲವು ದಿನಗಳವರೆಗೆ ಬಾಲಕ ಚೆನ್ನಾಗಿಯೇ ಇದ್ದ.

ಆದರೆ ಈ ನಡುವೆ ಔಷಧಿ ನಿಲ್ಲಿಸಿದ ನಂತರ ಆತನಿಗೆ ಆತನಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಗ ಆತ ಎರಡು ವಿಭಿನ್ನ ಕೇಂದ್ರಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್​ ಮಾಡಿಸಿಕೊಂಡಿದ್ದಾನೆ. ಈ ವೇಳೆ ಆತನ ಒಂದು ಕಿಡ್ನಿ ಇಲ್ಲದಿರುವುದು ಕಂಡುಬಂದಿದೆ. ನೊಂದ ಕುಟುಂಬಸ್ಥರು ಕೊತ್ವಾಲಿ ಪೊಲೀಸರಿಗೆ ಈ ಕುರಿತು ದೂರು ನೀಡುವ ಮೂಲಕ ಕ್ರಮಕ್ಕೆ ಆಗ್ರಹಿಸಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದರು.

ಕೊನೆಗೆ ಕುಟುಂಬಸ್ಥರು ಶನಿವಾರ ಸಂಬಂಧಿಕರು ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದು, ಆಪರೇಷನ್​ ನಡೆಸಿದ ವೈದ್ಯರನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಕುರಿತು ವೈದ್ಯರು ಪ್ರತಿಕ್ರಿಯೆ ನೀಡಿದ್ದು, ರೋಗಿಯು ಆಪರೇಷನ್‌ಗಾಗಿ ಆಸ್ಪತ್ರೆಗೆ ಬಂದಾಗ ಅವನ ಮೂತ್ರಪಿಂಡವು ಕುಗ್ಗಿತ್ತು. ಆಪರೇಷನ್​ ಬಳಿಕ ಮತ್ತಷ್ಟು ಕುಗ್ಗಿರಬೇಕು. ಅದಕ್ಕಾಗಿಯೇ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಇದು ಗೋಚರಿಸುವುದಿಲ್ಲ. ಎಂಆರ್‌ಐನಲ್ಲಿ ಮೂತ್ರಪಿಂಡವು ಖಂಡಿತವಾಗಿಯೂ ಗೋಚರಿಸುತ್ತದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)