ನ್ಯೂಸ್

ಸೂಪರ್​ ಗ್ಲೂ ಹಾಕಿ ತುಟಿಗಳನ್ನು ಮುಚ್ಚಿದ ಯುವಕ! ಕೊನೆಗೆ ಏನಾಯ್ತು ಗೊತ್ತಾ? ಆಘಾತಕಾರಿ ವಿಡಿಯೋ ಇಲ್ಲಿದೆ... Super glue

Super glue : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೇ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನವನ್ನು ಸೆಳೆದು ಕ್ಷಣಾರ್ಧದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರಿಕೊಂಡಿದೆ.

ಅಂದಹಾಗೆ ಜನರು ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲು ಅನೇಕ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಕೆಲವರಂತೂ ಜೀವಕ್ಕೆ ಅಪಾಯಕಾರಿಯಾದ ಸಾಹಸಕ್ಕೂ ಕೈಹಾಕುತ್ತಾರೆ. ಕೆಲವರಿಗೆ ಅದೃಷ್ಟ ಕೈಹಿಡಿದು ವಿಡಿಯೋ ವೈರಲ್​ ಆದರೆ, ಕೆಲವರು ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳು ಕೂಡ ಇವೆ. ಅದೇ ರೀತಿ ವೈರಲ್ ಮಾಡುವ ಉದ್ದೇಶದಿಂದಲೇ ರೆಕಾರ್ಡ್​ ಮಾಡಲಾದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋದಲ್ಲಿ ಯುವಕನೊಬ್ಬ ತನ್ನ ತುಟಿಗಳಿಗೆ ಸೂಪರ್ ಗ್ಲೂ ಹಚ್ಚಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ಯುವಕ ಅದನ್ನು ತಮಾಷೆಗಾಗಿ ಮಾಡಿದರೂ, ಕೊನೆಯಲ್ಲಿ ವಿಷಯ ಸ್ವಲ್ಪ ಗಂಭೀರವಾಗುತ್ತದೆ.

ವಿಡಿಯೋದಲ್ಲಿ ಏನಿದೆ?

ಈ ವಿಡಿಯೋವನ್ನು 'badis_tv' ಎಂಬ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಫಿಲಿಪೈನ್ಸ್ ಮೂಲದ ಯುವಕನೊಬ್ಬ ತನ್ನ ತುಟಿಗಳಿಗೆ ಸೂಪರ್ ಗ್ಲೂ ಹಚ್ಚಿಕೊಂಡು ಅವುಗಳನ್ನು ಒಟ್ಟಿಗೆ ಮುಚ್ಚಿಕೊಳ್ಳುತ್ತಾನೆ. ನಂತರ ಅವನು ಬಾಯಿ ತೆರೆಯಲು ಪ್ರಯತ್ನಿಸಿದಾಗ, ಸಾಧ್ಯವಾಗುವುದಿಲ್ಲ. ಇದೇ ಸಂದರ್ಭದಲ್ಲಿ ಯುವಕನಿಗೆ ನಗು ಬರುತ್ತದೆ. ನಗುತ್ತಲೇ ಬಾಯಿ ತೆರೆಯಲು ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ. ಆದರೆ, ಸಾಧ್ಯವಾಗುವುದೇ ಇಲ್ಲ. ಕೊನೆಗೆ ಬಾಯಿ ತೆರೆಯಲು ಆಗುತ್ತಿಲ್ಲ ಎಂಬುದನ್ನು ಅರಿತ ಯುವಕ ಗಾಬರಿಗೊಂಡು ಅಳುತ್ತಾ ಓಡಿಹೋಗುತ್ತಾನೆ.

ವಿಡಿಯೋ ಕೊನೆಯಲ್ಲಿ ಯುವಕನಿಗೆ ಏನಾಯಿತು ಎಂದು ತೋರಿಸಿಲ್ಲ. ಅಲ್ಲದೆ, ವಿಡಿಯೋದಲ್ಲಿ ತೋರಿಸಿರುವ ಎಲ್ಲವೂ ನಿಜವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈಗಾಗಲೇ 4.7 ಮಿಲಿಯನ್ ವೀಕ್ಷಣೆಗಳು ಬಂದಿವೆ. ಇದಕ್ಕೆ ಅನೇಕ ಕಾಮೆಂಟ್‌ಗಳು ಬರುತ್ತಿವೆ. ವ್ಯಕ್ತಿಯೊಬ್ಬ ತಮಾಷೆಯಾಗಿ "ನಿಮ್ಮ ಕಣ್ಣುಗಳಿಂದ ಇದನ್ನು ಪ್ರಯತ್ನಿಸಿ" ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಮುಂದೆ ಏನಾಯಿತು ಎಂದು ಕೇಳುತ್ತಿದ್ದಾರೆ. ಯಾರೂ ಕೂಡ ಈ ಪ್ರಯತ್ನ ಮಾಡಬೇಡಿ ಎಂದು ಕೆಲವರು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)