Karnikotsava: ಜಿಲ್ಲೆಯ ಪ್ರಸಿದ್ದ ಹೂವಿನ ಹಡಗಲಿಯ ಐತಿಹಾಸಿಕ ತಾಲೂಕಿನ ಸುಕ್ಷೇತ್ರ ಮೈಲಾರ ಕಾರ್ಣಿಕೋತ್ಸವ ಇಂದು ಸಂಜೆ(ಫೆ.14) ಲಕ್ಷಾಂತರ ಭಕ್ತರ ಮಧ್ಯೆ ಸಂಪನ್ನವಾಯಿತು. ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ಕಾರ್ಣಿಕೋತ್ಸವದಲ್ಲಿ ''ತುಂಬಿದ ಕೊಡ ತುಳುಕಿತಲೇ ಪರಾಕ್'' ಎಂದು ಗೊರವಯ್ಯ ಅವರು ದೈವವಾಣಿ ನುಡಿದರು.
ಇದನ್ನೂ ಓದಿ:ವಿಶ್ವದ ಮೊದಲ AI ಆಧರಿತ MMG ಗನ್; ಗಡಿ ನುಸುಳು ಕೋರರ ಶೂಟ್ ಮಾಡೋಕೆ ನೀಡುತ್ತೆ ಸಿಗ್ನಲ್…! | AI MMG GUN
ಪ್ರತಿವರ್ಷದಂತೆ ಈ ಬಾರಿಯೂ ಪ್ರತಿವರ್ಷ ಈ ದೇವರು ನುಡಿಯುವ ಕಾರ್ಣಿಕ ನುಡಿಗೆ ( Karnika Nudi ) ಲಕ್ಷಾಂತರ ಭಕ್ತರು ಕಾದು ಕುಳಿತಿರುದ್ದರು. ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರಲ್ಲಿದೆ. ಅದರಂತೆ ಗೋರವಯ್ಯ ''ತುಂಬಿದ ಕೊಡ ತುಳುಕಿತಲೇ ಪರಾಕ್'' ಎಂದು ಭವಿಷ್ಯವಾಣಿಯನ್ನು ನುಡಿದರು.
ಇದನ್ನೂ ಓದಿ:ರ್ಯಾಗಿಂಗ್ ಪ್ರಕರಣದಡಿ ಐವರು ಅರೆಸ್ಟ್; ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸದಿರಲು ದಿಟ್ಟ ನಿರ್ಧಾರ! Ragging Case
ಕಾರ್ಣಿಕ ನುಡಿಗೂ ಮುನ್ನ ಗೊರವಯ್ಯ 9 ದಿನಗಳ ಉಪವಾಸ ವ್ರತ ಆಚರಿಸಿದರು. ನಿನ್ನೆ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ಸಂಜೆ 5.46ಕ್ಕೆ ಬಿಲ್ಲನ್ನೇರುತ್ತಿದ್ದಂತೆ ಅಲ್ಲಿದ್ದವರೆಲ್ಲ ಒಂದು ಕ್ಷಣ ಮೌನವಾದರು. ಇದಾದ ಕೆಲವೇ ಕ್ಷಣಗಳಲ್ಲಿ ''ತುಂಬಿದ ಕೊಡ ತುಳುಕಿತಲೇ ಪರಾಕ್'' ಎಂದು ಕಾರ್ಣಿಕವನ್ನು ನುಡಿದು ಕೆಳಗೆ ಬಿದ್ದರು. ಈ ವೇಳೆ ಅವರನ್ನು ಗೊರವ ಸಮೂಹ ಎತ್ತಿ ಹಿಡಿದರು.
ಇದನ್ನೂ ಓದಿ:Valentine’s Day | ಗಂಡ-ಹೆಂಡತಿ ನಡುವಿನ ಕರಾರು ಪತ್ರದ Post Viral; ಇದನ್ನು ನೋಡಿದ ನೆಟ್ಟಿಗರು ಹೇಳಿದ್ದು ಹೀಗೆ..
ಇನ್ನು ''ತುಂಬಿದ ಕೊಡ ತುಳುಕಿತಲೇ ಪರಾಕ್'' ಎಂಬ ಅರ್ಥವನ್ನು ನೋಡುವುದಾರೆ, ನಾಡಿನಲ್ಲಿ ಮಳೆ ಬೆಳೆ ಸಮೃದ್ಧ ಆಗಲಿದೆ. ರೈತರ ಮುಖದಲ್ಲಿ ಇಮ್ನಷ್ಟು ಸಂತಸ ಮತ್ತು ರಾಜ್ಯ, ದೇಶದಲ್ಲಿ ಎಲ್ಲಾರ ವರ್ಗದ ಜನರಿಗೆ ಒಳ್ಳೆದಾಗಲಿದೆ ಎನ್ನಲಾಗಿದೆ.