ದುಷ್ಟಶಕ್ತಿಗಳ ದೂರವಿಡಲು ಮನೆಯಲ್ಲಿ ಕುಂಬಳಕಾಯಿ ನೇತು ಹಾಕುತ್ತಿದ್ದಿರಾ?: ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ.. | Pumpkins

dk - 2025-02-14T181201.938
Published on

Pumpkins: ಮನೆಗೆ ಮತ್ತು ಕುಟುಂಬಕ್ಕೆ ಒಳ್ಳೆಯದಾಗಲಿ ಮತ್ತು ಯಾವುದೇ ಕೆಟ್ಟ ಪರಿಸ್ಥಿತಿಗಳು ನಮಗೆ ಬರಬಾರದು ಎಂದು ಅಂದರೆ, ದುಷ್ಟಶಕ್ತಿಗಳ ದೂರವಿಡಲು ಮನೆಗಳಲ್ಲಿ ಕುಂಬಳಕಾಯಿ ಕಟ್ಟಿರುವುದನ್ನು ಮತ್ತು ನೇತಾಡುತ್ತಿರುವುದನ್ನು ಸಾಮಾನ್ಯವಾಗಿ ಗಮನಿಸಿರುತ್ತೇವೆ. ಹೀಗೆ ಕುಂಬಳಕಾಯಿ ಯಾವ ವಿಧಾನದಲ್ಲಿ ಕಟ್ಟುಬೇಕು ಮತ್ತು ಏನು ಮಾಡಬಾದರು ಎಂದು ತಿಳಿಯೋಣ..

ಕುಂಬಳಕಾಯಿಯಲ್ಲಿ ಎರಡು ವಿಧ. ಒಂದು ಅಡುಗೆಯಲ್ಲಿ ಬಳಸುವ ಕುಂಬಳಕಾಯಿ ಮತ್ತು ಪೂಜೆಗಳಿಗೆ ಬಳಸುವ ಬೂದು ಕುಂಬಳಕಾಯಿ. ಈ ಬೂದು ಕುಂಬಳಕಾಯಿ ಮನೆಯಲ್ಲಿ ಕಟ್ಟುವ ಮುಂಚೆ ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ ಪೂಜೆ ಮಾಡಿ ಮುಖ್ಯ ಬಾಗಿಲ ಬಳಿ ಕಟ್ಟುವುದರಿಂದ ಕೆಟ್ಟ ಪರಿಣಾಮಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಇದನ್ನು ಕಟ್ಟಬೇಕಾದರೆ ಏನೆಲ್ಲಾ ವಿಧಾನಗಳನ್ನು ಬಳಸಬೇಕು ಎಂದು ನೋಡೋಣ.

ಪೂಜೆ ಮಾಡುವ ವಿಧಾನ

ಹಲವರು ಬೂದು ಕುಂಬಳಕಾಯಿನ್ನು ಪೂಜೆ ಮಾಡುವ ಮುಂಚೆ ತೊಳೆಯುತ್ತಾರೆ. ಆದರೆ, ಅದನ್ನು ತೊಳೆಯಬಾರದು. ಒಂದು ವೇಳೆ ತೊಳೆದರೆ ಅದರ ಶಕ್ತಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ಕುಂಬಳಕಾಯಿಗೆ ನೇರವಾಗಿ ಹರಿಸಿಶಿಣ ಮತ್ತು ಕೇಸರಿ ಹಚ್ಚಬೇಕು. ಎರಡು ಕೈಯಿಂದ ಹಿಡಿದುಕೊಳ್ಳಬೇಕು. ಪೊರೆ ಹರಿದಿದ್ದರೆ ಅದರ ಶಕ್ತಿ ಕುಂದುತ್ತದೆ. ಟವೆಲ್​ನಿಂದ ಹುಜ್ಜಬಾರದು. ನೇರವಾಗಿ ಪೂಜೆಗಿಟ್ಟರೆ ಅದರ ಶಕ್ತಿ ಹಾಗೆ ಇರುತ್ತದೆ.

ಕುಂಬಳಕಾಯಿ ಕಟ್ಟುವ ಸೂಕ್ತ ಸಮಯ

ಅಮಾವಾಸ್ಯೆಯಂದು ಸೂರ್ಯೋದಯಕ್ಕೆ ಮೊದಲು ತೊಳೆಯುವುದು ಉತ್ತಮ. ಇದು ದುಷ್ಟಶಕ್ತಿಗಳನ್ನು ನಿವಾರಿಸುತ್ತದೆ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತದೆ. ಅಮಾವಾಸ್ಯೆ ಸಾಧ್ಯವಾಗದಿದ್ದರೆ, ಬುಧವಾರ ಅಥವಾ ಶನಿವಾರ ಸೂರ್ಯೋದಯಕ್ಕೆ ಮೊದಲು ಕಟ್ಟಬಹುದು.

ಕುಂಬಳಕಾಯಿ ಕಟ್ಟುವುದು ತುಂಬಾ ಸುಲಭ. ಕುಂಬಳಕಾಯಿಯನ್ನು ಒಂದು ತಟ್ಟೆಯಲ್ಲಿ ಇರಿಸಿ. ಅದಕ್ಕೆ ಅರಿಶಿನವನ್ನು ಹಚ್ಚಿ ಮತ್ತು ಕೇಸರಿ ಹನಿಗಳನ್ನು ಸೇರಿಸಿ. ಅದನ್ನು ಬುಟ್ಟಿಯಲ್ಲಿ ಇಟ್ಟು ಮನೆಯ ಮುಂದೆ ನೇತು ಹಾಕಬೇಕು. ಈ ನಿಯಮಗಳನ್ನು ಪಾಲಿಸುವ ಮೂಲಕ ಮತ್ತು ಸರಿಯಾದ ಸಮಯದಲ್ಲಿ ಕುಂಬಳಕಾಯಿಯನ್ನು ಕಟ್ಟುವ ಮೂಲಕ ನೀವು ದುಷ್ಟಶಕ್ತಿಗಳ ಪರಿಣಾಮಗಳನ್ನು ತೊಡೆದುಹಾಕಬಹುದು.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net