

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದೇಶದ ಸ್ವಾತಂತ್ರ್ಯ ಸಂಗ್ರಾಮ ದೇಶದ ಸರ್ವ ಜನರ ಐಕ್ಯತೆ ಸಂಕೇತವಾಗಿತ್ತು. ಅದರ ಹಿಂದೆ ರಾಷ್ಟ್ರ ಕಟ್ಟುವ ಉದ್ದೇಶವಿತ್ತು. ನಮ್ಮ ದೇಶದ ಬಹುವಿಧ ಸಂಸ್ಕೃತಿ, ಆರಾಧನಾಲಯ ಉಳಿಯಬೇಕು. ಆಸ್ತಿಕ ಪ್ರಧಾನವಾದ ಭಾರತದಲ್ಲಿ ಸೌಹಾರ್ದತೆ ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಡಾ.ಎಂ.ಎಸ್.ಎಂ .ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಹೇಳಿದರು.
ಹೊಸಂಗಡಿ ಗ್ರಾಮದ ಪುಲಾಬೆಯಲ್ಲಿ ನವೀಕೃತಗೊಂಡು ಉದ್ಘಾಟನೆಗೊಂಡ ಬದ್ರಿಯಾ ಮಸ್ಜಿದ್, ಮದರಸ ಪ್ರಯುಕ್ತ ನಡೆದ ಸರ್ವಧರ್ಮೀಯ ಸಂಗಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಶ್ರೀಕ್ಷೇತ್ರ ಪಡ್ಯಾರಬೆಟ್ಟದ ಧರ್ಮದರ್ಶಿ ಜೀವಂಧರ್ ಕುಮಾರ್ ಗೌರವ ಸ್ವೀಕರಿಸಿ ಮಾತನಾಡಿದರು.
ಸಮಾಜದ ಹಿರಿಯ ಮುತ್ಸದ್ದಿಗಳಾದ ವೀರಪ್ಪ ಮಡಿವಾಳ, ಆನಂದ ಕೋಟ್ಯಾನ್, ಕೃಷ್ಣಪ್ಪ ಪೂಜಾರಿ, ಸಂಜೀವ ಮೂಲ್ಯ, ಡಾ.ರಾಮಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.
ದ.ಕ., ಉಡುಪಿ ಜಿಲ್ಲಾ ಜಮೀಯತುಲ್ ಫಲಾಹ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಸಮಾರಂಭ ಉದ್ಘಾಟಿಸಿದರು. ಅಂಗರಕರಿಯ ಮಸೀದಿ ಅಧ್ಯಕ್ಷ ಹಾಜಿ ಜಿ.ಎಂ.ನಜೀಮುದ್ದೀನ್ ಅಧ್ಯಕ್ಷತೆ ವಹಿಸಿದ್ದರು.
ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಉದ್ಯಮಿ ಜಿ.ಎಂ.ಶಾಹುಲ್ ಹಮೀದ್ ಗುರುಪುರ, ಪೆರಿಂಜೆ ರಾಜ್ಯ ಗುತ್ತು ಜಯರಾಜ್ ಕಂಬಳಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ಧರಣೇಂದ್ರ ಕುಮಾರ್, ಕಾಶಿಪಟ್ಣ ಗ್ರಾಪಂ ಅಧ್ಯಕ್ಷ ಸತೀಶ್ ಕೆ.ಬಂಗೇರ, ಹೊಸಂಗಡಿ ಗ್ರಾಪಂ ಅಧ್ಯಕ್ಷ ಜಗದೀಶ್ ಹೆಗ್ಡೆ, ಹನೀಫ್ ಹಾಜಿ ಗೋಳ್ತಮಜಲು, ಪತ್ರಕರ್ತ ಎಚ್.ಮುಹಮ್ಮದ್ ವೇಣೂರು, ತಾ.ಮುಸ್ಲಿಂ ಒಕ್ಕೂಟ ಅಧ್ಯಕ್ಷ ಬಿ.ಎ.ನಝೀರ್, ಪೆರಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಸೀತಾರಾಮ್ ರೈ, ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ, ಗೌರವ ಅಧ್ಯಕ್ಷ ಖಾಲಿದ್ ಪುಲಾಬೆ, ಪೆರಾಡಿ ಸಹಕಾರಿ ಸಂಘ ಉಪಾಧ್ಯಕ್ಷ ಶ್ರೀಪತಿ ಉಪಾದ್ಯಾಯ, ಸತ್ಯ ಸಾರಮಣಿ ದೈವಸ್ಥಾನ ಕುರ್ಲೊಟ್ಟು ಅಧ್ಯಕ್ಷ ನಾಗೇಶ್ ಕುಮಾರ್ ಅಂಚನ್, ಹೊಸಂಗಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಮುಚ್ಚುರು ಗ್ರಾಪಂ ಕಾರ್ಯದರ್ಶಿ ಎಂ.ಕೆ.ಸತೀಶ್, ಪ್ರಮುಖರಾದ ಅಬ್ಬೊನು ಮದ್ದಡ್ಕ, ಶೇಕುಂಜ ಬೆಳ್ತಂಗಡಿ, ವಿದ್ಯಾನಂದ ಜೈನ್ ಎರ್ಮೋಡಿ, ವಿಠ್ಠಲ ಸಿ.ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ಆಡಳಿತ ಸಮಿತಿ ಅಧ್ಯಕ್ಷ ಎಚ್.ಆಲಿಯಬ್ಬ ಪುಲಾಬೆ ಸ್ವಾಗತಿಸಿದರು. ಪತ್ರಕರ್ತ ಅಶ್ರಫ್ ಆಲಿಕುಂಙ ಮುಂಡಾಜೆ ನಿರೂಪಿಸಿದರು. ಖಾಲಿದ್ ಪುಲಾಬೆ ವಂದಿಸಿದರು.