

ಭಾರತೀಯ ಸೇನೆಯು ಅಸಾಧಾರಣ ಭೂ ದಾಳಿ ಸಾಮರ್ಥ್ಯವನ್ನು ಹೊಂದಿರುವ AI ಆಧಾರಿತ MMG(ಮೀಡಿಯಮ್ ಮಶೀನ್ ಗನ್) ಅಭಿವೃದ್ಧಿ ಪಡಿಸಿದೆ. ಸೆಕೆಂಡರಿ ವಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು AI ಆಧಾರಿತ MMG ಗನ್ ತಯಾರಿಸಿದ ಮೊದಲ ರಾಷ್ಟ್ರ ನಮ್ಮ ಭಾರತವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ವಿಶ್ವದ ಮೊದಲ AI ಆಧಾರಿತ ಶಸ್ತ್ರಾಸ್ತ್ರವನ್ನ ಭಾರತೀಯ ಸೇನೆಯ ಕರ್ನಲ್ ಆಶಿಷ್ ಡೋಗ್ರಾ, ಬಾಂಬೆಯ ಐಐಟಿ ಪ್ರೊಫೆಸರ್ ಕುಲಕರ್ಣಿ, ಲೆಫ್ಟಿನೆಂಟ್ ಕರ್ನಲ್ ಪ್ರಶಾಂತ್ ಅಗರ್ವಾಲ್, ಜಮ್ಮು ಕಾಶ್ಮೀರದ MIET ಕಾಲೇಜಿನ ವಿದ್ಯಾರ್ಥಿಗಳು, ಮತ್ತು ಜಮ್ಮು- ಕಾಶ್ಮೀರದ 610 EME ಬೆಟಾಲಿಯನ್ನ ತಂತ್ರಜ್ಞರು ಈ ಕೃತಕ ಬುದ್ಧಿಮತೆ ಹೊಂದಿದ ವೆಪನ್ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.
ಸೆಕೆಂಡರಿ ವಿಷನ್ ತಂತ್ರಜ್ಞಾನ ಎಂದರೇನು?
ಸೆಕೆಂಡರಿ ವಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಗಡಿಯನ್ನ ದಾಟಲು ಮುಂದಾಗುವ ನುಸುಳುಕೋರರನ್ನ 2 ಕಿಲೋಮೀಟರ್ನಿಂದಲೂ ನಿಖರವಾಗಿ ಶೂಟ್ ಮಾಡಬಹುದಾದ ಸಾಮರ್ಥ್ಯ ಹೊಂದಿದ ತಂತ್ರಜ್ಞಾನವನ್ನು ಗನ್ಗನಲ್ಲಿ ಅಳ ವಡಿಸಲಾಗಿದೆ. ಇದು ರಿಯಲ್ ಟೈಮ್ನಲ್ಲಿ, ನುಸುಳುಕೋರರ ಚಲನ-ವಲನ ಪತ್ತೆ ಹಚ್ಚಲಿದೆ.
ಈ ತಂತ್ರಜ್ಞಾನ ಎಲ್ಲಿ ಬಳಸಲಾಗುತ್ತೆ?
ಇನ್ಫೆಂಟರಿ ಸೈನಿಕರು ಲೈನ್ ಆಫ್ ಕಂಟ್ರೋಲ್ನಲ್ಲಿ MMG ಗನ್ಗಳನ್ನ ಬಳಸುತ್ತಾರೆ.ಲೈನ್ ಆಫ್ ಕಂಟ್ರೋಲ್ನಲ್ಲಿ ಅತೀ ಹೆಚ್ಚು ಬೆಟ್ಟ- ಗುಡ್ಡಗಳಿರುವುದರಿಂದ ಭಾರತೀಯ ಸೇನೆಯ ಕಣ್ಣು ತಪ್ಪಿಸಿ ಉಗ್ರರು ಒಳ ನುಸುಳುತ್ತಾರೆ. ಹೆಚ್ಚು ಪೊದೆ, ಬೆಟ್ಟ-ಗುಡ್ಡಗಳಿರೋದ್ರಿಂದ ಅಲ್ಲಿ ಉಗ್ರರ ಪ್ರತಿಯೊಂದು ಹೆಜ್ಜೆ ಅಥವಾ ಚಲನ-ವಲನವನ್ನ ಪತ್ತೆ ಹಚ್ಚೋದು ಕಷ್ಟ ಸಾಧ್ಯ. ಆದ್ದರಿಂದ ಅಂತಹ ಜಾಗಗಳಲ್ಲಿ ಈ AI ವೆಪನ್ ಸಿಸ್ಟಮ್ ಅಳವಡಿಸಲಾಗುತ್ತೆ. ಪ್ರಮುಖವಾಗಿ ಕ್ಯಾಮೆರಾಗಳನ್ನ ಎತ್ತರದ ಜಾಗದ ಎಲ್ಲಾ ದಿಕ್ಕುಗಳಲ್ಲಿ ಅಳವಡಿಸಲಾಗುತ್ತದೆ.
ಹೀಗೆ ಅಳವಡಿಸಿದ AI ವೆಪನ್ ಸಿಸ್ಟಮ್ ಗಡಿಯೊಳಗೆ ನುಸುಳುವ ಉಗ್ರರ ನಿಖರ ಮಾಹಿತಿಯನ್ನು ನೀಡಲಿದೆ. ಕ್ಯಾಮೆರಾ MMG ಗನ್ ಎರಡರಲ್ಲೂ AI ತಂತ್ರಜ್ಞಾನವನ್ನ ಅಳವಡಿಸಲಾಗಿರುತ್ತೆ. ಆದ್ದರಿಂದ ಕ್ಯಾಮೆರಾಗಳಿಗೆ ಅಳವಡಿಸಲಾದ AI ತಂತ್ರಜ್ಞಾನ ಸೆರೆ ಸಿಕ್ಕ ಉಗ್ರರರನ್ನ ಶೂಟ್ ಮಾಡುವಂತೆ MMG ಗನ್ಗೆ ಸೂಚಿಸಲಿದೆ. ಇದರಿಂದ ನುಸುಳುಕೋರರನ್ನ ಬಹಳ ಸುಲಭವಾಗಿ ಸೆದೆ ಬಡಿಯಬಹುದು.
ಭಾರತೀಯ ಸೇನೆಗೆ ಪೂರೈಕೆಯಾಗಲಿದೆ AI ಆಧಾರಿತ MMG ಗನ್..!
ಬೆಂಗಳೂರಿನಲ್ಲಿ ನಡೆದ ಏರ್ ಶೋನಲ್ಲಿ AI ಆಧಾರಿತ MMG ಗನ್ ಪ್ರದರ್ಶನಕ್ಕೆ ಇಡಲಾಗಿತ್ತು, ಸದ್ಯ ಭಾರತೀಯ ಸೇನೆ ಇದನ್ನ ಹೆಚ್ಚಿನ ಸಂಖ್ಯೆಯಲ್ಲಿ ತಯಾರು ಮಾಡಲು ಆದೇಶಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲೂ AI ಆಧಾರಿತ MMG ಗನ್ಗೆ ಮೆಚ್ಚುಗೆ..!
ಯುಎಸ್, ಇಸ್ರೇಲ್ ಮತ್ತು ಫ್ರಾನ್ಸ್ನ ಅಧಿಕಾರಿಗಳು ಬೆಂಗಳೂರಿನ ಏರ್ ಶೋನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ AI ಆಧಾರಿತ MMG ಗನ್ನ ನಿಖರತೆ, ಮತ್ತು ಶತ್ರುಗಳ ಹೊಡೆದುರುಳಿಸುವ ಸಾಮರ್ಥ್ಯವನ್ನ ಕಂಡು ಆಶ್ಚರ್ಯ ಚಕಿತರಾಗಿದ್ದಾರೆ .ಮೀಡಿಯಮ್ ಮಶೀನ್ ಗನ್ 2 ಕಿಲೋಮೀಟರ್ನವರೆಗೂ ನಿಖರವಾಗಿ ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.