ಪೇಪರ್ ಕಟ್ಟರ್ 
ನ್ಯೂಸ್

ಬೆಂಚಿನ ಮೇಲೆ ಕಾಲಿಟ್ಟರು ಎಂದು ಪೇಪರ್​ ಕಟ್ಟರ್​ನಲ್ಲಿ ಗಾಯಗೊಳಿಸಿದ ವಿದ್ಯಾರ್ಥಿ!

ಮುಂಬೈ: ಈ ನಾಲ್ವರಲ್ಲಿ ಒಬ್ಬರು ಈತ ಕೂತಿದ್ದ ಬೆಂಚಿನ ಮೇಲೆ ಕಾಲಿಟ್ಟ ಎಂದು ಜಗಳವಾಡಿದ್ದಾನೆ. ಈ ಸಂದರ್ಭ ಆತ, ಪೇಪರ್​ ಕಟ್ಟರ್​ ಬಳಸಿ ನಾಲ್ವರನ್ನು ಗಾಯಗೊಳಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ನಡೆದದ್ದು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ.

ಮುಂಬೈನ ಕಾಂದಿವಲಿಯ ಠಾಕೂರ್ ಕಾಲೇಜಿನ ಹೊರಗೆ ಶುಕ್ರವಾರ ಸಂಜೆ ಪೇಪರ್ ಕಟ್ಟರ್‌ನಿಂದ ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎರಡನೇ ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿದ್ದಾರೆ.

ಗಾಯಾಳುಗಳಲ್ಲಿ ಒಬ್ಬ ಬೆಂಚ್ ಮೇಲೆ ಕಾಲು ಹಾಕಿದ ನಂತರ ಜಗಳ ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಧ್ಯಾಪಕರೊಬ್ಬರು ವಾದವನ್ನು ಪರಿಹರಿಸಿದರೂ, ಅವರು ಈ ವಿಚಾರವನ್ನು ಕ್ಯಾಂಪಸ್‌ನ ಹೊರಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಜಗಳವಾಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಗಾಯಗೊಂಡಿರುವ ವಿದ್ಯಾರ್ಥಿಗಳ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಅವರೆಲ್ಲರೂ 18-20 ವರ್ಷ ವಯಸ್ಸಿನವರಾಗಿದ್ದು, ಅವರ ಗುರುತನ್ನು ಪೊಲೀಸರು ರಕ್ಷಿಸಿದ್ದಾರೆ.  (ಏಜೆನ್ಸೀಸ್​)