ಮುಂಬೈ: ಗುಜರಾತ್ ಸ್ಟೇಟ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (Gujarat State Financial Services Ltd.) ಗುಜರಾತ್ ಸರ್ಕಾರದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದನ್ನು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿ ಆರ್‌ಬಿಐನಲ್ಲಿ ನೋಂದಾಯಿಸಲಾಗಿದೆ. ಕಳೆದ 3 ವರ್ಷಗಳಲ್ಲಿ ಈ ಷೇರು ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ.
ಷೇರು ಮಾರುಕಟ್ಟೆಯಲ್ಲಿ ಅನೇಕ ಪೆನ್ನಿ ಸ್ಟಾಕ್‌ಗಳಿವೆ. ಅಂದರೆ, ಕಡಿಮೆ ಬೆಲೆಯ ಷೇರುಗಳು. ಇಂತಹ ಒಂದು ಪೆನ್ನಿ ಸ್ಟಾಕ್ ಗುಜರಾತ್ ಸ್ಟೇಟ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ಆಗಿದೆ. ಕಳೆದ ಮೂರು ವರ್ಷಗಳಲ್ಲಿ ಹೂಡಿಕೆದಾರರಿಗೆ ಈ ಷೇರು ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ. ಫೆಬ್ರವರಿ 2021 ರಲ್ಲಿ ಈ ಷೇರಿನ ಬೆಲೆ 3 ರೂಪಾಯಿ ಆಗಿತ್ತು, ಅದು ಈಗ 40 ರೂಪಾಯಿಯ ಮಟ್ಟ ತಲುಪಿದೆ. 3 ರೂಪಾಯಿ ಬೆಲೆ ಇದ್ದಾಗ ಹೂಡಿಕೆ ಮಾಡಿದವರು ಶೇ. 1232ರಷ್ಟು ಲಾಭ ಪಡೆದಿದ್ದಾರೆ. ಅಂದರೆ, ಈ ಷೇರಿನಲ್ಲಿ ಆಗ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಈಗ ಅದು 13.32 ಲಕ್ಷ ರೂಪಾಯಿಗೆ ಆಗುತ್ತಿತ್ತು.
ಗುಜರಾಟ್ ಸ್ಟೇಟ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (GSFS) ಗುಜರಾತ್ ಸರ್ಕಾರದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿ ಆರ್‌ಬಿಐನಲ್ಲಿ ನೋಂದಾಯಿಸಲ್ಪಟ್ಟಿದೆ. ರಾಜ್ಯದ ವಿವಿಧ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಹೆಚ್ಚುವರಿ ಹಣವನ್ನು ನಿರ್ವಹಿಸುವ ಅಧಿಕಾರವನ್ನು ಇದು ಹೊಂದಿದೆ. ಈ ಕಂಪನಿಯು 1960 ರಲ್ಲಿ ಸ್ಥಾಪನೆಯಾಯಿತು. ಗುಜರಾತ್ನ ಗಾಂಧಿ ನಗರದಲ್ಲಿ ಪ್ರಧಾನ ಕಚೇರಿ ಇದೆ.
ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರ, ಫೆ. 6ರಂದು ಈ ಷೇರಿನ ಬೆಲೆ 52 ವಾರದ ಗರಿಷ್ಠ ಮಟ್ಟವಾದ 39.96 ರೂಪಾಯಿ ತಲುಪಿತು. ಏಪ್ರಿಲ್ 5, 2023 ರಂದು, ಈ ಷೇರು 52 ವಾರದ ಕನಿಷ್ಠ ಬೆಲೆ 5.80 ರೂಪಾಯಿಗೆ ತಲುಪಿತ್ತು. ಈ ಷೇರು ಡಿಸೆಂಬರ್ 2023 ರಲ್ಲಿ ಅಂದಾಜು 96 ಪ್ರತಿಶತದಷ್ಟು ಮತ್ತು ನವೆಂಬರ್‌ನಲ್ಲಿ 64 ಪ್ರತಿಶತದಷ್ಟು ಹೆಚ್ಚಾಗಿದೆ.
ಐಸಿಐಸಿಐ ಡೈರೆಕ್ಟ್ ಬ್ರೋಕರೇಜ್ ಸಂಸ್ಥೆಯ ಪ್ರಕಾರ, ಈ ಸರ್ಕಾರಿ ಕಂಪನಿಯ ಷೇರುಗಳು ಬಲವಾದ ಏರಿಕೆ ಕಂಡಿವೆ. ಇದು ಪ್ರತಿ ಷೇರಿಗೆ ಗಳಿಕೆಯಲ್ಲಿ ಬೆಳವಣಿಗೆಯೊಂದಿಗೆ ಆಸ್ತಿ ನಿರ್ವಹಣೆಯಲ್ಲಿ ಸಮರ್ಥವಾಗಿದೆ. ಗಳಿಕೆಗೆ ಹೋಲಿಸಿದರೆ ಹೆಚ್ಚಿನ ಬಡ್ಡಿ ಪಾವತಿ, ನಗದು ಹರಿವು ಇತ್ಯಾದಿಗಳಿಂದ ಸಮಸ್ಯೆಗಳು ಕೂಡ ಈ ಕಂಪನಿಯಲ್ಲಿವೆ ಎಂದು ಬ್ರೋಕರೇಜ್ ಹೇಳಿದೆ.