ದೇವಸ್ಥಾನಗಳ ಹುಂಡಿ ಹಣ, ಚಿನ್ನಾಭರಣಗಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಹೊಸ SOP 
ರಾಜ್ಯ

ದೇವಸ್ಥಾನದ ದೇಣಿಗೆಗೆ ಹೈಟೆಕ್​ ಸೆಕ್ಯೂರಿಟಿ: ಸಿಸಿಟಿವಿ ಕಡ್ಡಾಯ, QR ಕೋಡ್​ ಅಳವಡಿಕೆ; ಕರ್ನಾಟಕ ಸರ್ಕಾರದಿಂದ ಮುಜರಾಯಿ ದೇಗುಲಗಳಿಗೆ SOP ಜಾರಿ! Karnataka Government on Temples

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನಗಳ ಹುಂಡಿ ಹಣ, ಚಿನ್ನಾಭರಣಗಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಹೊಸ SOP
  • ಸಿಸಿಟಿವಿ, ವೆಬ್ ಕ್ಯಾಮ್ ಹಾಗೂ ಕ್ಯೂಆರ್ ಕೋಡ್ ಅಳವಡಿಕೆ ಕಡ್ಡಾಯ ಮಾಡಿದ ರಾಜ್ಯ ಸರ್ಕಾರ
  • ದೇವಸ್ಥಾನದ ಕಾಣಿಕೆ ಕಳ್ಳತನಕ್ಕೆ ಬೀಳಲಿದೆ ಬ್ರೇಕ್!
ಬೆಂಗಳೂರು: ಸರ್ಕಾರದ ಹಿಡಿತದಲ್ಲಿರುವ ದೇವಸ್ಥಾನಗಳ ಹುಂಡಿ ನಗದು, ಚಿನ್ನ-ಬೆಳ್ಳಿ, ದೇಗುಲದ ಭದ್ರತೆ ಜೊತೆಗೆ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ಕರ್ನಾಟಕ ಸರ್ಕಾರ (Karnataka Government on Temples) SOP ಅನ್ನು ಪ್ರಕಟಿಸಿದೆ.
ಮುಜರಾಯಿ ಇಲಾಖೆ ಹೊರಡಿಸಿರುವ ಈ ಪ್ರಕಟನೆಯಲ್ಲಿ ದೇವಸ್ಥಾನಗಳಲ್ಲಿ ಸಿಸಿಟಿವಿ ಕ್ತಾಮರಾ ಹಾಗೂ ವೆಬ್​ ಕ್ತಾಮರಾ ಕಡ್ಡಾಯ ಅಳವಡಿಕೆ QR ಕೋಡ್​ ಹೊಂದಿರುವ ದೇಣಿಗೆ ಸೇರಿದಂತೆ ಹತ್ತು ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ದೇಶದ ಬೇರೆ-ಬೇರೆ ದೇವಸ್ಥಾನಗಳಲ್ಲಿ ಇತ್ತೀಚೆಗೆ ದೇಣಿಗೆಗೆ ಸಂಬಂಧಿಸಿದಂತೆ ಅಪರಾಧಗಳು ದಾಖಲಾಗುತ್ತಿರುವ ಹಿನ್ನಲೆ ಈ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಸಿಸಿಟಿವಿ ಕಡ್ಡಾಯ!

ಪ್ರಕಟನೆಯಲ್ಲಿ ನಮೂದಿಸಿರುವಂತೆ ದೇವಸ್ಥಾನದಲ್ಲಿ ಹುಂಡಿಯನ್ನು ಎಲ್ಲರಿಗೂ ಕಾಣುವಂತ ಸ್ಥಳದಲ್ಲಿ ಇಡಬೇಕು. ಈ ಹುಂಡಿಯನ್ನು ಸಿಸಿಟಿವಿ ಕ್ತಾಮರಾ ಅಥವಾ ವೆಬ್​ ಕ್ಯಾಮರಾಗಳು ನಾಲ್ಕು ದಿಕ್ಕಿನಿಂದ ನಿಗಾ ವಹಿಸಬೇಕು. ಈ ಕ್ಯಾಮರಾಗಳ ಪುಟೇಜ್​ಗಳನ್ನು ಜಿಲ್ಲಾಧಿಕಾರಿ ಅಥವಾ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿರುವ ಮುಜರಾಯಿ ವಿಭಾಗದಲ್ಲಿ ಮೊನಿಟರ್​ ಮಾಡಬೇಕು.
ಇದಾಗಲೇ ದೇವಸ್ತಾನಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಪುಟೇಜ್​ಗಳ ಕಳ್ಳತನ, ಕರ್ಪೂರದ ಹೊಗೆಯಿಂದ ಕ್ಯಾಮರಾ ಕೆಲಸಮಾಡದಂತೆ ಮಾಡದಿರಲು ವೆಬ್​ ಕ್ಯಾಮ್​ ಅನ್ನು ಫಿಟ್​ ಮಾಡುವುದು. ಹಾಗೆಯೇ ಈ ಸಿಸಿಟಿವಿ ಪುಟೇಜ್​ ವೀಕ್ಷಣೆ ಮಾಡಲು, ಪೊಲೀಸ್​ಠಾಣೆಯಲ್ಲಿ, ಸಂಚಾರ ವಿಭಾಗದಲ್ಲಿರುವಂತೆ ವೀಕ್ಷಣಾ ಕೊಠಡಿಯನ್ನು ನಿರ್ಮಿಸಬೇಕು.

ಕ್ಯಾಶ್​ ಲೆಸ್​ ದೇಣಿಗೆಗೆ ಪ್ರೋತ್ಸಾಹ!

ಸಿಸಿಟಿವಿ ಕ್ಯಾಮರಾ ನೀತಿಯ ಜೊತೆಗೆ, ಭಕ್ತಾದಿಗಳು ದೇವಸ್ಥಾನಕ್ಕೆ ದೇಣಿಗೆ/ಕಾಣಿಕೆಗೆಂದು ನಗದನ್ನು ತಂದಾಗ ಕಳ್ಳತನ ನಡೆದಿರುವುದನ್ನು ಗಮನದಲ್ಲಿಟ್ಟುಕೊಂಡು, QR ಕೋಡ್​ ಅನ್ನು ಅಳವಡಿಸಲು ಇಲಾಖಾ ಮಾರ್ಗಸೂಚಿ ತಿಳಿಸಿದೆ. ಲಗತ್ತಿಸಲಾಗುವ QR ಕೋಡ್​ ನಲ್ಲಿ ದೇವಸ್ಥಾನದ ಬ್ಯಾಂಕ್​ ಖಾತೆ ಸಂಖ್ಯೆ ಹಾಗೂ IFSC ಕೋಡ್​ ಅನ್ನು ನಮೂದಿಸಬೇಕೆಂದು ಹೇಳಲಾಗಿದೆ.
ಹುಂಡಿ ಸೇರಿರುವ ಕಾಣಿಕೆಗಳನ್ನು ಎಣಿಕೆ ಮಾಡಲು ನಿಗಧಿತ ದಿನಾಂಕವನ್ನು ಮುಂಚಿತವಾಗಿಯೇ ಕ್ಯಾಲೆಂಡರ್​ನಲ್ಲಿ ನಮೂದಿಸಬೇಕು. ಹುಂಡಿ ಎಣೆಕೆಯನ್ನು ತಹಶೀಲ್ದಾರ್​ ಅವರ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಹಾಗೆಯೇ ಹುಂಡಿ ಹಣ, ಚಿನ್ನಾಭರಣ ಎಲ್ಲದರ ಎಣಿಕೆ ಮಾಡುವ ಪ್ರಕ್ರಿಯೆಯನ್ನು ವಿಡಿಗೋಗ್ರಾಫಿ ಮಾಡಬೇಕೆಂದು ಹೇಳಲಾಗಿದೆ.

ಪೊಲೀಸ್​ ಮೇಲ್ವಿಚಾರಣೆ

ಸ್ಥಳೀಯ ಕಂದಾಯ ಇಲಾಖೆಯವರು, ಮುಜರಾಯಿ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸ್​ ಅಧಿಕಾರಿಗಳು ಕನಿಷ್ಟ 15 ದಿನಗಳಿಗೊಮ್ಮೆ ದೇವಸ್ತಾನಕ್ಕೆ ಬೇಟಿ ನೀಡಿ ಅಲ್ಲಿ ಸರ್ಕಾರ ಸೂಚಿಸಿರುವ ಎಲ್ಲಾ ನಿಯಮಾವಳಿಗಳು ಪಾಲನೆ ಆಗುತ್ತಿದೆಯೇ ಎಂದು ಖಾತರಿ ಪಡಿಸಿಕೊಳ್ಳಬೇಕು.
ಎ ಮತ್ತು ಬಿ ಶ್ರೇಣಿಯಲ್ಲಿರುವ ದೇವಸ್ಥಾನಗಳಿಗೆ ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್​ ವರಿಷ್ಠಾಧಿಕಾರಿಗಳು ಬೇಟಿ ಜಂಟಿಯಾಗಿ ಭೇಟಿ ನೀಡಿ, ಎಲ್ಲಾ ವ್ಯವಸ್ಥೆಗಳು ಮಾರ್ಗಸೂಚಿಗಳನ್ನಯ ಸುವವಸ್ಥಿತ ರೀತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು ಹಾಗೂ ನ್ಯೂನತೆಗಳಿದ್ದಲ್ಲಿ ಕೂಡಲೇ ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು.
ಜಿಲ್ಲಾ ಮಟ್ಟದ ಸಮಿತಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ರಚಿಸಿ, ಸದರಿ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ/ ಪೊಲೀಸ್ ಆಯುಕ್ತರು, ಮುಜರಾಯಿ ಇಲಾಖೆಯ ಸ್ಥಳೀಯ ಅಧಿಕಾರಿಗಳು, ಮುಖ್ಯ ಅಗ್ನಿಶಾಮಕ ಅಧಿಕಾರಿ/ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪ್ರತಿನಿಧಿ ಮತ್ತು ಅಗತ್ಯವೆಂದು ಪರಿಗಣಿಸಬಹುದಾದ ಇತರೆ ಅಧಿಕಾರಿಗಳು ಇರತಕ್ಕದ್ದು. ಸಮಿತಿಯು ಪ್ರತಿ ತಿಂಗಳು ಕನಿಷ್ಠ ಒಮ್ಮೆ ಸಭೆ ಸೇರಿ ಸರ್ಕಾರದ ಆದೇಶ ಪಾಲನೆ ಆಗುತ್ತಿದೆಯೇ ಎಂದು ಚರ್ಚಿಸಬೇಕು.
ಜಿಲ್ಲಾಧಿಕಾರಿಗಳು, ಅನುಷ್ಠಾನದ ಹಂತ, ಗಮನಿಸಿದ ನ್ಯೂನತೆಗಳು, ನ್ಯೂನತೆಗಳನ್ನು ಸರಿಪಡಿಸಲು ತೆಗೆದುಕೊಂಡ ಕ್ರಮಗಳು ಮತ್ತು ಕ್ರಿಯಾ ಯೋಜನೆ ಅಂಶಗಳನ್ನು ಸೂಚಿಸುವ ಕ್ರೋಢೀಕೃತ ಮಾಸಿಕ ಅನುಸರಣಾ ಮತ್ತು ಪರಿಶೀಲನಾ ವರದಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಿ, ಅದರ ಪ್ರತಿಯನ್ನು ಒಳಾಡಳಿತ ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ ಸಲ್ಲಿಸಬೇಕು.