ನ್ಯೂಸ್

ದೆಹಲಿಯಿಂದ ಗೋವಾಕ್ಕೆ ಹಾರಿದ ಸೋನಿಯಾ, ರಾಹುಲ್​; ಕಾರಣವೇನು ಗೊತ್ತಾ?

ನವದೆಹಲಿ: ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆಕೆಯ ಪುತ್ರ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಗುರುವಾರ ದೆಹಲಿಯಿಂದ ಗೋವಾಕ್ಕೆ ತೆರಳಿದ್ದಾರೆ. ಕೆಲ ದಿನಗಳ ಕಾಲ ಅವರಿಬ್ಬರು ಗೋವಾದಲ್ಲಿಯೇ ಇರಲಿದ್ದಾರೆ ಎನ್ನಲಾಗಿದೆ.

ಸೋನಿಯಾ ಗಾಂಧಿ ಅವರು ಕೆಲ ತಿಂಗಳಿನಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶ್ವಾಸಕೋಶದಲ್ಲಿ ಇನ್​ಫೆಕ್ಷನ್​ ಆಗಿರುವುದಾಗಿ ತಿಳಿಸಲಾಗಿದೆ. ಅವರಿರುವ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ದಿನೇದಿನೆ ಹೆಚ್ಚುತ್ತಿದೆ. ಹೀಗಿರುವಾಗ ಅವರು ಅಲ್ಲೇ ಉಳಿದರೆ, ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅದೇ ಹಿನ್ನೆಲೆಯಲ್ಲಿ ಅವರು ದೆಹಲಿಯಿಂದ ಗೋವಾಕ್ಕೆ ತೆರಳಿದ್ದಾರೆ. ಗೋವಾದ ಸೌತ್​ ಗೋವಾ ರೆಸಾರ್ಟ್​ನಲ್ಲಿ ವಾಸ ಹೂಡಿದ್ದಾರೆ. ವಾಯು ಮಾಲಿನ್ಯ ಪ್ರಮಾಣ ತಗ್ಗುವವರೆಗೂ ಅವರು ದೆಹಲಿಗೆ ಮರಳುವುದಿಲ್ಲ ಎಂದು ಕೆಲ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)