ನ್ಯೂಸ್

ಸಾಹಸಸಿಂಹ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳು: ಮಾಗಡಿ ರಸ್ತೆಯಲ್ಲಿ ಕೃತ್ಯ

ಬೆಂಗಳೂರು: ಇತ್ತೀಚೆಗಷ್ಟೇ ತೆಲಗು ಚಿತ್ರರಂಗದ ಹಿರಿಯ ನಟ ವಿಜಯ್​ ರಂಗರಾಜು, ಸಾಹಸಿಂಹ ವಿಷ್ಣುವರ್ಧನ್​ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಕನ್ನಡಿಗರು ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿ ಕ್ಷಮೆಯಾಚಿಸಿದರು.

ವಿಷ್ಣುಗೆ ತೆಲುಗು ನಟ ಮಾಡಿದ ಅಪಮಾನ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ವಿಷ್ಣು ಅಭಿಮಾನಿಗಳ ಮನ ನೋಯಿಸುವ ಮತ್ತೊಂದು ಘಟನೆ ನಡೆದಿದೆ.

ಮಾಗಡಿರಸ್ತೆಯ ಟೋಲ್​ಗೇಟ್ ಬಳಿಯಿರುವ ಡಾ. ವಿಷ್ಣುವರ್ದನ್ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ ವಿಕೃತಿ ಮೆರೆದಿದ್ದಾರೆ. ಎರಡನೇ ಭಾರೀ ಇಂಥ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಪ್ರತಮೆಯನ್ನೇ ಎತ್ತೊಯ್ದಿದ್ದರಂತೆ.

ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾರ್ವಜನಿಕರ ಹಾಗೂ ವಿಷ್ಣು ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಕುತಂತ್ರ ನಂಬದಿರಿ: ಅನ್ನದಾತರಿಗಾಗಿ ವಿಪಕ್ಷ ಏನನ್ನೂ ಮಾಡಿಲ್ಲ; ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ