More

    ಶೂಟಿಂಗ್​ ಬಿಡುವಿನ ವೇಳೆ ಸ್ನಾನಕ್ಕೆಂದು ಹೋದ ಮಲಯಾಳಂ ಖ್ಯಾತ ನಟ ದುರಂತ ಸಾವು!

    ಕೊಚ್ಚಿ: ಮಲಯಾಳಂನ ಖ್ಯಾತ ನಟ ಅನಿಲ್ ನೆಡುಮಂಗಾಡ್,​ ಡ್ಯಾಂ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿರುವ ಘಟನೆ ಶುಕ್ರವಾರ ನಡೆದಿದೆ. ಕೇರಳದ ತೊಡುಪುಳದಲ್ಲಿರುವ ಮಲಂಕರ ಡ್ಯಾಂನಲ್ಲಿ ಸ್ನಾನಕ್ಕೆಂದು ಸ್ನೇಹಿತರೊಟ್ಟಿಗೆ ತೆರಳಿದ್ದಾಗ ಅವಘಡ ಸಂಭವಿಸಿದೆ.

    ಅಯ್ಯಪನುಮ್​ ಕೋಶಿಯುಮ್​, ಕಮಟ್ಟಿಪಾದಮ್​ ಮತ್ತು ಪಾವಡ ಸೇರಿದಂತೆ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತರಾಗಿದ್ದ ಅನಿಲ್ ನೆಡುಮಂಗಾಡ್​, ತಮ್ಮ ಮುಂದಿನ ಜೊಜು ಜಾರ್ಜ್​ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಚಿತ್ರದ ಶೂಟಿಂಗ್​ ತೊಡುಪುಳದಲ್ಲಿ ನಡೆಯುತ್ತಿತ್ತು. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಡ್ಯಾಂಗೆ ತೆರಳಿದ್ದರು. ಸ್ನಾನ ಮಾಡುವಾಗ ನೀರಿನ ಹರಿವು ಹೆಚ್ಚಾಗಿ ಅನಿಲ್​ ನೀರುಪಾಲಾಗಿದ್ದಾರೆ.

    ಇದನ್ನೂ ಓದಿ: ಇಂಥಾ ಕಳ್ಳನನ್ನು ನೀವು ನೋಡಿರುವುದಕ್ಕೆ ಸಾಧ್ಯನೇ ಇಲ್ಲ: ಈತನ ಕತೆ ಕೇಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!

    ಆ್ಯಂಕರ್​ ಮತ್ತು ನಿರ್ಮಾಪಕನಾಗಿ ಆರಂಭದಲ್ಲಿ ಹೆಸರು ಮಾಡಿದ್ದ ಅನಿಲ್​, 2014ರಲ್ಲಿ ಜಾನ್​ ಸ್ಟೀವ್​ ಲೋಪೆಜ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.​ ಬಳಿಕ ಪಾವಡ ಪಾದಮ್​, ಕಿಸ್ಮತ್​ ಪರೋಲ್​ ಮತ್ತು ಅಯ್ಯಪ್ಪನುಮ್​ ಕೋಶಿಯುಮ್​ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಒಳ್ಳೆಯ ಹೆಸರು ಗಳಿಸಿದ್ದರು. ಅನಿಲ್​, ಕೊನೆಯದಾಗಿ ಪಾಪಮ್​ ಚೆಯ್ಯಥಾವರ್​ ಕಲ್ಲೇರಿಯತ್ತೆ ಚಿತ್ರದಲ್ಲಿ ನಟಿಸಿದ್ದು, ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು.

    ಅನಿಲ್​ ಸಾವಿಗೆ ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!

    ಮಗಳು ಸ್ನಾನ ಮಾಡುವುದನ್ನು 3 ವರ್ಷದಿಂದ ಕದ್ದು ವಿಡಿಯೋ ಮಾಡ್ತಿದ್ದ ತಂದೆ! ಮಗಳ ಕೈಗೆ ಸಿಕ್ಕಿಬಿದ್ದಿದ್ಹೇಗೆ?

    ಕ್ಯಾನ್ಸರ್​ ರೋಗಿಗೆ ಅದ್ಧೂರಿ ಮದುವೆ! ಮದುವೆಯಾದ ಕೆಲವೇ ದಿನಗಳಲ್ಲಿ ಬಯಲಾಯಿತು ರೋಗಿಯ ನಿಜ ಬಣ್ಣ

    ಪ್ರೇಯಸಿಯ ಮಗನನ್ನು ಕೊಂದು ಕೊಳದಲ್ಲಿ ಹೂತಿಟ್ಟ; ಮೃತ ದೇಹಕ್ಕೆ ಮೂರು ದಿನ ಚಿತ್ರಹಿಂಸೆ ನೀಡಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts