ನ್ಯೂಸ್

ಅಮಾವಾಸ್ಯೆಯಂದೇ ಸಂಭವಿಸಲಿದೆ ಸೂರ್ಯಗ್ರಹಣ; ಪೂರ್ವಜರಿಗೆ ಸಲ್ಲಿಸುವ ಪೂಜೆಯಲ್ಲಿ ಬದಲಾವಣೆಯಾಗುತ್ತಾ| solar eclipse

solar eclipse ; ಈ ತಿಂಗಳ ಪಿತೃ ಪಕ್ಷದ ದಿನವಾದ ಅಮವಾಸ್ಯೆಯಂದೇ ಸೂರ್ಯಗ್ರಹಣ ಸಂಭವಿಸಲಿದೆ. ಈ ಅಮವಾಸ್ಯೆಯಂದು ಜನರು ತಮ್ಮ ಪೂರ್ವಜರಿಗೆ ಶ್ರಾದ್ಧ ಮತ್ತು ತರ್ಪಣ ಮಾಡುವ ಜೊತೆಗೆ ದಾನಗಳನ್ನು ಸಹ ಮಾಡುತ್ತಾರೆ. ಇದರಿಂದ ಪೂರ್ವಜರ ಪಾಪಗಳನ್ನು ತೆಗೆದುಹಾಕಿ, ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತಂದುಕೊಳ್ಳಬಹುದು ಎಂದು ಹಿಂದಿನಿಂದಲೂ ಸಹ ನಂಬಲಾಗಿದೆ. ಇನ್ನೂ ಈ ಬಾರಿ ಇದೇ ದಿನ ಸೂರ್ಯಗ್ರಹಣ ಸಂಭವಿಸುವುದರಿಂದ ಶ್ರಾದ್ಧದ ನಿಯಮಗಳು ಬದಲಾವಣೆಯಾಗುತ್ತಾ ಎಂಬುದನ್ನು ತಿಳಿಯೋಣ.

ಸೆಪ್ಟೆಂಬರ್ 21 ರಂದು ಸೂರ್ಯಗ್ರಹಣವು ರಾತ್ರಿ 10:59 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 22 ಸೋಮವಾರ ಬೆಳಗ್ಗೆ 3:23 ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯಗ್ರಹಣದ ಸೂತಕ ಅವಧಿಯು ಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಹಾಗಾಗಿ ಸೂತಕ ಅವಧಿಯು ಅಮಾವಾಸ್ಯೆಯಂದು ಬೆಳಗ್ಗೆ 10:59 ಕ್ಕೆ ಪ್ರಾರಂಭವಾಗಬೇಕು, ಆದರೆ ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಹಿನ್ನೆಲೆ ಸೂರ್ಯಗ್ರಹಣದ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ ಎಂದು ಹೇಳಲಾಗಿದೆ.

ಈ ವರ್ಷದ ಎರಡನೇ ಸೂರ್ಯಗ್ರಹಣ ಇದಾಗಿದ್ದು, ವೈಜ್ಞಾನಿಕ ಮತ್ತು ಜ್ಯೋತಿಷ್ಯ ದೃಷ್ಟಿಕೋನದಿಂದ ಇದಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಮಾರ್ಚ್‌ನಲ್ಲಿ ಸಂಭವಿಸಿತ್ತು ಇದೀಗ ಎರಡನೇ ಸೂರ್ಯಗ್ರಹಣ ಇದೇ ಸೆಪ್ಟೆಂಬರ್ 21 ರಂದು ಸಂಭವಿಸಲಿದೆ. ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ನಡೆದರೆ, ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21 ರಂದು ಸಂಭವಿಸಲಿದೆ.

(ಏಜೆನ್ಸೀಸ್)

ಈ ಗ್ರಹಣವು ಶ್ರಾದ್ಧ ವಿಧಿಗಳಿಗೆ ಅಡ್ಡಿಯಾಗುವುದಿಲ್ಲ ಎಂಬುದು ತಿಳಿದು ಬಂದಿದ್ದು, ಸರ್ವ ಪಿತೃ ಅಮಾವಾಸ್ಯೆಯಂದು ಸಂಭವಿಸುವ ಸೂರ್ಯಗ್ರಹಣವು ನಮ್ಮ ದೇಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ. ಈ ಕಾರಣಗಳಿಂದಾಗಿ, ನೀವು ಪಿತೃ ಅಮಾವಾಸ್ಯೆಯಂದು ನಿಮ್ಮ ಪೂರ್ವಜರಿಗೆ ತರ್ಪಣ ಮತ್ತು ಶ್ರಾದ್ಧ ವಿಧಿಗಳನ್ನು ಈ ಹಿಂದಿನಿಂದಲೂ ಹೇಗೆ ಮುಂದುವರೆಸಿಕೊಂಡು ಬಂದಿದ್ದೀರಾ, ಹಾಗೆಯೇ ಮುನ್ನಡೆಸಬಹುದು ಎಂದು ಹೇಳಲಾಗಿದೆ.