6 ವರ್ಷದ ಮಗುವಿನ ಜೀವ ಉಳಿಸಿದ Google! ಅದ್ಹೇಗೆ ಗೊತ್ತಾ?

Untitled design - 2025-09-18T140711.732
Published on

ತಡರಾತ್ರಿ Google ಹುಡುಕಾಟದಿಂದ ತನ್ನ 6 ವರ್ಷದ ಮಗುವಿನ ಜೀವ ಉಳಿದೆ ಎಂದು ಅಮೆರಿಕದ ಮಹಿಳೆಯೊಬ್ಬಳು ಹೇಳಿಕೊಂಡಿದ್ದಾರೆ ಎಂದು ಗುರುವಾರ ಕೆಲ ವರದಿಗಳು ಉಲ್ಲೇಖಿಸಿವೆ.

ಅಮೆರಿಕದ ಟೆಕ್ಸಾಸ್‌ನ ವಿಟ್ಟನ್ ಡೇನಿಯಲ್‌ ಎಂಬ ಆರು ವರ್ಷದ ಮಗುವನ್ನು ತನ್ನ ತಾಯಿ ಹತ್ತಿರ ಆಸ್ಪತ್ರೆಗೆ ದಾಖಲಿಸಿದರು. ಆರಂಭದಲ್ಲಿ ವೈದ್ಯರು ಮಗುವಿಗೆ ಜ್ವರ ಎಂದು ನಂಬಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕೆಲವೇ ಗಂಟೆಗಳಲ್ಲಿ, ಅವನ ಸ್ಥಿತಿ ಹದಗೆಟ್ಟಿತು. ಆ ಮಗು ನಡೆಯಲು, ಮಾತನಾಡಲು ಮತ್ತು ಉಸಿರಾಡುವ ಸಾಮರ್ಥ್ಯವನ್ನು ಕಳೆದುಕೊಂಡನು ಎಂದು ಸ್ಥಳೀಯ ಮಾಧ್ಯಮ KCBD ವರದಿ ಮಾಡಿದೆ.

ವಿಟ್ಟನ್ ಮೆದುಳಿನ ಕಾಂಡದಲ್ಲಿರುವ ಅಸಹಜ ರಕ್ತನಾಳಗಳ ಸಮೂಹವಾದ ಕ್ಯಾವರ್ನೊಮಾದಿಂದ ಬಳಲುತ್ತಿದ್ದಾರೆಂದು ತಿಳಿದುಕೊಂಡರು ವೈದ್ಯರು ಮಗುವಿನ ತಾಯಿ ಕೇಸಿ ಡೇನಿಯಲ್ ಅವರಿಗೆ ತಿಳಿಸಿ. ಮಗುವನ್ನು ಉಳಿಸಲು ಕಷ್ಟ ಸಾಧ್ಯ ಎಂದು ಆಸ್ಪತ್ರೆಯ ಡಾಕ್ಟರ್ಸ್​ ಹೇಳಿದರು.

ಮಗುವನ್ನು ಗೂಗಲ್​​ ಉಳಿಸಿದ್ದೇಗೆ?

ಮಗುವನ್ನು ಬಿಟ್ಟುಕೊಡಲು ನಿರಾಕರಿಸಿದ ತಾಯಿ ಕೇಸಿ, ಮಗುವನ್ನು ಉಳಿಸುವ ಸವಾಲು ತೊಟ್ಟ ಮಹಿಳೆ ತಡರಾತ್ರಿಯವರೆಗೂ ಉತ್ತರಗಳೊಗಾಗಿ ಗೂಗಲ್ ಹುಡುಕಾಟ ನಡೆಸಿದಳು. ಕೊನೆಗೂ ಕ್ಯಾವರ್ನೊಮಾಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣತಿ ಹೊಂದಿರುವ UTHealth ಹೂಸ್ಟನ್‌ನ ನರಶಸ್ತ್ರಚಿಕಿತ್ಸಕ ಡಾ. ಜಾಕ್ವೆಸ್ ಮೊರ್ಕೋಸ್ ಅವರನ್ನು ಭೇಟಿಯಾದರು.

"ನಾನು ಗೂಗಲ್​ನಲ್ಲಿ ಮಗುವಿನ ರೋಗದ ಚಿತ್ರಗಳನ್ನು ನೋಡಿದೆ. ಇದನ್ನು ಮಾಡಬಹುದು ಎಂದು ನಾನು ಭಾವಿಸಿದೆ ಎಂದು ಡಾ. ಮಾರ್ಕೋಸ್ ಹೇಳಿದರು.

ಜೀವ ಉಳಿಸುವ ಶಸ್ತ್ರಚಿಕಿತ್ಸೆ

ಕೂಡಲೇ ಮಗು ವಿಟ್ಟನ್ ಅವರನ್ನು ಹೂಸ್ಟನ್‌ಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಅಲ್ಲಿ ಡಾ. ಮೊರ್ಕೋಸ್ ಮತ್ತು ಮಕ್ಕಳ ನರಶಸ್ತ್ರಚಿಕಿತ್ಸಕ ಡಾ. ಮನೀಶ್ ಶಾ ಎಂಬುವರು ಎಲ್ಲಾ ಸಾಧ್ಯತೆಗಳ ವಿರುದ್ಧವೂ, ಸತತ ನಾಲ್ಕು ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು ಎಂದು ವರದಿ ಉಲ್ಲೇಖಿಸಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net