ನ್ಯೂಸ್

ಶರ್ಟ್ ಧರಿಸದೆ ಸಭೆಗೆ ಹಾಜರಾದ ಶಿಕ್ಷಣ ಇಲಾಖೆ ಅಧಿಕಾರಿ ಅಮಾನತು!

ಉತ್ತರ ಪ್ರದೇಶ: ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶರ್ಟ್ ಹಾಕದೆ, ಬನಿಯನ್​ ಧರಿಸಿ ವಿಡಿಯೋ ಕಾನ್ಫರೆನ್ಸ್ ಸಭೆಗೆ ಹಾಜರಾಗಿದ್ದಕ್ಕೆ ಅಮಾನತುಗೊಂಡಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ. ಇದನ್ನೂ ಓದಿ: 48ರ ಪ್ರಾಯದಲ್ಲಿ ಬಿಕಿನಿ ಧರಿಸಿ ಪೋಸ್ ನೀಡಿದ ಶಿಲ್ಪಾ ಶೆಟ್ಟಿ; ನಿಮ್ಮ ವಯಸ್ಸಿನ ಗುಟ್ಟೇನು ಎಂದ ಫ್ಯಾನ್ಸ್!

ಬನಿಯನ್ ಧರಿಸಿ ವಿಡಿಯೋ ಕಾನ್ಫರೆನ್ಸ್ ಸಭೆಗೆ ಹಾಜರಾಗಿರುವುದನ್ನು ಅನುಚಿತ ವರ್ತನೆ ಎಂದು ಪರಿಗಣಿಸಿ ಶಿಕ್ಷಣ ಇಲಾಖೆ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್, ವಿವಿಧ ಜಿಲ್ಲೆಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳೊಂದಿಗೆ ಇಲಾಖಾ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಕರೆದಿದ್ದರು. ಈ ವೇಳೆ ಅಧಿಕಾರಿ ಬನಿಯನ್ ಧರಿಸಿ ಹಾಜರಾಗಿರುವುದು ಎಲ್ಲರ ಮುಜುಗರಕ್ಕೆ ಕಾರಣವಾಗಿದೆ. ಹೀಗಾಗಿ ಕ್ರಮ ಕೈಗೊಳ್ಳಲಾಗಿದೆ. ಅಮಾನತುಗೊಂಡಿರುವ ಅಧಿಕಾರಿ ಯಾವ ಜಿಲ್ಲೆಯವರು ಎಂಬುದು ಬಹಿರಂಗವಾಗಿಲ್ಲ. (ಏಜೆನ್ಸೀಸ್)