4 ಕಾಲು, 4 ಕೈ, 4 ಕಿವಿ ಇರುವ ಮಗು ಜನಿಸಿದ್ದನ್ನು ಕಂಡು ವೈದ್ಯರಿಗೆ ಅಚ್ಚರಿ!

Hospital
Published on

ಬಿಹಾರ: ಮಹಿಳೆಯೊಬ್ಬಳು ನಾಲ್ಕು ಕೈ, ನಾಲ್ಕು ಕಾಲು ಮತ್ತು ನಾಲ್ಕು ಕಿವಿ ಹೊಂದಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ಸರನ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಜೂ.12ರಂದು ನಡೆದಿದೆ. ಇಂತಹ ವಿಚಿತ್ರ ಮಗುವನ್ನು ಕಂಡು ಆಸ್ಪತ್ರೆ ಸಿಬ್ಬಂದಿಗಳೇ ಒಂದು ಕ್ಷಣ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನವಜಾತ ಶಿಶು ಜನಿಸಿದ 20 ನಿಮಿಷದ ಅಂತರದಲ್ಲಿ ಮೃತಪಟ್ಟಿದೆ ಎಂದು ವರದಿಯಾಗಿದೆ.

ಪ್ರಿಯಾ ದೇವಿ ಎಂಬಾಕೆ ವಿಚಿತ್ರ ಹೆಣ್ಣು ಮಗುವಿಗೆ ಜನ್ಮ ನೀಡಿದ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿಗಳಿಗೆ ಮತ್ತು ಇತರೆ ರೋಗಿಗಳಿಗೆ ಅಚ್ಚರಿ ತಂದಿದೆ. ಈ ಮಗುವನ್ನು ನೋಡಲೆಂದು ರಾತ್ರೋ ರಾತ್ರಿ ಆಸ್ಪತ್ರೆ ಮುಂದೆ ಜನಸಾಗರವೇ ಬಂದು ಸೇರಿದೆ. 

ಈ ಬಗ್ಗೆ ಆಸ್ಪತ್ರೆಯ ನಿರ್ದೇಶಕ ಡಾ.ಅನಿಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಗರ್ಭಾಶಯದಲ್ಲಿ ಒಂದೇ ಅಂಡಾಶಯದಿಂದ ಎರಡು ಶಿಶುಗಳು ಹುಟ್ಟಿದಾಗ ಇಂತಹ ಮಕ್ಕಳು ಜನಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಒಂದೇ ಸಮಯಕ್ಕೆ ಬೇರ್ಪಟ್ಟರೆ ಅವಳಿ ಮಕ್ಕಳು ಜನಿಸುತ್ತಾರೆ. ಹೆರಿಗೆಯ ಸಂದರ್ಭಲ್ಲಿ ಗರ್ಭಿಣಿಯರು ಇದರಿಂದ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಇದೀಗ ಶಸ್ತ್ರ ಚಿಕಿತ್ಸೆ ಮೂಲಕ ಹೆಣ್ಣು ಮಗು ಜನಿಸಿದ್ದರೂ, ಕೇವಲ 20 ನಿಮಿಷದಲ್ಲಿ ಮೃತಪಟ್ಟಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net