ನ್ಯೂಸ್

ಗಂಭೀರ ಎಚ್ಚರಿಕೆ ಕೊಟ್ಟ ವಿಜ್ಞಾನಿಗಳು: ನಿಮ್ಮ DNA ಕೂಡ ಹ್ಯಾಕ್ ಆಗುತ್ತಂತೆ ಹುಷಾರ್​! | Hacked

Hacked: ಇತ್ತೀಚಿನ ಅಭಿವೃದ್ಧಿಗೊಂಡಿರುವ ಅಥವಾ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞನದಿಂದ ಎಷ್ಟು ಅನುಕೂಲಗಳಿವೆ ಅಷ್ಟೇ ಅನಾನುಕೂಲಗಳಾಗಿವೆ. ಯಾಕೆಂದ್ರೆ ಅಧುನಿಕ ಪ್ರಪಂಚದ್ಯಾಂತ ಪೊಲೀಸರು ಅದೇಷ್ಟೆ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಂಡು ಪತ್ತೆ ಹಚ್ಚಲಾರದಂತ ಸೈಬರ್​ದಾಳಿಗಳು ಅಧಿಕವಾಗುತ್ತಿದೆ. ಇದೀಗ ಇದೇ ರೀತಿಯ ಬೆದರಿಕೆ ಎದುರಾಗಿದೆ.

ಈ ಮೊದಲು ಕಂಪ್ಯೂಟರ್​, ಮೊಬೈಲ್​ ಹಾಗೂ ಲ್ಯಾಪ್​ಟ್ಯಾಪ್​ಗಳಂತಹ ಸಾಧನಗಳನ್ನು ಹ್ಯಾಕ್​ ಮಾಡುತ್ತಿದ್ದರು. ಆದರೆ,ಇದೀಗ ಗಂಭೀರ ವಿಷಯ ಏನೆಂದರೆ,ಮಾನವನ ಡಿಯೋಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ(DNA) ಡಿಎನ್​ಎ ಅನ್ನು ಸಹ ಹ್ಯಾಕ್​ ಮಾಡುತ್ತಿದ್ದಾರೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಹೌದು, ಕ್ಯಾನ್ಸರ್ ಪತ್ತೆ, ರೋಗ ಚಿಕಿತ್ಸೆ, ಸೋಂಕು ಮೇಲ್ವಿಚಾರಣೆ ಮತ್ತು ವೈಯಕ್ತಿಕಗೊಳಿಸಿದ ಔಷಧದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಡಿಎನ್‌ಎ ಪರೀಕ್ಷೆಗೆ ಬಳಸಲಾಗುವ ಅತ್ಯಾಧುನಿಕ ತಂತ್ರಜ್ಞಾನವಾದ ನೆಕ್ಸ್ಟ್-ಜನರೇಷನ್ ಸೀಕ್ವೆನ್ಸಿಂಗ್ (ಎನ್‌ಜಿಎಸ್) ಈಗ ಸೈಬರ್ ಅಪರಾಧಿಗಳಿಗೆ ಬೆದರಿಕೆಯ ಹೊಸ ಬಾಗಿಲನ್ನು ತೆರೆಯುತ್ತಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ಸಂಶೋಧನೆಯಲ್ಲಿ ಬಹಿರಂಗಗೊಂಡಿದ್ದೇನು..?

IEEE ಆಕ್ಸೆಸ್​ ಎಂಬ ಜನರಲ್​ನಲ್ಲಿ ಇತ್ತೀಚಿಗೆ ಪ್ರಕಟವಾದ ಸಂಶೋಧನಾ ಪ್ರಕಾರ, NGS ತಂತ್ರಜ್ಞಾನವನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸದಿದ್ರೆ, ಅದು, ವೈಯಕ್ತಿಕ ಮಾಹಿತಿ ಉಲ್ಲಂಘನೆ, ಜೈವಿಕ ಬೆದರಿಕೆ ಹಾಗೂ ಡೇಟಾ ಕಳ್ಳತನದಂತಹ ಗಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದೆ. ಅಲ್ಲದೆ, ಪೋರ್ಟ್ಸ್​​ಮೌತ್​ ವಿಶ್ವವಿದ್ಯಾಲಯದ ಕಂಪ್ಯೂಟಿಂಗ್​ ವಿಭಾಗದ ಡಾ.ನಸ್ರೀನ್​ ಅಂಜುಮ್​ ನೇತೃತ್ವದ NGS ಪ್ರತಿಯೊಂದು ಹಂತದಲ್ಲಿಯೂ ಸೈಬರ್​-ಜೈವಿಕ ಸುರಕ್ಷತಾ ದುರ್ಬಲತೆಗಳನ್ನು ಮೌಲ್ಯಮಾಪನ ಮಾಡುವ ಮೊದಲ ಸಮಗ್ರ ಅಧ್ಯಯನ ಇದಾಗಿದೆ.

NGS ಪ್ರಕ್ರಿಯೆ ಎಂದರೇನು?

ಮಾಹಿತಿಯ ಪ್ರಕಾರ, NGS ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ಮಾದರಿ(ಸ್ಯಾಂಪಲ್ಸ್​) ತಯಾರಿಕೆಯಿಂದ ದತ್ತಾಂಶ ವಿಶ್ಲೇಷಣೆಯವರೆಗೆ ಅನೇಕ ಹೈಟೆಕ್ ಉಪಕರಣಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಬಳಸುವ ಹಲವು ತಾಂತ್ರಿಕ ಹಂತಗಳಾಗಿ ವಿಂಗಡಿಸಲಾಗಿದೆ. ಈ ಎಲ್ಲಾ ಹಂತಗಳು ಒಂದಕ್ಕೊಂದು ಅವಲಂಬಿತವಾಗಿವೆ ಮತ್ತು ಇಲ್ಲಿಯೇ ಸೈಬರ್ ಬೆದರಿಕೆಗಳ ಸಾಧ್ಯತೆ ಉದ್ಭವಿಸುತ್ತದೆ. ಅನೇಕ ಡಿಎನ್‌ಎ ಡೇಟಾಬೇಸ್‌ಗಳು ಆನ್‌ಲೈನ್‌ನಲ್ಲಿ ಮುಕ್ತವಾಗಿ ಲಭ್ಯವಿರುವುದರಿಂದ, ಅವುಗಳನ್ನು ಕಣ್ಗಾವಲು, ತಿದ್ದುಪಡಿ ಅಥವಾ ಅಪಾಯಕಾರಿ ಜೈವಿಕ ಪ್ರಯೋಗಗಳಿಗಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂದು ಸಂಶೋಧಕರು ಭಯಪಡುತ್ತಾರೆ.(ಏಜೆನ್ಸೀಸ್​)