ಔಷಧಿ ಇಲ್ಲದೆ ಮೈಗ್ರೇನ್​​​ನಿಂದ ಪರಿಹಾರ ಪಡೆಯಬೇಕೆ? ಈ ಮನೆಮದ್ದುಗಳನ್ನು ಟ್ರೈ ಮಾಡಿ| Migraine

Migraine
Published on

Migraine: ಇಂದಿನ ಕೆಲಸದ ಒತ್ತಡ ಮತ್ತು ಜೀವನದ ಒತ್ತಡವು ನಮ್ಮ ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಆದರೆ ಸಾಮಾನ್ಯವಾಗಿ ಜನರು ದಿನದ ಆಯಾಸದ ನಂತರ ತಲೆನೋವನ್ನು ಸಾಮಾನ್ಯವೆಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಆದರೆ ಆಗಾಗ್ಗೆ ತಲೆನೋವು ಬಂದರೆ, ನಾವು ಅದನ್ನು ಹಗುರವಾಗಿ ಪರಿಗಣಿಸಬಾರದು ಏಕೆಂದರೆ ಇವು ಮೈಗ್ರೇನ್‌ನ ಲಕ್ಷಣಗಳಾಗಿರಬಹುದು. ಆದರೆ ಇದಕ್ಕೆ ನೀವು ಕೆಲವು ಮನೆಮದ್ದುಗಳನ್ನು ಮನೆಯಲ್ಲಿಯೇ ಮಾಡಿ ಮೈಗ್ರೇನ್​ನ್ನು ದೂರಮಾಡಬಹುದು. ಅದು ಹೇಗೆ ಗೊತ್ತಾ? ತಿಳಿಯೋಣ ಬನ್ನಿ.

ಔಷಧಿಗಳಿಲ್ಲದೆ ಮೈಗ್ರೇನ್ ಪರಿಹಾರ ಹೇಗೆ?

ಮೈಗ್ರೇನ್ ನೋವನ್ನು ದೂರಮಾಡಲು ಜನರು ಹೆಚ್ಚಾಗಿ ಔಷಧಿ, ಟ್ಯಾಬ್ಲೆಟ್​​ನ್ನು ತಿನ್ನುತ್ತಾರೆ. ಇದು ನೋವಿನಿಂದ ತಕ್ಷಣದ ಪರಿಹಾರವನ್ನು ನೀಡಿದರೂ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಆದ್ದರಿಂದ, ಔಷಧಿಗಳಿಲ್ಲದೆ ಮೈಗ್ರೇನ್ ನೋವಿನಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳು ಇಲ್ಲಿವೆ.

ದಾಲ್ಚಿನ್ನಿ

ಮೈಗ್ರೇನ್ ನಿಂದ ತ್ವರಿತ ಪರಿಹಾರ ಪಡೆಯಲು ದಾಲ್ಚಿನ್ನಿ ಒಂದು ಉತ್ತಮ ಪರಿಹಾರವಾಗಿದೆ. 2 ಚಮಚ ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚಿ 15-20 ನಿಮಿಷಗಳ ಕಾಲ ಬಿಡಿ. ಇದು ಕ್ರಮೇಣ ನೋವಿನಿಂದ ಪರಿಹಾರವನ್ನು ನೀಡುತ್ತದೆ.

ತುಪ್ಪ

ಮೈಗ್ರೇನ್‌ಗೆ ಹಸುವಿನ ದೇಸಿ ತುಪ್ಪವನ್ನು ರಾಮಬಾಣವೆಂದು ಪರಿಗಣಿಸಲಾಗುತ್ತದೆ. ನೋವು ಬಂದಾಗಲೆಲ್ಲಾ, ಆಹಾರದಲ್ಲಿ ಹಸುವಿನ ತುಪ್ಪವನ್ನು ಬೆರೆಸಿ ಅಥವಾ ಮೂಗಿಗೆ 2 ಹನಿ ಹಾಕುವುದರಿಂದ ತ್ವರಿತ ಪರಿಹಾರ ಸಿಗುತ್ತದೆ.

ನಿಂಬೆ ಸಿಪ್ಪೆ

ನೋವಿನ ಸಮಯದಲ್ಲಿ ನಿಂಬೆ ಸಿಪ್ಪೆಯ ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ, ನೋವು ಬೇಗನೆ ನಿವಾರಣೆಯಾಗುತ್ತದೆ. ನಿಂಬೆಯಲ್ಲಿರುವ ವಿಟಮಿನ್ ಸಿ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕರ್ಪೂರ

ತಲೆನೋವಿನಿಂದ ಬಳಲುತ್ತಿರುವಾಗ, ಕರ್ಪೂರವನ್ನು ಪುಡಿಮಾಡಿ ಅದರಲ್ಲಿ ದೇಸಿ ತುಪ್ಪವನ್ನು ಬೆರೆಸಿ. ನಂತರ ನೋವಿನ ಜಾಗಕ್ಕೆ ಹಗುರವಾದ ಕೈಗಳಿಂದ ಮಸಾಜ್ ಮಾಡಿ. ಕರ್ಪೂರದ ತಣ್ಣನೆಯ ಪರಿಣಾಮವು ನೋವನ್ನು ತ್ವರಿತವಾಗಿ ಶಮನಗೊಳಿಸುತ್ತದೆ.

ಈ ರೀತಿಯಾಗಿ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಮೈಗ್ರೇನ್​​ನ್ನು ದೂರಮಾಡಿ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net