Mahesh Babu: ಟಾಲಿವುಡ್ ಪ್ರಿನ್ಸ್, ನಟ ಮಹೇಶ್ ಬಾಬು ಅಭಿನಯದ ಬ್ಲಾಕ್ಬಸ್ಟರ್ ತೆಲುಗು ಸಿನಿಮಾ ‘ಅಥಡು’ ಇದೀಗ ರಿ-ರಿಲೀಸ್ಗೆ ಸಜ್ಜಾಗಿದೆ. 2005ರಲ್ಲಿ ಬಿಡುಗಡೆಯಾದ ಸೂಪರ್ಹಿಟ್ ಚಿತ್ರ ಅಂದಿನ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಕಂಡಿತ್ತು. ಮಹೇಶ್ ಬಾಬು- ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿದ ಹಾಗೂ ತ್ರಿವಿಕ್ರಮ್ ನಿರ್ದೇಶನದ ಈ ಚಿತ್ರವು ಮರುಬಿಡುಗಡೆಗೆ ಎದುರುನೋಡುತ್ತಿದೆ.

ಇದನ್ನೂ ಓದಿ: ಯತ್ನಾಳ್ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಾನಂದ ಪಾಟೀಲ್! Shivanand Patil
20 ವರ್ಷಗಳ ಬಳಿಕ ಮತ್ತೆ ಚಿತ್ರಮಂದಿಗರಳಿಗೆ ಎಂಟ್ರಿ ಕೊಡಲು ಸಜ್ಜಾಗಿರುವ ಪ್ರಿನ್ಸ್ ಅಭಿನಯದ ‘ಅಥಡು’, ಐಮ್ಯಾಕ್ಸ್ ಸ್ವರೂಪದಲ್ಲಿ ರೀ-ರಿಲೀಸ್ ಆಗುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಪಟ್ಟಿಗೆ ಸೇರಿದೆ. ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಲಿದೆ. ತಾಂತ್ರಿಕವಾಗಿ 4K ಅಲ್ಟ್ರಾ ಎಚ್ಡಿ ರೆಸಲ್ಯೂಶನ್ ಮತ್ತು ಡಾಲ್ಬಿ ಅಟ್ಮಾಸ್ ಆಡಿಯೊ ಮಾಸ್ಟರಿಂಗ್‌ನೊಂದಿಗೆ ಅಥಡು ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.
ವಿಶೇಷವಾಗಿ ಮಹೇಶ್ ಬಾಬು ಜನ್ಮದಿನದಂದೇ (ಆ.09) ಈ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮರುಬಿಡುಗಡೆಗೆ ಇನ್ನೂ 100 ದಿನಗಳು ಬಾಕಿ ಉಳಿದಿರುವಾಗಲೇ ಚಿತ್ರದ ವಿಶೇಷ ಕೌಂಟ್‌ಡೌನ್ ಪೋಸ್ಟರ್ ಹೊರಬಿದ್ದಿದೆ. ಈ ಸುದ್ದಿ ಮಹೇಶ್ ಬಾಬು ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ನೆಚ್ಚಿನ ನಟನ ಹುಟ್ಟುಹಬ್ಬದ ದಿನವೇ ಸಿನಿಮಾ ತೆರೆ ಕಾಣಲಿದೆ,(ಏಜೆನ್ಸೀಸ್).
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು? ಇಲ್ಲಿದೆ ಮಾಹಿತಿ | Gold Price