ಉತ್ತರಾಖಂಡ್: ಉತ್ತರಾಖಂಡದಲ್ಲಿ ಕೆಲ ದಿನಗಳ ಹಿಂದೆ ಉಂಟಾದ ಹಿಮಸ್ಫೋಟಕ್ಕೆ ಸಂಬಂಧಿಸಿದಂತೆ ಇದುವರೆಗೆ 34 ಮೃತದೇಹಗಳು ಪತ್ತೆಯಾಗಿವೆ. ಇನ್ನೂ 200ಕ್ಕೂ ಅಧಿಕ ಮಂದಿ ಬದುಕಿರುವ ಬಗ್ಗೆ ಸಂದೇಹ ವ್ಯಕ್ತವಾಗಿದೆ.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿರುವ ಮಧ್ಯಯೇ ರಿಷಿಗಂಗಾ ನದಿ ಮತ್ತೆ ಉಕ್ಕಿ ಹರಿಯಲು ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಚೆಮೋಲಿಯ ರೇಣಿ ಮತ್ತು ತಪೋವನ್ ಗ್ರಾಮದಲ್ಲಿ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಕಳೆದ ಭಾನುವಾರ ಹಿಮ ಸ್ಫೋಟ ದುರಂತ ಸಂಭವಿಸಿದ ಬಳಿಕ ತಪೋವನದಲ್ಲಿ 25ರಿಂದ 35 ಮಂದಿ ನಾಲ್ಕು ದಿನಕ್ಕೂ ಹೆಚ್ಚು ಕಾಲ ಸಿಕ್ಕಿಹಾಕಿಕೊಂಡಿದ್ದಾರೆ. ಸುರಂಗದ ಒಳಗೆ ಕೆಲಸ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಹೊರಗೆ ಬಂದಿದ್ದು, ಭಾರೀ ಯಂತ್ರಗಳ ಮೂಲಕ ಅವಶೇಷಗಳನ್ನು, ಕೆಸರುಗಳನ್ನು ತೆಗೆಯಲಾಗಿದೆ.
ಈಗಾಗಲೇ ಸಿಕ್ಕಿರುವ 34 ಮೃತದೇಹಗಳ ಪೈಕಿ 10 ಮಂದಿಯನ್ನು ಮಾತ್ರ ಗುರುತಿಸಲಾಗಿದ್ದು, 24 ಮೃತದೇಹವನ್ನು ಗುರುತಿಸಲು ಸಾಧ್ಯವಾಗಿಲ್ಲ. ಈ ನಡುವೆ ರಿಷಿ ಗಂಗಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದರು. ಅವರು ಸುರಕ್ಷಿತವಾಗಿ ಹಿಂತಿರುಗಿದ್ದಾರೆ ಎಂದು ಹೇಳಲಾಗಿದೆ. ಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಟಟೆಡ್ ಕೊರೆಯುವ ಯಂತ್ರದೊಂದಿಗೆ ಕಾರ್ಮಿಕರನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.