ನ್ಯೂಸ್

ರಿಸರ್ವ್​ ಬ್ಯಾಂಕ್​ನಲ್ಲಿ ಖಾಲಿ ಇವೆ 841 ಹುದ್ದೆಗಳು, ಕರ್ನಾಟಕದಲ್ಲಿಯೂ ಇವೆ ಅವಕಾಶ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ದೇಶಾದ್ಯಂತ 841 ಆಫೀಸ್ ಅಟೆಂಡೆಂಟ್ಸ್ ಹುದ್ದೆಗಳಿಗಾಗಿ ರಾಷ್ಟ್ರೀಯ ಮಟ್ಟದ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಒಟ್ಟು ಹುದ್ದೆಗಳು: 841

ಎಸ್‍ಎಸ್‍ಎಲ್‍ಸಿ ಆದವರು ಈ ಹುದ್ದೆಗಳಿಗೆ ಆನ್‍ಲೈನ್ ಅರ್ಜಿ ಸಲ್ಲಿಸಬಹುದು. ಸ್ಥಳೀಯ ಭಾಷೆ ಬಲ್ಲವರಿಗೆ ಆದ್ಯತೆ ಇರಲಿದೆ. ಆದರೆ, ಇಂಗ್ಲಿಷ್ ಭಾಷಾಜ್ಞಾನ ಹೊರತುಪಡಿಸಿ ಉಳಿದ ಪರೀಕ್ಷೆಗಳನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಷ್ಟೇ ಬರೆಯಬಹುದು.

ಒಟ್ಟು 841 ಹುದ್ದೆಗಳಲ್ಲಿ ಮುಂಬೈನಲ್ಲಿ ಅತ್ಯಧಿಕ 202 ಹುದ್ದೆಗಳಿದ್ದರೆ, ಬೆಂಗಳೂರಿನಲ್ಲಿ 28 ಜನರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಆರ್‍ಬಿಐ ತಿಳಿಸಿದೆ. ಇದಲ್ಲದೇ, ದೇಶದ ಪ್ರಮುಖ ನಗರಗಳಲ್ಲಿ ಕೆಲಸ ಖಾಲಿ ಇದೆ. ಆದರೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಆಯಾ ಪ್ರದೇಶದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರಬೇಕು ಎಂದು ನಿಬಂಧನೆ ವಿಧಿಸಲಾಗಿದೆ.

ತರಬೇತಿ ಇರಲಿದೆ

ಆಯ್ದ ಎಸ್‍ಸಿ, ಎಸ್‍ಟಿ, ಒಬಿಸಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಬ್ಯಾಂಕ್‍ನಿಂದಲೇ ಪರೀಕ್ಷಾ ಪೂರ್ವ ತರಬೇತಿಯನ್ನು ಕೆಲ ಕೇಂದ್ರಗಳಲ್ಲಿ ಆಯೋಜಿಸಲಾಗುತ್ತದೆ. ಕರ್ನಾಟಕ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜ ನಮೂನೆಯನ್ನು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್‍ಬಿಐ ಪ್ರಾದೇಶಿಕ ಕಚೇರಿಗೆ ಸಲ್ಲಿಸಬಹುದು.

* ಮೀಸಲಾತಿ

ಎಸ್‍ಸಿ- 25, ಎಸ್‍ಟಿ-75, ಒಬಿಸಿ-211, ಆರ್ಥಿಕವಾಗಿ ಹಿಂದುಳಿದ ವರ್ಗಗಳು-76 ಹಾಗೂ ಸಾಮಾನ್ಯ ವರ್ಗಕ್ಕೆ 454 ಹುದ್ದೆಗಳನ್ನು ಮೀಸಲಿಡಲಾಗಿದೆ. ಅಂಗವಿಕಲರು ಹಾಗೂ ನಿವೃತ್ತ ಸೈನಿಕರಿಗೂ ಹುದ್ದೆಗಳು ಮೀಸಲಾಗಿವೆ.

* ವಯೋಮಿತಿ

18-25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲು ಹುದ್ದೆಗಳಿಗೆ ನಿಯಮದನ್ವಯ ವಯೋಸಡಿಲಿಕೆ ಇರಲಿದೆ.

* ವಿದ್ಯಾರ್ಹತೆ

ಅಭ್ಯರ್ಥಿಗಳು ಆಯ್ಕೆ ಸಲ್ಲಿಸಬಯಸುವ ಆರ್‍ಬಿಐ ಪ್ರಾದೇಶಿಕ ಕಚೇರಿ ಇರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಅಥವಾ ಮಂಡಳಿಯಿಂದ ಕನಿಷ್ಠ ಎಸ್‍ಎಸ್‍ಎಲ್‍ಸಿ/10ನೇ ತರಗತಿ ಉತ್ತೀರ್ಣರಾಗಿರಬೇಕು. ಪದವಿಗಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

* ಪರೀಕ್ಷಾ ಸ್ವರೂಪ

ಅಭ್ಯರ್ಥಿಗಳನ್ನು ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ರೀಸನಿಂಗ್-30 ಅಂಕ, ಸಾಮಾನ್ಯ ಇಂಗ್ಲಿಷ್- 30 ಅಂಕ, ಸಾಮಾನ್ಯ ಜ್ಞಾನ- 30 ಅಂಕ ಹಾಗೂ ಅಂಕಗಣಿತ ಸಾಮಥ್ರ್ಯದ 30 ಅಂಕಗಳ ಪ್ರಶ್ನೆಗಳು ಸೇರಿ ಒಟ್ಟು 120 ಪ್ರಶ್ನೆಗಳಿಗೆ 90 ನಿಮಿಷಗಳಲ್ಲಿ ಉತ್ತರಿಸಬೇಕಾಗುತ್ತದೆ. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುತ್ತವೆ. ಎಲ್ಲಕ್ಕಿಂತ ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆಯದವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

* ಶುಲ್ಕಗಳು

ಎಸ್‍ಸಿ, ಎಸ್‍ಟಿ, ಅಂಗವಿಕಲರು ಹಾಗೂ ನಿವೃತ್ತ ಸೈನಿಕರಿಗೆ ಅಭ್ಯರ್ಥಿಗಳಿಗೆ 50 ರೂ. ಹಾಗೂ ಇತರರಿಗೆ 450 ರೂ. ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ಕೊನೆಯ ದಿನ: ಮಾ. 15

ಸಂಭಾವ್ಯ ಪರೀಕ್ಷೆ ದಿನಾಂಕ: ಏಪ್ರಿಲ್ 09, 10, 2021

ಅಧಿಸೂಚನೆಗೆ: https://bit.ly/3uwzuBL

ಅರ್ಜಿ ಸಲ್ಲಿಸಲು:https://ibpsonline.ibps.in/rbirpoafeb21/

ಮಾಹಿತಿಗೆ: http://www.rbi.org.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: