ನ್ಯೂಸ್

ಅಯ್ಯೋ ಅವ್ನ ಮದ್ವೆಯಾಗಿದೆ ಅಂತ ಗೊತ್ತಿದ್ರೆ ಅವ್ನ ಜತೆ ಹೀಗೆಲ್ಲಾ ಮಾಡ್ತಾನೇ ಇರ್ಲಿಲ್ಲ: ಕಣ್ಣೀರಿಟ್ಟ ರಾಖಿ ಸಾವಂತ್​

suchetana

ಮುಂಬೈ: 42 ವರ್ಷದ ನಟಿ ರಾಖಿ ಸಾವಂತ್‌ ರಿತೇಶ್​ ಎಂಬುವವರನ್ನು ಮದುವೆಯಾಗಿರುವ ಸುದ್ದಿ ಸಕತ್​ ವೈರಲ್​ ಆಗಿತ್ತು. ಆದರೆ ಇದು ನಿಜವೇ, ಸುಳ್ಳೇ ಎಂದು ಅನೇಕ ಅಭಿಮಾನಿಗಳಲ್ಲಿ ಸಂದೇಹ ಶುರುವಾಗಿತ್ತು. ಏಕೆಂದರೆ ರಿತೇಶ್​ ಜತೆ ರಾಖಿಯ ಮದುವೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಆ ರಿತೇಶ್‌ ಯಾರು ಎಂಬುದು ಯಾರಿಗೂ ತಿಳಿದಿರಲಿಲ್ಲ.

ನಂತರ ಈ ಸುದ್ದಿಗೆ ಸ್ಪಷ್ಟನೆ ನೀಡಿದ್ದ ರಾಖಿ ಸಾವಂತ್‌ ಸಹೋದರ ರಾಕೇಶ್‌, ತಮ್ಮ ಸಹೋದರಿ ಮದುವೆಯಾಗಿರುವುದು ನಿಜ ಎಂದು ಹೇಳಿದ್ದರು. ರಿತೇಶ್‌ ಬಗ್ಗೆ ಸಹಜವಾಗಿಯೇ ನನಗೆ ಕೆಲವು ಅನುಮಾನಗಳಿದ್ದವು. ಆದರೆ, ಅವರನ್ನು ಭೇಟಿ ಆದ ಬಳಿಕ ಅನುಮಾನಗಳೆಲ್ಲ ಮರೆಯಾದವು. ಅವರನ್ನು ಮದುವೆ ಆಗಿದ್ದು ರಾಖಿಯ ಅತ್ಯುತ್ತಮ ನಿರ್ಧಾರ ಎಂದು ನನಗೆ ಅನಿಸುತ್ತದೆ ಎಂದು ಸಹೋದರ ರಾಕೇಶ್​ ಹೇಳಿದ್ದರು.

ನಂತರ ಬಿಗ್​ಬಾಸ್​ ಮನೆ ಹೊಕ್ಕಿದ್ದ ರಾಖಿ ಸಾವಂತ ತಮ್ಮ ಖಾಸಗಿ ಜೀವನದ ಹಲವು ವಿಚಾರಗಳನ್ನ ಹಂಚಿಕೊಂಡಿದ್ದರು. ಕಿರಿಕಿರಿ, ಜಗಳದಿಂದ ಮನರಂಜನೆ ಕಳೆದುಕೊಂಡಿದ್ದ ಬಿಗ್​ಬಾಸ್​ ಮನೆಯೊಳಕ್ಕೆ ಜೀವಂತಿಕೆ ತುಂಬಿದ್ದರು ರಾಖಿ.

ಇದೀಗ ಅವರು ಬಿಗ್‍ಬಾಸ್ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ತಮ್ಮ ಗುಟ್ಟುಗುಟ್ಟಾಗಿರುವ ಮದುವೆಯ ಬಗ್ಗೆ ವಿಚಾರ ಹಂಚಿಕೊಂಡಿರುವ ನಟಿ, ತಾನು ರಿತೇಶ್​ನನ್ನು ಮದುವೆಯಾಗಿರುವುದು ನಿಜ. ಆದರೆ ಆತನಿಗೆ ಮೊದಲೇ ಮದುವೆಯಾಗಿ ಮಕ್ಕಳಿದ್ದ ವಿಷಯ ನನಗೆ ತಿಳಿದಿರಲಿಲ್ಲ. ಒಂದು ವೇಳೆ ನನಗೆ ಇದು ಮೊದಲೇ ತಿಳಿದಿದ್ದರೆ ನಾನು ಆತನ ಸಂಸಾರವನ್ನು ಒಡೆಯುತ್ತಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿಯೂ ಖಾಸಗಿ ಜೀವನದ ಬಗ್ಗೆ ಹಂಚಿಕೊಂಡಿದ್ದರೂ ಮದುವೆ ವಿಷಯ ತಿಳಿಸಿರಲಿಲ್ಲ. ಇದಕ್ಕೆ ಕಾರಣ ಹೇಳೀರುವ ರಾಖಿ, ಕೆಲವು ಕಾರಣಗಳಿಂದ ಮದುವೆಯ ವಿಷಯ ಬಹಿರಂಗ ಮಾಡಿರಲಿಲ್ಲ. ರಿತೇಶ್​ನನ್ನು ತುಂಬಾ ಪ್ರೀತಿಸಿ, ಇಷ್ಟಪಟ್ಟು ಮದುವೆ ಮಾಡಿಕೊಂಡೆ. ಆದರೆ ಆತನಿಗೆ ಮದುವೆಯಾಗಿರುವುದು ತಿಳಿದು, ತುಂಬಾ ಬೇಸರವಾಯಿತು. ಆತನೊಂದು ಬಾಳುವ ಅದೃಷ್ಟ ನನಗಿಲ್ಲ ಎಂದು ಹೇಳುತ್ತಾ ಕಣ್ಣೀರು ಸುರಿಸಿದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ