More

    ಅಂತ್ಯಸಂಸ್ಕಾರಕ್ಕೆ ಪುತ್ರನೇ ಬೇಕೆ? ಅಪ್ಪನ ಶವ ಹೆಗಲಮೇಲೆ ಹೊತ್ತರು- ಚಿತೆಗೆ ಕೊಳ್ಳಿ ಇಟ್ಟ ಪುತ್ರಿಯರು

    ಜೈಪುರ: ಅಂತ್ಯಸಂಸ್ಕಾರ ಮಾಡುವುದಕ್ಕಾದರೂ ತಮಗೊಂದು ಪುತ್ರ ಬೇಕು ಎಂದುಕೊಳ್ಳುವವರೇ ಹೆಚ್ಚು. ಹೆಣ್ಣು- ಗಂಡು ಎಷ್ಟೇ ಸಮ ಸಮ ಎಂದು ಹೇಳುತ್ತಿದ್ದರೂ ಅಂತ್ಯಸಂಸ್ಕಾರ ಸೇರಿದಂತೆ ಕೆಲವೊಂದು ಸಂಪ್ರದಾಯಗಳ ವಿಷಯ ಬಂದಾಗ ಗಂಡು ಮಕ್ಕಳಿಗೇ ಹೆಚ್ಚು ಪ್ರಾಶಸ್ತ್ರ್ಯ.

    ಆದರೆ ಇತ್ತೀಚಿನ ದಿನಗಳಲ್ಲಿ ಪುತ್ರನಿಲ್ಲದ ಕುಟುಂಬದಲ್ಲಿ ಹೆಣ್ಣುಮಕ್ಕಳೇ ಮುಂದೆ ನಿಂತು ಹಿರಿಯರ ಅಂತ್ಯಸಂಸ್ಕಾರ ಮಾಡುತ್ತಿರುವ ಉದಾಹರಣೆಗಳು ಇವೆ.
    ಅಂಥದ್ದೇ ಒಂದು ಘಟನೆ ರಾಜಸ್ಥಾನದ ದುಂಗರ್‍ಪುರ್ ಜಿಲ್ಲೆಯಲ್ಲಿ ನಡೆದಿದೆ. ಐವರು ಹೆಣ್ಣು ಮಕ್ಕಳು ಮುಂದೆ ನಿಂತು ತಮ್ಮ ತಂದೆಯ ಶವಕ್ಕೆ ಕೊಳ್ಳಿ ಇಡುವ ಮೂಲಕ ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ಮೂಲಕ ರಾಜಸ್ಥಾನದಲ್ಲಿ ತಲೆತಲಾಂತರಗಳಿಂದ ಇದ್ದ ಸಂಪ್ರದಾಯವನ್ನು ಬದಲಿಸಿದ್ದಾರೆ ಈ ಪುತ್ರಿಯರು.

    ಕರುಲಾಲ್ ತ್ರಿವೇದಿ ಎಂಬುವವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ ಗಂಡು ಮಕ್ಕಳು ಇರಲಿಲ್ಲ. ಹೀಗಾಗಿ ಹೆಣ್ಣುಮಕ್ಕಳಾದ ನಿರ್ಮಲಾ, ಚಂದ್ರಕಾಂತ, ನೀತಾ, ಜಯಶ್ರೀ ಮತ್ತು ಸುರೇಖಾ ಅವರೇ ತಂದೆಯ ಅಂತಿಮ ವಿಧಿವಿಧಾನವನ್ನು ಮಾಡಲು ನಿರ್ಧರಿಸಿದರು. ಎಂದಿಗೂ ತಮ್ಮ ತಂದೆ ಗಂಡು ಮಕ್ಕಳ ಮೇಲೆ ವ್ಯಾಮೋಹ ಹೊಂದಿರಲಿಲ್ಲ. ಆದ್ದರಿಂದ ನಾವೇ ವಿಧಿವಿಧಾನ ನಡೆಸುತ್ತೇವೆ ಎಂದರು. ಮೊದಮೊದಲು ಕೆಲವು ಕುಟುಂಬಸ್ಥರಿಂದ ಅಪಸ್ವರ ಕೇಳಿಬಂದರೂ ಕೊನೆಗೆ ಎಲ್ಲರೂ ಒಪ್ಪಿಕೊಂಡರು.

    ಈ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳು ತಂದೆಯ ಶವವನ್ನು ತಮ್ಮ ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಕರೆದೊಯ್ದರು. ಹಿಂದೂ ಸಂಪ್ರದಾಯದ ಪ್ರಕಾರ ತಂದೆಯ ದೇಹಕ್ಕೆ ಕೊಳ್ಳಿ ಇಟ್ಟು ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಅಲ್ಲದೆ ನಮ್ಮ ಪೋಷಕರ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    VIDEO: ವಿಮಾನಕ್ಕೆ ಬಿತ್ತು ಬೆಂಕಿ: ಇನ್ನೇನು 241 ಪ್ರಯಾಣಿಕರ ಸಾವು ಸನಿಹದಲ್ಲಿತ್ತು- ನಡೆಯಿತು ಪವಾಡ

    ಪತ್ನಿಗೆ ಮಕ್ಕಳಾಗುವುದಿಲ್ಲ, ಇನ್ನೊಂದು ಮದ್ವೆಯಾಗಲು ಬಿಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?

    ಎರಡನೆಯ ಬಾರಿ ಅಪ್ಪ- ಅಮ್ಮನಾದ ಸೈಫ್‌ ಅಲಿ ಖಾನ್‌- ಕರೀನಾ ಕಪೂರ್‌: ಅಣ್ಣನಾದ ಖುಷಿಯಲ್ಲಿ ತೈಮೂರ್‌

    10ನೇ ತರಗತಿ ಪರೀಕ್ಷೆ ಬರಿಯುತ್ತಲೇ ಹೆರಿಗೆ ನೋವು- ಮಗುವಿಗೆ ಜನ್ಮ: ಪಾಪುವಿಗೆ ಪರೀಕ್ಷೆಯ ಹೆಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts