More

    ಪತಿಗೆ ಗೊತ್ತಿಲ್ಲದಂತೆ ಆಗಾಗ್ಗೆ ನನ್ನನ್ನು ಸೇರಲು ಒಪ್ಪಿದ್ದಾಳೆ- ಇದು ತಪ್ಪೋ, ಸರಿಯೊ?

    ಪತಿಗೆ ಗೊತ್ತಿಲ್ಲದಂತೆ ಆಗಾಗ್ಗೆ ನನ್ನನ್ನು ಸೇರಲು ಒಪ್ಪಿದ್ದಾಳೆ- ಇದು ತಪ್ಪೋ, ಸರಿಯೊ?ನಾನು ದ್ವಿತೀಯ ಪದವಿಯಲ್ಲಿ ಓದುತ್ತಿರುವ 20ವರ್ಷದ ಹುಡುಗ. 9ನೇತರಗತಿಯಲ್ಲಿ ಓದುತ್ತಿದ್ದಾಗ 7ನೇ ತರಗತಿಯಲ್ಲಿದ್ದ ಒಂದು ಹುಡುಗಿಯನ್ನು ಪ್ರೀತಿಸಿದೆ. ಅವಳೂ ನನ್ನನ್ನು ಇಷ್ಟಪಟ್ಟಳು. ಇದುವರೆಗೂ ನಮ್ಮ ಪ್ರೀತಿ ಹಾಗೆಯೇ ಮುಂದುವರಿದಿದೆ.

    ಅವಳೀಗ ದ್ವಿತೀಯ ಪಿ.ಯು.ಸಿಯಲ್ಲಿ ಓದುತ್ತಿದ್ದಾಳೆ. ಅವಳ ಮನೆಯಲ್ಲಿ ಆಗಲೇ ಮದುವೆಯ ತಯಾರಿ ನಡೆಸುತ್ತಿದ್ದಾರೆ. ನನಗಂತೂ ದಿಕ್ಕೇ ತೋಚುತ್ತಿಲ್ಲ ಮೇಡಂ. ನಾನೂ ಪದವಿಯನ್ನು ಮುಗಿಸಿ ಐ.ಎ.ಎಸ್ ಮಾಡಿ ಒಳ್ಳೆಯ ನೌಕರಿಯನ್ನು ಹಿಡಿದು ನಂತರ ಅವರ ಮನೆಗೆ ಹೆಣ್ಣುಕೇಳಲು ಹೋಗೋಣವೆಂದಿದ್ದೆ. ಆದರೆ ಅಲ್ಲಿಯವರೆಗೂ ಅವರು ಕಾಯುವುದಿಲ್ಲ. ಅದಕ್ಕೇ ಅವಳಿಗೆ ಹೇಳಿದ್ದೇನೆ.
    ನೀನು ಯಾರನ್ನೇ ಮದುವೆಯಾದರೂ ನನ್ನ ಹೆಂಡತಿಯೇ. ಅವನಿಗೆ ಗೊತ್ತಿಲ್ಲದಂತೆ ನೀನು ನನ್ನನ್ನೂ ಕೂಡಬೇಕು ಅಂತ. ಅದಕ್ಕೆ ಅವಳೂ ಒಪ್ಪಿದ್ದಾಳೆ ಮೇಡಂ. ನಾನು ಮಾಡುತ್ತಿರುವುದು ತಪ್ಪೋ ಸರಿಯೋ ಒಂದೂ ಗೊತ್ತಾಗುತ್ತಿಲ್ಲ. ಓದುವುದಕ್ಕೆ ಮನಸ್ಸೇ ಬರುತ್ತಿಲ್ಲ. ಓದಿದ್ದೆಲ್ಲ ಮರೆತೇ ಹೋದಂತಾಗುತ್ತದೆ. ರಾತ್ರಿ ನಿದ್ರೆ ಬರದೇ ಅವಳನ್ನೇ ನೆನೆಸಿಕೊಂಡು ಅಳುತ್ತೇನೆ. ಇತ್ತೀಚೆಗಂತೂ ಊಟ ನಿದ್ರೆ ಬಿಟ್ಟು ಬರೀ ಅಳುವುದೇ ಆಗಿದೆ. ದಿಕ್ಕೆಟ್ಟವನಂತಾಗಿದ್ದೇನೆ. ದಯವಿಟ್ಟು ದಾರಿ ತೋರಿಸಿ ಮೇಡಂ.

    ಉತ್ತರ: ಇಂಥ ಪ್ರಶ್ನೆಗಳಿಗೆ ಹಲವಾರು ಬಾರಿ ಉತ್ತರಿಸಿದ್ದೇನೆ. ನೀವು ಅದನ್ನು ಓದುವುದಿಲ್ಲವೆಂದು ಭಾವಿಸುತ್ತೇನೆ. ಈಗ ನಿಮ್ಮ ಮಾತುಗಳನ್ನೇ ನಿಮಗೆ ಹೇಳುತ್ತ ನೀವೆಷ್ಟು ದಿಕ್ಕು ತಪ್ಪಿದ್ದೀರಿ ಎಂದು ತಿಳಿಸುತ್ತೇನೆ.

    ನಿಮ್ಮ ಮೆದುಳಿನ ಬಗ್ಗೆ ತಿಳಿಸುತ್ತೇನೆ. ಆಗ ನಿಮಗೆ ನೀವೆಷ್ಟು ಬಾಲಿಶವಾಗಿ ಯೋಚನೆಮಾಡುತ್ತಿದ್ದೀರಿ ಎಂದು ಗೊತ್ತಾಗುತ್ತದೆ. ಡುಮಕ್ಕಳಿಗೆ ಇಪ್ಪತ್ತೊಂದು ವರ್ಷಗಳಿಗೆ (ಕೆಲವೊಮ್ಮೆ ಇಪ್ಪತ್ನಾಲ್ಕು ವರ್ಷಗಳಿಗೆ ) ಮೆದುಳಿನ ಭಾವನಾ ಮಂಡಲಗಳು ಪ್ರೌಢ ರೀತಿಯಲ್ಲಿ ಬದುಕಿನ ವಾಸ್ತವವನ್ನು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಗಳಿಸುತ್ತದೆ. ನೀವು ಮತ್ತು ನಿಮ್ಮ ಗೆಳತಿ ಇನ್ನೂ ಬಾಲಿಶ ಹಂತದಲ್ಲಿಯೇ ಇದ್ದೀರಿ.
    ನಿಮ್ಮ ಕೈಗೆ ಪ್ರೀತಿ ಸಿಕ್ಕಿರುವುದು ಸಣ್ಣ ಮಕ್ಕಳ ಕೈಗೆ ಗಾಜಿನ ಪಾತ್ರೆ ಕೊಟ್ಟಂತಾಗಿದೆ. ನೀವದನ್ನು ಸಂಭಾಳಿಸಲು ಶಕ್ತರಲ್ಲ, ಬೀಳಿಸಿದರೆ ಒಡೆದೇ ಹೋದೀತೆಂಬ ಭಯವೂ ನಿಮ್ಮನ್ನು ಕಾಡುತ್ತಿದೆ. ಮತ್ತೆ ಹೇಳುತ್ತೇನೆ ಕೇಳಿ.

    ಹದಿಹರೆಯದಲ್ಲಿ ನೀವು ಕನವರಿಸುವ ಪ್ರೀತಿಗಳೆಲ್ಲ ನಿಜವಾದ ಪ್ರೀತಿಗಳೇ ಅಲ್ಲ. ಅದು ಕೇವಲ ಪ್ರಮತ್ತತೆ ಅಂದರೆ ಇನ್‍ಫ್ಯಾಚುಯೇಷನ್. ಆದ್ದರಿಂದಲೇ ನೀವು ಚಿಕ್ಕಮಕ್ಕಳು ಚಾಕಲೇಟಿಗೆ ಹಠಮಾಡುವಂತೆ `ಮದುವೆಯಾದರೂ ನನ್ನ ಹತ್ತಿರ ಬಾ’ ಎಂದು ಹಠ ಮಾಡುತ್ತಿದ್ದೀರಿ. ಇದನ್ನು ಯಾರಾದರೂ ಪ್ರೀತಿಯೆನ್ನುತ್ತಾರ?

    ಗಂಡನ ಹತ್ತಿರ ಮತ್ತು ನಿಮ್ಮ ಹತ್ತಿರ ಸುಖವನ್ನು ಹಂಚಿಕೊಂಡರೆ ಆಕೆಯ ಮನಸ್ಥಿತಿ ಎಂಥ ಪಾಪಪ್ರಜ್ಞೆಯನ್ನು ಅನುಭವಿಸುತ್ತದೆ ಎನ್ನುವುದರ ಬಗ್ಗೆ ನಿಮಗೇನಾದರೂ ಕಲ್ಪನೆಯಿದೆಯೇ? ನಿಮ್ಮನ್ನು ಪ್ರೀತಿಸುವವರಿಗೆ ನೀವು ಕೊಡುವ ಉಡುಗೊರೆ `ಪಾಪಪ್ರಜ್ಞೆ’ಯೇ? ಆಕೆಗೆ ಮಕ್ಕಳಾದರೆ ಆ ಮಕ್ಕಳು ನಿಮ್ಮನ್ನು `ಅಪ್ಪ’ ಅನ್ನಬೇಕೋ? ಅಥವಾ ಆಕೆಯ ಗಂಡನನ್ನೋ? ಹೆಣ್ಣು ಎಂದರೆ ಏನೆಂದು ತಿಳಿದಿದ್ದೀರಿ ಸ್ವಾಮಿ?

    ನಿಮ್ಮನಿಮ್ಮ ಇಷ್ಟಗಳಿಗೆ ತಕ್ಕಂತೆ ಕುಣಿಯುವ ಬೊಂಬೆಗಳೇ? ಇನ್ನಾದರೂ ಎಚ್ಚೆತ್ತುಕೊಳ್ಳಿ. ಊಟ ಸೇರುವುದಿಲ್ಲ, ನಿದ್ರೆ ಬರುವುದಿಲ್ಲ, ಪದೇಪದೆ ಅಳುಬರುತ್ತದೆ ಎಂದು ಬರೆದಿದ್ದೀರಿ. ಇವೆಲ್ಲ ಮಾನಸಿಕ ಖಿನ್ನತೆಯ ಲಕ್ಷಣಗಳು. ಹೀಗೇ ಮುಂದುವರಿದರೆ ನೀವು ಐ.ಎ.ಎಸ್ ಅಲ್ಲ, ಒಂದು ಪದವಿಯನ್ನೂ ಮುಗಿಸಲಾಗುವುದಿಲ್ಲ. ನಿಮ್ಮ ಮುಂದೆ ಬದುಕು ವಿಶಾಲವಾಗಿದೆ. ಈ ಇಪ್ಪತ್ತನೇ ವಯಸ್ಸಿನಲ್ಲಿಯೇ ಯಾಕೆ ಅದನ್ನು ಅಂದಗೆಡಿಸಿಕೊಳ್ಳುತ್ತೀರಿ? ಮೊದಲು ಮನೋವೈದ್ಯರ ಹತ್ತಿರ ತೋರಿಸಿ ಖಿನ್ನತೆಯನ್ನು ಹೋಗಲಾಡಿಸಿಕೊಳ್ಳಿ.

    ಗಂಡನಿಲ್ಲದೇ ನಿಮ್ಮನ್ನು ಸಾಕಲು ನಿಮ್ಮ ತಾಯಿ ಬಹಳ ಕಷ್ಟಪಟ್ಟಿರಬಹುದು. ಒಳ್ಳೆಯ ಉದ್ಯೋಗ ಹಿಡಿದು ಮೊದಲು ತಾಯಿಗೆ ಸಂತೋಷವನ್ನು ಕೊಡಿ. ನಿಮ್ಮದೇ ಪ್ರೀತಿಯ ಬಗ್ಗೆ ಚಿಂತಿಸುತ್ತ ಸ್ವಾರ್ಥಿಗಳಾಗಬೇಡಿ. ನೀವು ಉದ್ಯೋಗ ಹಿಡಿದ ನಂತರವೂ ಆ ನಿಮ್ಮ ಹುಡುಗಿಗೆ ಇನ್ನೂ ಮದುವೆಯಾಗಿರದಿದ್ದರೆ ಅವಳನ್ನೇ ಮದುವೆಯಾಗಿ. ಆಗ ಬಹುಶಃ ಯಾರೂ ಬೇಡ ಎನ್ನಲಾರರು.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

    ಉದ್ಯೋಗ- ಮದುವೆಯ ನಡುವೆ ಮನಸ್ಸು ಗೊಂದಲದ ಗೂಡಾಗಿದೆ- ಪ್ಲೀಸ್‌ ಪರಿಹಾರ ಹೇಳಿ…

    ಅವಳೇ ಸರ್ವಸ್ವ ಎಂದು ಎಲ್ಲಾ ಕೊಟ್ಟೆ: ಈಗ ನೋಡಿದ್ರೆ ನೀನು ಆರನೆಯವ ಅಂತಿದ್ದಾಳೆ- ನನಗ್ಯಾಕೆ ಈ ಶಿಕ್ಷೆ?

    ಮಗನ ಈ ಗುಣ ನಿಖಾ ಮಾಡಿದ್ರೆ ಸರಿಹೋಗತ್ತೆ ಅಂದ್ಕೊಂಡೆ: ಆದ್ರೆ ಸೊಸೆಯನ್ನು ನೋಡೋಕಾಗ್ತಿಲ್ಲ… ಏನು ಮಾಡಲಿ?

    ಒಂದೆಡೆ ಹೆತ್ತಾಕೆ… ಇನ್ನೊಂದೆಡೆ ಜೀವದ ಗೆಳತಿ… ಇಬ್ಬರನ್ನೂ ಒಟ್ಟಿಗೆ ಆಯ್ಕೆ ಮಾಡುವಂತಿಲ್ಲ: ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts