More

  ಯುವಪೀಳಿಗೆ ಸಹಭಾಗಿತ್ವದಿಂದ ಸಂಘಟನೆ ಸದೃಢ

  ಉಡುಪಿ: ಇಂದಿನ ಯುವ ಪೀಳಿಗೆ ಸಂಘಟನೆಯಿಂದ ವಿಮುಖರಾಗುತ್ತಿದ್ದಾರೆ. ಯುವಕರನ್ನು ಸೇರಿಸಿಕೊಂಡು ಮುನ್ನಡೆದರೆ ವಿಪ್ರ ಸಂಘಟನೆಗಳು ಸದೃಢಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಭಾವಿಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

  ಭಾನುವಾರ ಪುತ್ತೂರು ಬ್ರಾಹ್ಮಣ ಮಹಾಸಭಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಗಾಂಧಿ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಹರಿಶ್ಚಂದ್ರ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್​ ಕುಮಾರ್​ ಮಂಜ ಮತ್ತು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಪರ್ಕಳ ಮುಖ್ಯ ಅತಿಥಿಗಳಾಗಿದ್ದರು.

  ಗೌರವ-ಸನ್ಮಾನ-ಪುರಸ್ಕಾರ
  ಅನೇಕ ವರ್ಷಗಳಿಂದ ಗೋಸೇವೆ ಮಾಡುತ್ತಿರುವ ಸುಜಾತಾ ಬಾಲಕೃಷ್ಣ ಪುತ್ತೂರು, ರವಿಕಾಂತ್​ ಭಟ್​ ನಿಟ್ಟೂರು ಮತ್ತು ರಾಧಾಕೃಷ್ಣ ಭಟ್​ ಪುತ್ತೂರು ಇವರನ್ನು ಸನ್ಮಾನಿಸಲಾಯಿತು. ಎಸ್​.ಎಸ್​.ಎಲ್​.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಲಯದ ವಿದ್ಯಾರ್ಥಿಗಳಾದ ಭಾರ್ಗವಿ ರಾವ್​ ಜಿ., ಕಾರುಣ್ಯ ಸೋಮಯಾಜಿ, ಮಾನ್ಯ ತಂತ್ರಿ ಪುತ್ತೂರು, ನೀರಜ್​ ಬಾಲಾಜಿ ಬಾಲ್ತಿಲ್ಲಾಯ, ಸಂಚಿತಾ ಜಿ. ಭಟ್​, ಅಂಕಿತಾ ಭಟ್​, ಮಹಿಮಾ ರಾವ್​, ವೈಭವಿ ಆಚಾರ್ಯ, ಪ್ರಮಥ್​ ಭಾಗವತ್​ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಪತ್ಬಾಂಧವ ಸಮಿತಿಯ ವತಿಯಿಂದ ಅಶಕ್ತರಿಗೆ ವೈದ್ಯಕಿಯ ಧನಸಹಾಯ ಹಸ್ತಾಂತರಿಸಲಾಯಿತು. ವಿವಿಧ ಸಾಂಸ್ಕತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
  ಸುನೀತಾ ಚೈತನ್ಯ, ಅನುಪಮಾ, ಸೌದಾಮಿನಿ ರಾವ್​, ಸುರೇಶ್​ ಕಾರಂತ್​, ವಿಜಯ್​ ಕುಮಾರ್​, ರಾಮದಾಸ ಉಡುಪ, ಚಂದ್ರಶೇಖರ ಅಡಿಗ, ಎಂ.ಆರ್​. ಆಚಾರ್ಯ, ಆಪತ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಉಡುಪ, ಕೋಶಾಧಿಕಾರಿ ಕೃಷ್ಣ್ಣಪ್ರಸಾದ್​ ಕಾರಂತ್​ ಸಹಕರಿಸಿದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೆ ಶುಭಾ ಬಾಳ್ತಿಲ್ಲಾಯ ಪ್ರಸ್ತಾವನೆಗೈದು, ಸ್ವಾಗತಿಸಿದರು. ಜಯಲಕ್ಷಿ ಭಟ್​ ಪ್ರಾರ್ಥಿಸಿದರು. ಕಾರ್ಯದರ್ಶಿ ಮಂಜುಳಾ ವಿ. ಪ್ರಸಾದ್​ ವಾರ್ಷಿಕ ವರದಿ ಮಂಡಿಸಿದರು. ಚೈತನ್ಯ ಎಂ.ಜಿ. ನಿರೂಪಿಸಿ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts