More

    ನಂಗೆ ಬಿಟ್ಟು ನೀನ್ಯಾಕೆ ಬಂದ್ಯಲೆ… ನಾ ಬಂದ್ರೆ ನಿಂಗೆ ಏನಾಯ್ತಲೇ… ಇಬ್ಬರು ಚಾಲಕರ ಜಗಳದಲ್ಲಿ ಬಸ್ಸಾಯ್ತು ಸೀಜ್​!

    ಮಂಗಳೂರು: ಆಮೇಲೆ ಬರಬೇಕಿದ್ದ ಬಸ್ಸು ಮೊದಲೇ ಬಂದಿದ್ದರಿಂದ ಎರಡು ಖಾಸಗಿ ಬಸ್​ಗಳ ಚಾಲಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನಿಂದ ಉಡುಪಿಗೆ ಸಾಗುತ್ತಿದ್ದ ವಿಶಾಲ್ ಖಾಸಗಿ ಬಸ್​ ಹಾಗೂ ನವದುರ್ಗಾ ಬಸ್ಸಿನ ಚಾಲಕರು ಹೊಡೆದಾಡಿಕೊಂಡವರು. ಟೈಂ ಕೀಪಿಂಗ್ ಕುರಿತಂತೆ ಉಚ್ಚಿಲ ಪೇಟೆಯಲ್ಲಿ ಈ ಇಬ್ಬರು ಚಾಲಕರು ಹೊಡೆದಾಡಿಕೊಂಡಿದ್ದಾರೆ.

    ಪಡುಬಿದ್ರಿಯಿಂದ ಬರುವಾಗ ಸಮಯದಲ್ಲಿ ಏರುಪೇರಾಗಿ ನವದುರ್ಗಾ ಬಸ್ಸು ಮುಂದೆ ಬಂದಿತ್ತು. ಹಿಂದಿನಿಂದ ಬಂದ ವಿಶಾಲ್ ಬಸ್ಸಿನ ಚಾಲಕ ಸಿದ್ದಿಕ್ ಕೆಳಗಿಳಿದು ನವದುರ್ಗಾ ಬಸ್ಸಿನ ಚಾಲಕ ಇಕ್ಬಾಲ್ ಅವರಿಗೆ ಥಳಿಸಿದ್ದಾರೆ.

    ಇದೇ ಬಸ್​ಗಳ ಹಿಂಬದಿಯಲ್ಲಿ ಕಾಪು ಠಾಣಾಧಿಕಾರಿ ರಾಘವೇಂದ್ರ ಅವರು ಜೀಪಿನಲ್ಲಿ ಬರುತ್ತಿದ್ದರು. ಅವರು ಈ ಘಟನೆಯ ಬಗ್ಗೆ ಪಡುಬಿದ್ರಿ ಠಾಣಾಧಿಕಾರಿ ದಿಲೀಪ್‌ರವರಿಗೆ ಮಾಹಿತಿ ನೀಡಿದ್ದಾರೆ.

    ಪಡುಬಿದ್ರಿ ಠಾಣಾಧಿಕಾರಿ ದೀಲಿಪ್‌ರವರು ಸ್ಥಳಕ್ಕೆ ಆಗಮಿಸಿ ಎರಡೂ ಬಸ್​ಗಳನ್ನು ಸೀಜ್ ಮಾಡಿ ಇಬ್ಬರು ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
    ಕೆಲದಿನಗಳ ಹಿಂದೆ ಎರಡು ಬಸ್ಸಿನ ಚಾಲಕರು ಕಾಪು ಮಾರಿಗುಡಿಯ ಹತ್ತಿರ ಕಬ್ಬಿಣದ ರಾಡು ಹಿಡಿದು ಹೊಡೆದಾಡುವ ಮಟ್ಟಕ್ಕೆ ಇಳಿದಿದ್ದು, ಇಂಥ ಪ್ರಕರಣ ಮರುಕಳಿಸಬಾರದೆಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಏನು ಬೇಕಾದ್ರೂ ಕೊಡ್ತೀನಿ, ಮಜಾ ಮಾಡೋಣ ಬಾ ಎಂದ ಸರ್ಕಾರಿ ಆಸ್ಪತ್ರೆ ನೌಕರ- ದೂರು ದಾಖಲು

    ತಾಳಿ ಕಟ್ಟುವ ಮೊದಲು ಬಾಲಕಿಗೆ ಜೀವದಾನ- ಮದುಮಗನಿಂದ ನಡೆಯಿತು ಒಂದು ಅಪೂರ್ವ ಕಾರ್ಯ

    ಅಂತ್ಯಸಂಸ್ಕಾರಕ್ಕೆ ಪುತ್ರನೇ ಬೇಕೆ? ಅಪ್ಪನ ಶವ ಹೆಗಲಮೇಲೆ ಹೊತ್ತರು- ಚಿತೆಗೆ ಕೊಳ್ಳಿ ಇಟ್ಟ ಪುತ್ರಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts