ನ್ಯೂಸ್

ಮದುವೆಯಾಗಿ 2 ತಿಂಗಳಲ್ಲೇ ಹೊಟ್ಟೆಹಿಡಿದುಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ನೇಹಾ

ಮುಂಬೈ: ಬಾಲಿವುಡ್​ ಇಂಡಸ್ಟ್ರಿಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ಗಳಿಸಿ ಲಕ್ಷಾಂತರ ಅಭಿಮಾನಿಗಳನ್ನು ಸೆಳೆದಿರುವ ಗಾಯಕಿ 32 ವರ್ಷದ ನೇಹಾ ಕಕ್ಕರ್​. ಕಂಠದಲ್ಲಿ ಸುಂದರವಾಗಿರುವ ಮೊಗ ಈಕೆಯ ಪ್ಲಸ್​ ಪಾಯಿಂಟ್​. ಇದೇ ಕಾರಣಕ್ಕೂ ನೇಹಾರ ಅಭಿಮಾನಿಗಳ ಸಂಖ್ಯೆ ಲಕ್ಷ ಲಕ್ಷ ದಾಟಿದೆ.

ಎರಡು ತಿಂಗಳ ಹಿಂದಷ್ಟೇ ಅಂದರೆ ಅಕ್ಟೋಬರ್​ನಲ್ಲಿ ನೇಹಾ ಗಾಯಕ ರೋಹನ್‌ಪ್ರೀತ್ ಸಿಂಗ್ ಅವರನ್ನು ಮದುವೆಯಾಗಿದ್ದಾರೆ. ಇದೀಗ ಪತಿಯ ಜತೆ ಫೋಟೋ ಒಂದನ್ನು ಶೇರ್​ ಮಾಡಿದ್ದು, ಇದು ಇವರ ಅಭಿಮಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದೆ.

ಇದಕ್ಕೆ ಕಾರಣ, ನೇಹಾ ತಮ್ಮ ಹೊಟ್ಟೆಯನ್ನು ಹಿಡಿದುಕೊಂಡು ಪೋಸ್​ ಕೊಟ್ಟಿದ್ದಾರೆ. ಅದರಲ್ಲಿ ಅವರ ಹೊಟ್ಟೆ ಮುಂದಕ್ಕೆ ಬಂದಿದ್ದು, ಗರ್ಭಿಣಿ ಇದ್ದಾರೆ ಎಂಬಂತೆ ಕಾಣಿಸುತ್ತಿದೆ. ಮದುವೆಯಾಗಿ ಎರಡು ತಿಂಗಳಿನಲ್ಲಿಯೇ ಇಷ್ಟು ದೊಡ್ಡ ಹೊಟ್ಟೆ ಬಂದಿರುವುದು ಅಭಿಮಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದ್ದು, ನೂರೆಂಟು ರೀತಿಯ ಕಮೆಂಟ್​ ಮಾಡುತ್ತಿದ್ದಾರೆ.

ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಜಾಣೆ ನೇಹಾ, ತಮ್ಮ ಈ ಪೋಸ್ಟ್​ನ ಕುರಿತು ಏನನ್ನೂ ಬರೆದಿಲ್ಲ, ಬದಲಿಗೆ ಹ್ಯಾಷ್​ ಟ್ಯಾಗ್​ ಹಾಕಿ ಕಾಳಜಿವಹಿಸು (#KhyaalRakhyaKar) ಎಂದಷ್ಟೇ ಬರೆದಿದ್ದಾರೆ.

ಇದಕ್ಕೆ ಪತಿ ರೋಹನ್ ಪ್ರೀತ್ ಕಮೆಂಟ್ ಮಾಡಿದ್ದು, ಇನ್ನು ಮುಂದೆ ನಾನು ನಿನ್ನನ್ನು ಇನ್ನಷ್ಟು ಹೆಚ್ಚು ಕೇರ್ ಮಾಡಬೇಕು ನೇಹೂ ಎಂದಿದ್ದಾರೆಯೇ ಹೊರತು ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದಾಗಲೀ, ಗರ್ಭಿಣಿ ಎಂದಾಗಲೇ ಏನೂ ಬರೆದಿಲ್ಲ. ಆದ್ದರಿಂದ ಸದಾ ತಮ್ಮ ಪ್ರೀತಿಯ ತಾರೆಗಳನ್ನುಫಾಲೋ ಮಾಡುತ್ತಿರುವ ಅಭಿಮಾನಿಗಳಿಗೆ ಇದು ಸಾಕಷ್ಟು ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದ್ದು, ಈ ಸಂಬಂಧ ಕಮೆಂಟ್​ಗಳು ಸುಳಿದಾಡುತ್ತಿವೆ.

ಬಹಳಷ್ಟು ಜನ ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನೊಂದಷ್ಟು ಜನ ನೀವು ಪ್ರೆಗ್ನೆಂಟ್ ಆಗಿದ್ರೆ ಕನ್ಫರ್ಮ್ ಮಾಡಿ ಎಂದಿದ್ದಾರೆ.

ಅಂದಹಾಗೆ ಇವರ ವಿವಾಹ ಆದದ್ದು, ಅಕ್ಟೋಬರ್ 24ರಂದು ವಿವಾಹಿತರಾಗಿದ್ದಾರೆ. ದುಬೈನಲ್ಲಿ ಹನಿಮೂನ್ ಮಾಡಿದೆ ಈ ಜೋಡಿ. ಮದುವೆಯ ನಂತರವೂ ನೇಹಾ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದರು.