ನ್ಯೂಸ್

VIDEO | ಬ್ರಾಹ್ಮಣರ ಮೂಲ ಭಾರತವಲ್ಲ… ರಷ್ಯಾದಿಂದ ಬಂದು ನೆಲೆಸಿದ್ದಾರೆ; ಚರ್ಚೆಗೆ ಕಾರಣವಾದ ಆರ್​ಜೆಡಿ ನಾಯಕನ ಹೇಳಿಕೆ

ಬಿಹಾರ: ಬ್ರಾಹ್ಮಣರು ಈ ದೇಶಕ್ಕೆ ಸೇರಿಲ್ಲ. ಅವರು ರಾಷ್ಯಾದಿಂದ ಬಂದು ಪ್ರಸ್ತುತ ಭಾರತದಲ್ಲಿ ನೆಲೆಸಿದ್ದಾರೆ ಎಂಬುದು ಡಿಎನ್​ಎ ಪರೀಕ್ಷೆಯಿಂದ ಬಹಿರಂಗವಾಗಿದೆ ಎಂದು ಆರ್​ಜೆಡಿ ನಾಯಕ ಯದುವಂಶ್ ಕುಮಾರ್ ಯಾದವ್ ಹೇಳಿದ್ದಾರೆ. ಇದೀಗ ಆರ್​ಜೆಡಿ ನಾಯಕ ಆಡಿರುವ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜತೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಭಾರತದಿಂದ ಓಡಿಸಿ!

ಆರ್​ಜೆಡಿ ನಾಯಕ ಯದುವಂಶ್ ಕುಮಾರ್ ಯಾದವ್ ಮಾತನಾಡುತ್ತಾ, ಬ್ರಾಹ್ಮಣರು ನಮ್ಮನ್ನು ಒಡೆದು ಆಳಲು ಪ್ರಯತ್ನಿಸುತ್ತಿದ್ದಾರೆ. ಅವರೆಲ್ಲರೂ ರಷ್ಯಾ ಮತ್ತು ಯುರೋಪಿಯನ್ ದೇಶಗಳಿಂದ ಬಂದವರು. ಅವರನ್ನು ಅಲ್ಲಿಂದ ಗಡಿ ಪಾರು ಮಾಡಿದ ಭಾರತಕ್ಕೆ ಬಂದಿದ್ದಾರೆ. ಹೀಗಾಗಿ ನಾವು ಅವರನ್ನು ಇಲ್ಲಿಂದ ಓಡಿಸಬೇಕು ಎಂದು ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ನಾಯಕರಿಂದ ವಾಗ್ದಾಳಿ

ನಿರ್ಮಲಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಕುರಿತ ಚರ್ಚೆಯ ಸಂದರ್ಭದಲ್ಲಿ ಆರ್​ಜೆಡಿ ನಾಯಕ ಯದುವಂಶ್ ಕುಮಾರ್ ಯಾದವ್ ಬ್ರಾಹ್ಮಣರ ಬಗ್ಗೆ ಟೀಕಿಸಿರುವುದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಯದುವಂಶ್ ಕುಮಾರ್ ಯಾದವ್ ಅವರ ಮಾನಸಿಕ ಸ್ಥಿತಿ ಸರಿಯಿಲ್ಲ. ಮಾನಸಿಕ ಸಮತೋಲನ ಕಳೆದುಕೊಂಡವರು ಮಾತ್ರ ಇಂತಹ ಹೇಳಿಕೆ ನೀಡಲು ಸಾಧ್ಯ ಎಂದು ಬಿಜೆಪಿ ಶಾಸಕ ನೀರಜ್ ಬಬ್ಲು ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್)