More

    ನೀವು ಕೊಟ್ಟಿರುವ 40% ಹಣದಲ್ಲೇ ಬಿಜೆಪಿ ಶಾಸಕರನ್ನು ಖರೀದಿಸುತ್ತದೆ: ರಾಹುಲ್ ಗಾಂಧಿ

    ತುರುವೇಕೆರೆ: ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿರಲಿಲ್ಲ. ಆದರೂ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿ ಲೋಕತಂತ್ರವನ್ನು ಬಿಜೆಪಿ ಹಾಳು ಮಾಡಿದೆ ಎಂದು ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

    ಪಟ್ಟಣದಲ್ಲಿ ಕೈ ಅಭ್ಯರ್ಥಿ ಬೆಮೆಲ್ ಕಾಂತರಾಜು ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಕಳೆದ 3 ವರ್ಷಗಳಲ್ಲಿ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಕರ್ನಾಟಕದ ಬಿಜೆಪಿ ಸರ್ಕಾರವನ್ನು 40% ಸರ್ಕಾರ ಅಂತ ಕರೆಯುತ್ತಿದ್ದಾರೆ. ಸಣ್ಣ ಸಣ್ಣ ಕೆಲಸಕ್ಕೂ 40% ತೆಗೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

    ಇದನ್ನೂ ಓದಿ: ಕಾಫಿ ಮಂಡಳಿ ಮಾದರಿಯಲ್ಲಿ ‘ರಾಜ್ಯ ಅಡಿಕೆ ಮಂಡಳಿ’ ಸ್ಥಾಪನೆ; ಇದು ಬಿಜೆಪಿ ಚುನಾವಣಾ ಭರವಸೆ…

    40% ಲಂಚದ ವಿಚಾರ ಪ್ರಧಾನಿಗೆ ಗೊತ್ತಿದೆ

    ಸರ್ಕಾರದ ಕೆಲಸ ಜನರಿಗೆ ಉದ್ಯೋಗ, ಶಿಕ್ಷಣ, ಆರೋಗ್ಯಕ್ಕೆ ಹಣ ನೀಡುವುದು. ಆದರೆ ಬಿಜೆಪಿ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ. ಎಲ್ಲಾ ಕೆಲಸದ ಮೇಲೆ 40% ಲಂಚ ತೆಗೆದುಕೊಂಡಿದ್ದಾರೆ. ಇದು ಪ್ರಧಾನಿಗೆ ಗೊತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ನನ್ನ ಹತ್ತಿರವು 40% ತಗೆದೊಂದಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕೂಡ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

    ಬಿಜೆಪಿ ಶಾಸಕರೊಬ್ಬರು ಸಾರ್ವಜನಿಕವಾಗಿ ಈಗಿನವರು 2 ಸಾವಿರ ಕೋಟಿ ರೂ. ಕೊಟ್ಟು ಸಿಎಂ ಆಗಿದ್ದಾರೆ ಅಂತ ಹೇಳಿದ್ದಾರೆ. ಇದು ಕರ್ನಾಟಕದ ಪ್ರತಿಯೊಬ್ಬ ಜನರಿಗೆ ಗೊತ್ತಿದ್ದ ಮೇಲೆ, ಅದು ಪ್ರಧಾನಿಗೂ ಗೊತ್ತಿರಲ್ವಾ? ಪ್ರಧಾನಿ ಇದನ್ನು ತಡೆಯುವ ಪ್ರಯತ್ನ ಯಾಕೆ ಮಾಡಿಲ್ಲ. ಕರ್ನಾಟಕದಲ್ಲಿ ಮತ ಕೇಳಲು ಬರುವ ಪ್ರಧಾನಿ, ಮೊದಲು ಭ್ರಷ್ಟಚಾರ ತಡೆಯಲು ಏನು ಕ್ರಮ ಕೈಗೊಂಡಿದ್ದೀರಾ ಎಂದು ಇಲ್ಲಿನ ಜನರಿಗೆ ಹೇಳಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.

    ಇದನ್ನೂ ಓದಿ: ನಿವೃತ್ತಿ ಹೊಂದಿದ ‘ಏಂಜಲ್​’ಗೆ ಸನ್ಮಾನ; ಅದ್ಧೂರಿಯಾಗಿ ಬೀಳ್ಕೊಟ್ಟ ಕೆಜಿಎಫ್ ಪೊಲೀಸರು

    ಚುನಾವಣೆ ನಡೆಯುತ್ತಿರುವುದು ಕರ್ನಾಟಕದ ಭವಿಷ್ಯಕ್ಕಾಗಿ

    ರಾಜ್ಯದಲ್ಲಿ ಕಳೆದ ಮೂರು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? ಮುಂದೆ ಅಧಿಕಾರಕ್ಕೆ ಬಂದ ಮೇಲೆ ಏನು ಮಾಡುತ್ತೀರಾ ಎಂದಾದರೂ ಹೇಳಿ. ಚುನಾವಣೆ ನಡೆಯುತ್ತಿರುವುದು ಕರ್ನಾಟಕದ ಭವಿಷ್ಯಕ್ಕಾಗಿ ಎಂದು ರಾಹುಲ್ ಎಚ್ಚರಿಸಿದರು.

    ನಾವು ಪ್ರಚಾರದ ವೇಳೆ ಸಿದ್ದರಾಮಯ್ಯ, ಡಿಕೆಶಿ ರಾಜ್ಯಕ್ಕೆ ಏನು ಮಾಡಿದರು, ಏನು ಕೊಡುಗೆ ಕೊಟ್ಟರು ಎಂದು ಹೇಳುತ್ತೇವೆ. ಆದರೆ ನೀವು ಬಂದು ಪ್ರಚಾರದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಹೆಸರನ್ನು ಹೇಳುವುದಿಲ್ಲ. ಮೋದಿ ಬಗ್ಗೆ ಮಾತ್ರ ಹೇಳುತ್ತೀರಾ. ಒಂದೆರಡು ಬಾರಿಯಾದರೂ ಹೆಸರು ಹೇಳಿದಾಗ ಅವರಿಗೂ ಖುಷಿಯಾಗುತ್ತದೆ ಎಂದು ವ್ಯಂಗ್ಯವಾಡಿದರು.

    ಬಿಜೆಪಿಯವರಿಗೆ 40 ಎಂಬ ನಂಬರ್ ಮೇಲೆ ಬಹಳ ಪ್ರೀತಿ ಇದೆ!

    ಬಿಜೆಪಿ 40% ಲಂಚ ಪಡೆಯುತ್ತಾ, ಬೆಲೆ ಏರಿಕೆ ಮಾಡಿ ದೋಚಿದರೂ, ನಾವು ಇಡುವ ಮೊದಲ ಹೆಜ್ಜೆ ಹೆಣ್ಣು ಮಕ್ಕಲಿಗೆ 2 ಸಾವಿರ ರೂಪಾಯಿ ಹಣ ನೀಡುವುದು. 200 ಯೂನಿಟ್ ವಿದ್ಯುತ್, ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ, ಬಸ್​ನಲ್ಲಿ ಓಡಾಡಲು ಮಹಿಳೆಯರಿಗೆ ಉಚಿತ ಪಯಣ ಯೋಜನೆ ಕೊಡುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆಯಿತ್ತರು.

    ಇದನ್ನೂ ಓದಿ: ಪುತ್ತೂರಿಗೆ ಯಾರಾಗುವರು ಮುತ್ತು?: ಸಂಘಪರಿವಾರದ ಭದ್ರ ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸದ್ದು 

    ಬಿಜೆಪಿಯವರಿಗೆ 40 ಎಂಬ ನಂಬರ್ ಮೇಲೆ ಬಹಳ ಪ್ರೀತಿ ಇದೆ. ಪ್ರತಿ ಕೆಲಸ ಆದಾಗ 40% ಕಿತ್ತುಕೊಂಡಿದ್ದಾರೆ. ಹೀಗಾಗಿ ಬಿಜೆಪಿಗೆ 40 ಸೀಟ್ ಕೊಡಿ, ಕಾಂಗ್ರೆಸ್​ಗೆ 150 ಸೀಟ್ ಕೊಡಿ. ನಿಮ್ಮಿಂದ ಕಿತ್ತುಕೊಂಡಿರುವ ಹಣದಿಂದಲ್ಲೇ ಶಾಸಕರನ್ನು ಖರೀದಿ ಮಾಡುತ್ತಾರೆ. 150 ಸೀಟು ಕಾಂಗ್ರೆಸ್​ಗೆ ಕೊಟ್ಟರೆ ಶಾಸಕರನ್ನು ಖರೀದಿ ಮಾಡಲು ಸಾಧ್ಯವಾಗಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts