More

    ‘ನಾನು ಹೇಳಿದ್ದೂ ಆಯ್ತು… ಅವರು ಉತ್ತರಿಸಿದ್ದೂ ಆಯ್ತು’: ‘ವಿಷಕಂಠ’ ಹೇಳಿಕೆ ವಿವಾದ ತಣ್ಣಗಾಗಿಸುವ ಪ್ರಯತ್ನದಲ್ಲಿ ಖರ್ಗೆ!

    ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರು ವಿಷ ಸರ್ಪವಿದ್ದಂತೆ ಎಂದು ಹೇಳಿದ್ದರು. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು ಮಾಡಿದ್ದು ಮಾತ್ರವಲ್ಲದೆ, ಬಿಜೆಪಿ ನಾಯಕರು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಹಾವು ದೈವಸ್ವರೂಪಿ

    ಪ್ರಧಾನಿ ಮೋದಿ ನಿನ್ನೆ ಚುನಾವಣಾ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಾ, ಕಾಂಗ್ರೆಸ್​​ನವರು ನನಗೆ ವಿಷದ ಹಾವು ಎಂದು ಹೇಳಿದ್ದಾರೆ. ಯಾವುದೇ ಬೇಸರವಿಲ್ಲದೆ ಅದನ್ನು ನಾನು ಸ್ವೀಕರಿಸುತ್ತೇನೆ. ಹಾವು ದೈವಸ್ವರೂಪಿ, ಈಶ್ವರನ ಆಭರಣ. ಜನರು ನನಗೆ ಈಶ್ವರನ ಸಮಾನ. ಈಶ್ವರರೂಪಿ ಜನರ ಕೊರಳಿನಲ್ಲಿ ಹಾವಾಗಿರಲು ಬಯಸುವೆ. ಕಾಂಗ್ರೆಸ್​ನ ಈ ಬೈಗುಳಕ್ಕೆ ಮೇ 10ರಂದು ವೋಟಿನ ಮೂಲಕ ಜನರು ಉತ್ತರಿಸಲಿದ್ದಾರೆ ಎಂದು ಹೇಳಿದ್ದರು.

    ನಾನು ಹೇಳಿದ್ದು ಆಯ್ತು, ಅದಕ್ಕೆ ಅವರು ಉತ್ತರ‌ ಕೊಟ್ಟಿದ್ದು ಆಯ್ತು…

    ಇದೀಗ ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾ, ವಿವಾದವನ್ನು ತಣ್ಣಗಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. “ನಾನು ಹೇಳಿದ್ದು ಆಯ್ತು, ಅದಕ್ಕೆ ಅವರು ಉತ್ತರ‌ ಕೊಟ್ಟಿದ್ದು ಆಯ್ತು. ಅಲ್ಲಿಗೆ ಅದು ಮುಕ್ತಾಯ ಆಯ್ತು” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಅಮಿತ್ ಷಾ ತಿರುಗೇಟು

    ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪವಿದ್ದಂತೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಅಮಿತ್ ಷಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts