More

    ಜಿಂಕೆ ಮರಿ ರಕ್ಷಿಸಿದ ಕುರಿಗಾಹಿ

    ಕನಕಗಿರಿ: ತಾಲೂಕಿನ ಗುಡುದೂರಿನಲ್ಲಿ ನಾಯಿಗಳ ದಾಳಿಗೆ ತುತ್ತಾಗಿ ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ಕುರಿಗಾಯಿಗಳು ಅದನ್ನು ಆರೈಕೆ ಮಾಡಿ ಅರಣ್ಯ ಇಲಾಖೆಗೆ ಗುರುವಾರ ಒಪ್ಪಿಸಿದ್ದಾರೆ.

    ತಾಲೂಕಿನ ನವಲಿ ಭಾಗದ ಗುಡ್ಡಗಾಡು ಪ್ರದೇಶದಲ್ಲಿ 45 ದಿನದ ಜಿಂಕೆ ಮರಿ ನಾಯಿಗಳ ದಾಳಿಗೆ ಕಾಲು ಮುರಿದುಕೊಂಡು ನರಳಾಡುತ್ತಿದ್ದು, ಇದ್ದನ್ನು ಕಂಡ ಕುರಿಗಾಯಿ, ಪಟ್ಟಣದ ನಿರ್ಲೂಟಿ ರಸ್ತೆಯ ಆಯುರ್ವೇದಿಕ್ ಎಲುಬು ಮತ್ತು ಕೀಲು ಚಿಕಿತ್ಸೆ ನೀಡುವ ಕನಕಪ್ಪ ಯಾದವ ಬಳಿ ಬಿಟ್ಟಿದ್ದರು. ಎರಡು ದಿನಗಳ ಕಾಲ ಕನಕಪ್ಪ ಆರೈಕೆ ಮಾಡಿ, ಪಶು ವೈದ್ಯರ ಬಳಿ ಜ್ವರದ ಚುಚ್ಚು ಮದ್ದು ಹಾಕಿಸಿದ್ದಾರಲ್ಲದೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ವೈದ್ಯನ ಮನೆಗೆ ಅರಣ್ಯ ಗಸ್ತು ಪಾಲಕ ಶಿವಕುಮಾರ ಹಾಗೂ ನೌಕರ ಈರಪ್ಪ ಪಲ್ಲೇದ್ ತೆರಳಿ ರಕ್ಷಿಸಿದ ಜಿಂಕೆ ಮರಿಯನ್ನು ಪಡೆದು ಕಮಲಾಪುರದ ಪ್ರಾಣಿ ಸಂಗ್ರಹಾಲಯಕ್ಕೆ ಹಸ್ತಾಂತರಿಸಿದ್ದಾರೆ.

    ಜಿಂಕೆ ಮರಿ 45ದಿನಗಳದ್ದಾಗಿರಬಹುದು. ಕುರಿಗಾಯಿಗಳು ರಕ್ಷಣೆ ಮಾಡಿ ವೈದ್ಯ ಕನಕಪ್ಪ ಯಾದವ್ ಬಳಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಜಿಂಕೆ ಮರಿಯನ್ನು ಕಮಲಾಪುರ ಪ್ರಾಣಿ ಸಂಗ್ರಹಾಲಯಕ್ಕೆ ಒಪ್ಪಿಸಲಾಗಿದೆ.
    ಚಂದ್ರಶೇಖರ್ ರಾಠೋಡ್
    ಕಾರಟಗಿ ಉಪವಲಯ ಅರಣ್ಯಾಧಿಕಾರಿ ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts