ನ್ಯೂಸ್

ನಟ ರವಿತೇಜ ಫ್ಯಾನ್ಸ್​ಗೆ ಇಲ್ಲಿದೆ ಸಿಹಿ ಸುದ್ದಿ!

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಮಾಸ್ ಮಹಾರಾಜ, ನಟ ರವಿತೇಜ ಅಭಿನಯದ ಬಹುನಿರೀಕ್ಷಿತ 'ಈಗಲ್' ಸಿನಿಮಾದ ಬಗ್ಗೆ ಚಿತ್ರತಂಡದಿಂದ ಹೊಸ ಮಾಹಿತಿಗಳು ಹೊರಬರುತ್ತಿದ್ದು, ಇದೀಗ ಚಿತ್ರದ ಬಿಡುಗಡೆ ದಿನಾಂಕ ಎಂದು? ಎಂಬುದರ ಮಾಹಿತಿ ಅಧಿಕೃತವಾಗಿ ಘೋಷಣೆಯಾಗಿದೆ.

ಸದ್ಯ ಪೋಸ್ಟರ್​ ಮೂಲಕವೇ ಟಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡಿದ್ದ 'ಈಗಲ್'​ ಚಿತ್ರವು ಜನವರಿ, 13 2024 ರಂದು ಸಂಕ್ರಾಂತಿ ಹಬ್ಬದ ಆಸುಪಾಸಿನಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಕುರಿತಂತೆ ಚಿತ್ರ ತಯಾರಕರು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಆ್ಯಕ್ಷನ್-ಥ್ರಿಲ್ಲರ್ ಜಾನರ್​ ಒಳಗೊಂಡ ಈಗಲ್​ ಸಿನಿಮಾದ ಕಿರು ಗ್ಲಿಂಪ್ಸ್ ವಿಡಿಯೋ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಚಿತ್ರದಲ್ಲಿ ರವಿತೇಜ ಮತ್ತು ಅನುಪಮಾ ಪರಮೇಶ್ವರನ್ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕಾವ್ಯಾ ಥಾಪರ್, ನವದೀಪ್, ಶ್ರೀನಿವಾಸ್ ಅವಸರಾಳ, ಮಧುಬಾಲಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).