ಮುಂಬೈ: ಅನೈತಿಕ ಸಂಪರ್ಕ, ಲೈಂಗಿಕ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನಟಿಯೊಬ್ಬರು ಉದ್ಯಮಿಯೊಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಂಜಾನಿಯಾದ ಅನಿವಾಸಿ ಭಾರತೀಯ ಉದ್ಯಮಿ ವಿರೇನ್ ಪಟೇಲ್ (41) ಆರೋಪಿ. ಈತನ ವಿರುದ್ಧ ನಟಿ ಹಾಗೂ ನಿರೂಪಕಿಯೂ ಆಗಿರುವ 34 ವರ್ಷದ ಮಹಿಳೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ವಾರ ಈ ದೂರು ನೀಡಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಮುಂಬೈನ ಅಂಧೇರಿ ಪ್ರದೇಶದಲ್ಲಿ 2022ರ ಅಕ್ಟೋಬರ್ನಲ್ಲಿ ಫ್ರೆಂಡ್ ಬರ್ತ್ಡೇ ಪಾರ್ಟಿಯಲ್ಲಿ ನಾನು ವಿರೇನ್ನನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಆ ದಿನ ನನ್ನ ಕಾಂಟ್ಯಾಕ್ಟ್ ನಂಬರ್ ತೆಗೆದುಕೊಂಡಿದ್ದ ವಿರೇನ್, ಬಳಿಕ ಮೆಸೇಜ್-ಕಾಲ್ ಮಾಡಲು ಆರಂಭಿಸಿದ್ದ. ನಂತರ ಸ್ನೇಹಿತರಾದ ನಾವು ಪರಸ್ಪರ ಐಡಿಯಾಗಳನ್ನು ಹಂಚಿಕೊಳ್ಳುತ್ತಿದ್ದೆವು, ಒಬ್ಬರಿಗೊಬ್ಬರು ನೆರವಾಗುತ್ತಿದ್ದೆವು. ಇದರಿಂದ ನಮ್ಮ ನಡುವಿನ ಬಂಧ ಗಾಢವಾಯಿತು ಎಂದು ನಟಿ ದೂರಿನಲ್ಲಿ ವಿವರಿಸಿದ್ದಾರೆ.
ಆತ 2023ರ ಫೆ. 14ರಂದು ನನ್ನನ್ನು ಫ್ಲ್ಯಾಟ್ಗೆ ಕರೆಸಿಕೊಂಡು ತನ್ನ ಜತೆಗಿರುವಂತೆ ಹೇಳಿದ್ದಲ್ಲದೆ ಮದುವೆ ಆಗುವುದಾಗಿ ಪ್ರಪೋಸ್ ಮಾಡಿದ. ನಾವಿಬ್ಬರೂ ಸಿಂಗಲ್ ಆಗಿದ್ದರಿಂದ ಹಾಗೂ ಇಬ್ಬರೂ ಗುಜರಾತಿ ಸಮುದಾಯದವರೇ ಆಗಿರುವುದರಿಂದ ನಾನು ಒಪ್ಪಿದ್ದು, ನನ್ನ ಮನೆಯವರಿಗೂ ವಿಷಯ ತಿಳಿಸಿದ್ದೆ ಎಂದೂ ನಟಿ ವಿವರಿಸಿದ್ದಾರೆ.
ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ನಂತರ ಇದೇ ಮಾರ್ಚ್ 28ರಂದು ಪಾನಮತ್ತನಾಗಿ ಮನೆಗೆ ಬಂದಿದ್ದ ವಿರೇನ್ ಕೊಠಡಿಗೆ ಹೋಗಿ ಮಲಗಿದ್ದ. ಸ್ವಲ್ಪ ಹೊತ್ತಿನ ಬಳಿಕ ನನ್ನ ಬೆಡ್ರೂಮ್ಗೆ ಬಂದ ವಿರೇನ್, ನನ್ನನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ನನ್ನ ಬೆಡ್ನಲ್ಲೇ ಮಲಗಿದ. ನಂತರ ಎಚ್ಚರಗೊಂಡ ಆತ ನನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ. ರಾತ್ರಿ ಆಗಿದ್ದರ ಕುರಿತು ನಾನು ಬೆಳಗ್ಗೆ ಅಳುತ್ತಿದ್ದಾಗ, ಡಿಸೆಂಬರ್ನಲ್ಲಿ ನಾವು ಮದುವೆ ಆಗಲಿದ್ದೇವಲ್ಲ ಎಂದು ಹೇಳಿ ಸಂತೈಸಿದ್ದ ಎಂದೂ ನಟಿ ವಿವರಿಸಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಏಪ್ರಿಲ್ 11ರಂದು ನನ್ನನ್ನು ಅಲಿಬಾಗ್ನಲ್ಲಿರುವ ಆತನ ಗೆಳೆಯನ ಫಾರ್ಮ್ಹೌಸ್ಗೆ ಕರೆದೊಯ್ದಿದ್ದ ವಿರೇನ್, ಅಲ್ಲಿ ಕೂಡ ನನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಮುಂದಾದ. ನಾನು ನಿರಾಕರಿಸಿದ್ದಕ್ಕೆ, ನನಗೆ ಹೊಡೆದು ಹಿಂಸಿಸಿದ. ಇದೇ ರೀತಿ ಆತ ನನ್ನೊಂದಿಗೆ ಹಲವು ಬಾರಿ ನಡೆದುಕೊಂಡಿದ್ದ ಎಂದು ನಟಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಮುಂಬೈನ ಎನ್ಎಂ ಜೋಶಿಮಾರ್ಗ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. -ಏಜೆನ್ಸೀಸ್