ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಮೇಶ್ ಜಾರಕಿಹೊಳಿಗೆ ಕರೊನಾ ಪಾಸಿಟಿವ್ ಬಂದಿದ್ದರಿಂದ ಗೋಕಾಕ್ನ ಆಸ್ಪತ್ರೆಗೆ ಏ.4ರಂದು ದಾಖಲಾಗಿದ್ದರು. ಜಾರಕಿಹೊಳಿಯ ಕಾರು ಚಾಲಕ ಹಾಗೂ ಓರ್ವ ಅಡುಗೆ ಸಿಬ್ಬಂದಿಗೂ ಕರೊನಾ ಪಾಸಿಟಿವ್ ಬಂದಿದ್ದು, ಇವರಿಬ್ಬರೂ ಹೋಮ್ ಐಸೋಲೇಷನ್ನಲ್ಲಿದ್ದಾರೆ.
ಶುಗರ್ ಮತ್ತು ಬಿಪಿ ಹೆಚ್ಚಾಗಿದ್ದರಿಂದ ಅವರನ್ನ ಕೋವಿಡ್ ವಾರ್ಡ್ನ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರು ಇನ್ನೂ ಮೂರ್ನಾಲ್ಕು ದಿನ ಐಸಿಯುನಲ್ಲೇ ಇರಬೇಕಾಗುತ್ತೆ ಎಂದು ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್ ಹೇಳಿದ್ದರು. ಇಂದು(ಬುಧವಾರ) ಜಾರಕಿಹೊಳಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಹೋಂ ಐಸೋಲೇಷನ್ನಲ್ಲಿ ಇರಲಿದ್ದಾರೆ.
ಇತ್ತ ವಿಚಾರಣೆಗೆ ಸಿಡಿ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದ್ದು, ಕರೊನಾ ನೆಪದಲ್ಲಿ ವಿಚಾರಣೆಯಿಂದ ತಾತ್ಕಾಲಿಕ ರಿಲೀಫ್ ಪಡೆಯಲೆಂದೇ ನಾಟಕ ಮಾಡಲಾಗುತ್ತಿದೆ ಎಂಬ ಟೀಕೆಯೂ ಕೇಳಿಬಂದಿತ್ತು. ಇದೀಗ ಹೋಂ ಐಸೋಲೇಷನ್ಗೆ ಒಳಪಡಬೇಕಿರುವುದರಿಂದ ಸದ್ಯ ವಿಚಾರಣೆಗೆ ಹಾಜರ್ ಆಗುವುದು ಅನುಮಾನ.