ನ್ಯೂಸ್

ಬಿಜೆಪಿ-RSS ಎಷ್ಟೇ ದ್ವೇಷ ಹರಡಿದರೂ ಭಾರತೀಯರ DNAಯಲ್ಲೇ ಪ್ರೀತಿ ತುಂಬಿದೆ: ರಾಹುಲ್ ಗಾಂಧಿ

ರಾಯ್​ಗಢ: ರಾಹುಲ್​ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕರು ನಡೆಸುತ್ತಿರುವ ಭಾರತ್​ ಜೋಡೋ ನ್ಯಾಯ್​ ಯಾತ್ರೆ ಎರಡು ದಿನಗಳ ಬಿಡುವಿ ಬಳಿಕ ಪುನಾರಂಭಗೊಂಡಿದ್ದು, ದೇಶದ ಮೂಲೆ ಮೂಲೆಗಳಲ್ಲಿ ಹಿಂಸೆ ಹರಡುತ್ತಿದೆ. ಭಾಷೆ, ಜನಾಂಗದ ಆಧಾರದಲ್ಲಿ ಹಿಂಸೆ ಹರಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಛತ್ತೀಸ್​ಗಢದ ರಾಯ್​ಗಢದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್​, ದೇಶದಲ್ಲಿ ಆರ್‌ಎಸ್‌ಎಸ್‌ – ಬಿಜೆಪಿ ದ್ವೇಷ ಹರಡುವ ಕೆಲಸದಲ್ಲಿ ತೊಡಗಿದ್ದು, ಎಷ್ಟೇ ದ್ವೇಷ ಹರಡಿದರೂ ಭಾರತೀಯರ ಡಿಎನ್‌ಎಯಲ್ಲಿಯೇ ಪ್ರೀತಿ ತುಂಬಿದೆ.

ಸದ್ಯ ದೇಶದ ಮೂಲೆ ಮೂಲೆಗಳಲ್ಲಿ ಹಿಂಸೆ ಹರಡುತ್ತಿದೆ. ಭಾಷೆ, ಜನಾಂಗದ ಆಧಾರದಲ್ಲಿ ಹಿಂಸೆ ಹರಡಲಾಗುತ್ತಿದೆ. ಇಂತಹ ಚಿಂತನೆಗಳು ದೇಶವನ್ನು ದುರ್ಬಲಗೊಳಿಸುತ್ತವೆ. ದೇಶದಲ್ಲಿ ಆರ್‌ಎಸ್‌ಎಸ್‌ – ಬಿಜೆಪಿ ದ್ವೇಷ ಹರಡುವ ಕೆಲಸದಲ್ಲಿ ತೊಡಗಿದ್ದು, ಎಷ್ಟೇ ದ್ವೇಷ ಹರಡಿದರೂ ಭಾರತೀಯರ ಡಿಎನ್‌ಎಯಲ್ಲಿಯೇ ಪ್ರೀತಿ ತುಂಬಿದೆ. ಈ ದೇಶದಲ್ಲಿ ದ್ವೇಷಕ್ಕೆ ಜಾಗವಿಲ್ಲ. ಭಿನ್ನ ಚಿಂತನೆಗಳನ್ನು, ನಂಬಿಕೆಗಳನ್ನು ಹೊಂದಿರುವವರು ಒಟ್ಟಾಗಿ ಬಾಳುತ್ತಿದ್ದಾರೆ.

ರಕ್ಷಣಾ ಇಲಾಖೆಯ ಗುತ್ತಿಗೆಗಳನ್ನು ಅದಾನಿಗೆ ನೀಡಲಾಗುತ್ತಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದಕ್ಕೆ ನನ್ನ ಸದಸ್ಯತ್ವವನ್ನೇ ರದ್ದುಗೊಳಿಸಲಾಯಿತು. ಅಲ್ಲದೇ ನನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಹೇಳಲಾಯಿತು. ಜನರ ಹೃದಯದಲ್ಲಿ ವಾಸಿಸುವ ನನಗೆ ಮನೆಯ ಅಗತ್ಯವಿಲ್ಲ. ಅಂಬಾನಿಯಂತಹ ಉದ್ಯಮಿಗಳಿಂದ ಭಾರತದ ಮಾರುಕಟ್ಟೆಯಲ್ಲಿ ಚೀನಾದ್ಲಿ ತಯಾರಾದ ವಸ್ತುಗಳು ಮಾರಾಟವಾಗುತ್ತಿದೆ. ಇದರಿಂದ ಚೀನಾ ಮತ್ತು ಅಂಬಾನಿಯ ಜೇಬು ತುಂಬುತ್ತಿದೆ. ಈ ಮೊಬೈಲ್‌ಗಳು ಛತ್ತೀಸಗಢದಲ್ಲಿಯೇ ತಯಾರಾಗಬೇಕೆಂಬುದು ನನ್ನ ಕನಸಾಗಿದೆ.

ರೈತರ ಆತ್ಮಹತ್ಯೆ, ಕಾರ್ಮಿಕರ ಪ್ರತಿಭಟನೆಗಳನ್ನು ತೋರಿಸದ ಮಾಧ್ಯಮಗಳು, ಅಂಬಾನಿ–ಅದಾನಿ ಮಕ್ಕಳ ಮದುವೆ, ವಿಶ್ವಕಪ್‌ ಪಂದ್ಯಗಳಂತಹ ವಿಷಯಗಳನ್ನಷ್ಟೇ ಬಿತ್ತರಿಸುತ್ತವೆ. ಜನರಿಗೆ ಸತ್ಯ ದರ್ಶನ ಮಾಡಲು, ಜನರ ಜೊತೆ ಸಂಪರ್ಕ ಜೋಡಿಸುವುದಕ್ಕೋಸ್ಕರವೇ ನಾನು ಈ ಯಾತ್ರೆ ಆರಂಭಿಸಬೇಕಾಯಿತು ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.