ರಾಜ್ಯಸಭೆ ಚುನಾವಣೆ; ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್ ಅವರನ್ನು ನಾಮನಿರ್ದೇಶನ ಮಾಡಿದ ಟಿಎಂಸಿ ಸರ್ಕಾರ

Sagarika Ghose
Published on

ಕಲ್ಕತ್ತಾ: ಮುಂಬರುವ ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿದ್ದು, ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್ ಅವರಿಗೂ ಟಿಕೆಟ್​ ನೀಡಿದೆ. ಸುಶ್ಮಿತಾ ದೇವ್, ಎಂ.ಡಿ. ನಾದಿಮುಲ್ ಹಕ್ ಮತ್ತು ಮಮತಾ ಬಾಲಾ ಠಾಕೂರ್ ಅವರಿಗೆ ರಾಜ್ಯಸಭೆ ಚುನಾವಣೆಯ ಟಿಕೆಟ್​ ನೀಡಲಾಗಿದೆ.

ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್​ ಅವರು ಮೋದಿ ಸರ್ಕಾರದ ವಿರುದ್ಧ ತಮ್ಮ ಅಂಕಣಗಳ ಮೂಲಕ ನಿರಂತರವಾಗಿ ವಾಗ್ದಾಳಿ ನಡೆಸುತ್ತ ಬಂದಿದ್ದಾರೆ. ರಾಜ್ಯಸಭೆ ಚುನಾವಣೆಗೆ ಸ್ಫರ್ದಿಸುವ ಮೂಲಕ ಅವರು ರಾಜಕೀಯ ಪ್ರವೇಶ ಪಡೆಯುತ್ತಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಟಿಎಂಸಿ ಸಾಗರಿಕಾ ಘೋಷ್​, ಸುಶ್ಮಿತಾ ದೇವ್, ಎಂ.ಡಿ. ನಾದಿಮುಲ್ ಹಕ್ ಮತ್ತು ಮಮತಾ ಬಾಲಾ ಠಾಕೂರ್ ಅವರನ್ನು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಘೋಷಿಸಲು ಪಕ್ಷ ಹರ್ಷಿಸುತ್ತದೆ. ಪ್ರತಿ ಭಾರತೀಯನ ಹಕ್ಕುಗಳಿಗಾಗಿ ತೃಣಮೂಲದ ಅದಮ್ಯ ಮನೋಭಾವ ಮತ್ತು ಪ್ರತಿಪಾದನೆಯ ನಿರಂತರ ಪರಂಪರೆಯನ್ನು ಎತ್ತಿಹಿಡಿಯಲು ಈ ನಾಲ್ವರು ಕೆಲಸ ಮಾಡಲೆಂದು ಪಕ್ಷ ಆಶಿಸುತ್ತದೆ ಎಂದು ಶುಭ ಹಾರೈಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net