More

    ಚಿತ್ರರಂಗ ಪ್ರವೇಶಿಸಿದ 64 ವರ್ಷಗಳ ಬಳಿಕ ಹೆಸರನ್ನು ಬದಲಿಸಿಕೊಂಡ ಖ್ಯಾತ ನಟ

    ಮುಂಬೈ: 1960 ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡುವ ಮೂಲಕ ಮನೆ ಮಾತಾಗಿದ್ದ ನಟ ಧರ್ಮೇಂದ್ರ ತಮ್ಮ ಇಳಿವಯಸ್ಸಿನ್ಲಲೂ ನಟನೆಯನ್ನು ಮುಂದುವರೆಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಅವರು ಇದೀಗ ವಿಚಾರ ಒಂದಕ್ಕೆ ಸುದ್ದಿಯಾಗಿದ್ದು ಎಲ್ಲರ ಗಮನ ಸೆಳೆದಿದೆ.

    ಚಿತ್ರರಂಗಬ ಪ್ರವೇಶಿಸಿ 64 ವರ್ಷಗಳಾದ ಮೇಲೆ ನಟ ಧರ್ಮೇಂದ್ರ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಶಾಹಿದ್​ ಕಪೂರ್ ಹಾಗೂ ಕೃತಿ ಸನೋನ್​ ನಟನೆಯ ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಎಂದು ಹೇಳಲಾಗಿದೆ.

    ಫೆಬ್ರವರಿ 09ರಂದು ಬಿಡುಗಡೆಯಾದ ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಚಿತ್ರವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು, ಈ ಸಿನಿಮಾದಲ್ಲಿ ಧರ್ಮೇಂದ್ರ ನಾಯಕ ನಟ ಶಾಹಿದ್​ ಕಪೂರ್​ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಅವರ ಹೆಸರನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.

    ಇದನ್ನೂ ಓದಿ: ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ: ಮಧು ಬಂಗಾರಪ್ಪ

    ಈ ಮೊದಲು ಸಿನಿಮಾಗಳಲ್ಲಿ ಧರ್ಮೇಂದ್ರ ಎಂದಷ್ಟೇ ಹೆಸರನ್ನು ತೋರಿಸಲಾಗುತ್ತಿತ್ತು. ಆದರೆ, ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಪ್ರದರ್ಶನದ ವೇಳೆ ಧರ್ಮೇಂದ್ರ ಸಿಂಗ್ ಡಿಯೋಲ್ ಎಂದು ಹೆಸರನ್ನು ತೋರಿಸಲಾಗಿದೆ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಚಿತ್ರರಂಗಕ್ಕೆ ಕಾಲಿಟ್ಟು 64 ವರ್ಷಗಳ ಬಳಿಕಈ ರೀತಿ ಮಾಡಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

    ಈ ಕುರಿತು ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಚಿತ್ರತಂಡವಾಗಲಿ ನಟ ಧರ್ಮೇಂದ್ರ ಅವರಾಗಲೀ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts