More

    ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಜಾಮೀನು

    ನವದೆಹಲಿ: ಭ್ರಷ್ಟಾಚಾರ ಪ್ರಕರಣ ಹಾಗೂ ಮೇ 09ರಂದು ಸಂಭವಿಸಿದ್ದ ಗಲಭೆ ಸೇರಿದಂತೆ 12 ಪ್ರಕರಣಗಳಲ್ಲಿ ಜೈಲು ಸೇರಿರುವ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣಾ ಫಲಿತಾಂಶ ಪ್ರಕಟವಾಗಿ ಅತಂತ್ರ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿದ್ದ ಇಮ್ರಾನ್​ ಖಅನ್​ಗೆ ಜಾಮೀನು ಮಂಜೂರು ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಮೇ 09ರಂದು ಪಾಕಿಸ್ತಾನ ಜನರಲ್ ಹೆಡ್‌ಕ್ವಾರ್ಟರ್ಸ್ (ಪಾಕಿಸ್ತಾನ ಸೇನೆ) ಮತ್ತು ಆರ್ಮಿ ಮ್ಯೂಸಿಯಂ ಮೇಲಿನ ದಾಳಿ ಸೇರಿದಂತೆ ಒಟ್ಟು 12 ಪ್ರಕರಣಗಳಲ್ಲಿ ಇಮ್ರಾನ್​ ಖಾನ್​ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿಗೆ ಜಾಮೀನು ದೊರೆತಿದೆ. ಪ್ರಕರಣದ ಎಲ್ಲಾ ರೋಪಿಗಳು ಜಾಮೀನಿನ ಮೇಲೆ ಹೊರಗಿದ್ದು, ಖಾನ್​ ಹಾಗೂ ಖುರೇಷಿ ಅವರನ್ನು ಯಾವ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಕಾಟೇರ ಸಕ್ಸಸ್​; ಫ್ರೆಂಡ್ಸ್​-ಫ್ಯಾಮಿಲಿ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಚಾಲೆಂಜಿಂಗ್​ ಸ್ಟಾರ್​

    ಗಲಭೆ ಸೇರಿದಂತೆ 12 ಪ್ರಕರಣಗಳಲ್ಲಿ ಜಾಮೀನು ದೊರೆತರು ಖಾನ್​ ಅವರಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ ಎಂದು ಹೇಳಲಾಗಿದೆ. ಏಕೆಂದರೆ ಇತರೆ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಒಂದು ವೇಳೆ ಅವರು ಹೊರಗೆ ಬಂದರೆ ಸಾಕ್ಷ್ಯನಾಶ ಮಾಡುವ ಸಂಭವವಿದೆ ಎಂದು ತನಿಖಾ ತಂಡ ನ್ಯಾಯಾಲಯಕ್ಕೆ ತಿಳಿಸಿದೆ.

    339 ಸ್ಥಾನಗಳ ಪೈಕಿ 338 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶುಕ್ರವಾರ ರಾತ್ರಿ ವೇಳೆಗೆ ಇಮ್ರಾನ್‌ ಬೆಂಬಲಿತ ಅಭ್ಯರ್ಥಿಗಳು 90 ಕ್ಷೇತ್ರಗಳಲ್ಲಿ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದ್ದರೆ, ನವಾಜ್ ಷರೀಫ್‌ ಪಕ್ಷ 71, ಬಿಲಾವಲ್‌ ಭುಟ್ಟೋ ಅವರ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ 53 ಸ್ಥಾನಗಳಲ್ಲಿ ಗೆದ್ದಿದೆ. ಇತರ ಪಕ್ಷಗಳಿಂದ 27 ಮಂದಿ ಜಯಗಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts