More

    ಮುಂದಿನ ಲೋಕಸಭೆ ಚುನಾವಣೆಯಲ್ಲೂ ಜನರು ಆಶೀರ್ವದಿಸುವ ವಿಶ್ವಾಸ ಇದೆ: ಪ್ರಧಾನಿ ಮೋದಿ

    ನವದೆಹಲಿ: ಳೆದ ಐದು ವರ್ಷಗಳಲ್ಲಿ ದೇಶ ಭಾರೀ ಬದಲಾವಣೆ ಕಂಡಿದೆ. ಲೋಕಸಭೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಜನರು ಆಶೀರ್ವದಿಸುವ ನಿರೀಕ್ಷೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    17 ನೇ ಲೋಕಸಭೆಯ ಕಲಾಪಗಳ ಮುಕ್ತಾಯದ ಅಧಿವೇಶನವನ್ನು ಉದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅತಿಥೇಯ ರಾಷ್ಟ್ರವಾಗಿ ನಾವು ಜಿ-20 ಶೃಂಗ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿರುವುದು ನಮಗೆ ಹೆಮ್ಮೆಯ ಸಂಗತಿ ಎಂದಿದ್ದಾರೆ.

    ಜೈ ಶ್ರೀರಾಮ್​ ಘೋಷಣೆಗಳೊಂದಿಗೆ ಮಾತು ಪ್ರಾರಂಭಿಸಿದ ಪ್ರಧಾನಿ ಮೋದಿ, ಈ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಜಿ-20 ಶೃಂಗಸಭೆಯ ಮೂಲಕ ನಮಗೆ ದೊಡ್ಡ ಗೌರವ ಸಿಕ್ಕಂತಾಗಿದೆ. ಪ್ರತಿಯೊಂದು ರಾಜ್ಯವೂ ಭಾರತದ ಸಾಮರ್ಥ್ಯ ಮತ್ತು ತನ್ನದೇ ಆದ ಗುರುತನ್ನು ವಿಶ್ವದ ಮುಂದೆ ಪ್ರದರ್ಶಿಸಿದೆ. ಅದರ ಪರಿಣಾಮ ಪ್ರಪಂಚದ ಮೂಲೆಮೂಲೆಗೂ ಹಬ್ಬಿದೆ.

    ಇದನ್ನೂ ಓದಿ: ನಮ್ಮ ಸುದ್ದಿಗೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್​ ಆಗಿದೆ: ಡಿ.ಕೆ. ಶಿವಕುಮಾರ್

    ಈ 5 ವರ್ಷಗಳು ದೇಶಕ್ಕೆ ನಮ್ಮ ಸೇವೆಯಾಗಿದೆ. ಕಳೆದ 5 ವರ್ಷದಲ್ಲಿ ದೇಶದ ಸುಧಾರಣೆ, ಕಾರ್ಯಕ್ಷಮತೆ ಹಾಗೂ ಪರಿವರ್ತನೆಗಾಗಿ ನಾವು ಶ್ರಮಿಸಿದ್ದೇವೆ. 17ನೇ ಲೋಕಸಭೆಯ ಐದು ವರ್ಷಗಳಲ್ಲಿ ದೇಶಕ್ಕಾಗಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ  ಬೇರೇನೂ ಯೋಚಿಸದೆ ಸಂಸದರು ತಮ್ಮ ಭತ್ಯೆಯನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಸಂಸದರು ಶೇಕಡಾ 30 ರಷ್ಟು ಸಂಬಳ ಕಡಿತವನ್ನು ಮಾಡಿಕೊಳ್ಳಲು ನಿರ್ಧರಿಸಿದರು. ಈ ಮೂಲಕ ಅವರು ಜನರಿಗೆ ಸಂದೇಶವನ್ನು ಕಳುಹಿಸಿದ್ದಾರೆ. ನಮ್ಮನ್ನು ಅಪಹಾಸ್ಯ ಮಾಡುವವರ ಬಾಯಿ ಮುಚ್ಚಿಸಿದ್ದೀರಿ ಎಂದು ಹೇಳಿದ್ದಾರೆ.

    ಅನೇಕ ಸುಧಾರಣೆಗಳು ಈ ವರ್ಷದಲ್ಲಿ ಸಂಭವಿಸಿದವು. ದೇಶವು ಬದಲಾವಣೆಯತ್ತ ಸಾಗುತ್ತಿದೆ. ಹಲವು ತಲೆಮಾರುಗಳು ಕಾಯುತ್ತಿದ್ದ ಕೆಲಸಗಳು ಈ ಲೋಕಸಭೆಯಲ್ಲಿ ನಡೆದಿದೆ. ಅನೇಕ ತಲೆಮಾರುಗಳು ಒಂದೇ ಸಂವಿಧಾನದ ಕನಸು ಕಂಡಿದ್ದವು, ಈ ಸದನವು 370 ನೇ ವಿಧಿಯನ್ನು ರದ್ದುಗೊಳಿಸಿತು. ಜನರು ಸಂವಿಧಾನ ರಚನೆಯಲ್ಲಿ ಪಾತ್ರವಹಿಸಿದವರು ಇಂದು ನಮ್ಮನ್ನು ಆಶೀರ್ವದಿಸಬೇಕು. ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಕಠಿಣ ಕಾನೂನುಗಳನ್ನು ಜಾರಿ ಮಾಡಿದ್ದೇವೆ. ಹೊಸ ಸದನವು ದೊಡ್ಡ ಸುಧಾರಣೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts