ನ್ಯೂಸ್

ಪಂಜಾಬ್​ನಲ್ಲಿನ್ನು ಸಿಧು ಬ್ಯಾಟಿಂಗ್​:​ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷರಾಗಿ ನವಜೋತ್​ ಸಿಂಗ್ ನೇಮಕ

ನವದೆಹಲಿ: ಪಂಜಾಬ್​ನಲ್ಲಿ ಸದ್ಯ ಸಿಧು ಕೈಗೆ ಕಾಂಗ್ರೆಸ್ ಬ್ಯಾಟ್​ ಸಿಕ್ಕಿದ್ದು, ಇನ್ನು ಶೀಘ್ರದಲ್ಲೇ ಅವರ ಬ್ಯಾಟಿಂಗ್ ಶುರುವಾಗಲಿದೆ. ಅರ್ಥಾತ್, ಪಂಜಾಬ್​ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷರಾಗಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನೇಮಕಗೊಂಡಿದ್ದಾರೆ.

ಇವರೊಂದಿಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸಂಗತ್ ಸಿಂಗ್ ಗಿಲ್ಜಿಯನ್, ಸುಖ್​ವಿಂದರ್ ಸಿಂಗ್ ಡ್ಯಾನಿ, ಪವನ್ ಗೋಯೆಲ್​, ಕುಲ್ಜಿತ್ ಸಿಂಗ್ ನಗ್ರ ಅವರು ನೇಮಕಗೊಂಡಿದ್ದಾರೆ. ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರೋಧದ ನಡುವೆಯೂ ಸಿಧುಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನೀಡಿ ಆದೇಶ ಹೊರಡಿಸಿರುವುದು ಕುತೂಹಲ ಮೂಡಿಸಿದೆ.