ಬೆಂಗಳೂರು: ಪೊಲೀಸರ ಎಫ್ಐಆರ್ ಕಾಪಿ, ದಾಖಲಾದ ದೂರಿನ ಪ್ರತಿಗಳನ್ನು ನೋಡಿದವರಿಗೆ ಅವರು ಬಳಸುವ ಭಾಷೆಯ ಏಕತಾನತೆಯ ಅರಿವು ಚೆನ್ನಾಗಿ ಗೊತ್ತಿರುತ್ತದೆ. ಅದಾಗ್ಯೂ ಇತ್ತೀಚೆಗೆ ಪೊಲೀಸರಲ್ಲೂ ಕ್ರಿಯೇಟಿವಿಟಿ ಕಂಡು ಬರುತ್ತಿದೆ.
ಅರ್ಥಾತ್ ಪೊಲೀಸರು ಬಳಸುವ ಭಾಷೆ-ಬರವಣಿಗೆಯಲ್ಲೂ ಸೃಜನಶೀಲತೆ ಕಾಣಿಸಲಾರಂಭಿಸಿದೆ. ಇದು ಪೊಲೀಸ್ ಇಲಾಖೆಯ ಕೆಲವು ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳ ಪ್ರಕಟಣೆ ಮೂಲಕ ಬಹಿರಂಗಗೊಳ್ಳುತ್ತಿದೆ.
ಇದನ್ನೂ ಓದಿ: ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್ಫರ್’ ಅಸಾಧ್ಯ ಅನಿಸುತ್ತೆ!
ವೃತ್ತಿಪರ ಕಂಟೆಂಟ್ ಎಕ್ಸ್ಪರ್ಟ್ಗಳ ರೀತಿಯಲ್ಲಿ ಪೊಲೀಸರ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಪ್ರಕಟಣೆಗಳು ಕಂಡುಬರುತ್ತಿವೆ. ಆ ಮೂಲಕ ಪೊಲೀಸರು ಕೂಡ ಯುವ ಮನಸುಗಳಿಗೆ, ಸೃಜನಶೀಲತೆಗೆ, ಬದಲಾಗುತ್ತಿರುವ ಟ್ರೆಂಡ್ಗೆ ತಕ್ಕಂತೆ ತೆರೆದುಕೊಳ್ಳಲಾರಂಭಿಸಿದ್ದಾರೆ.
ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಇದಕ್ಕೆ ತಾಜಾ ಉದಾಹರಣೆ ಸೈಬರ್ ಕ್ರೈಂ ಜಾಗೃತಿಗಾಗಿ ಬೆಂಗಳೂರು ಪೊಲೀಸರ ಎಕ್ಸ್ ಹ್ಯಾಂಡಲ್ನಿಂದ ಪೋಸ್ಟ್ ಆಗಿರುವ ಒಂದು ಜಾಗೃತಿಯ ಬರಹ. ಪಾಸ್‌ವರ್ಡ್ ಹೇಗಿರಬೇಕು ಎಂಬುದನ್ನೂ ಪೊಲೀಸರು ಓಣಂ ಹಬ್ಬದ ಭೋಜನದ ಮೂಲಕ ವಿವರಿಸಿದ್ದಾರೆ.
"ನಿಮ್ಮ ಪಾಸ್‌ವರ್ಡ್ ಹೇಗಿರಬೇಕು? 'ಓಣಂ ಸದ್ಯ' ಭೋಜನದಲ್ಲಿರುವ ವೈವಿಧ್ಯತೆ ಗಮನಿಸಿದ್ದೀರಾ? ನಿಮ್ಮ ಪಾಸ್‌ವರ್ಡ್‌ಗಳನ್ನು ಹಾಕುವಾಗಲೂ ಅದನ್ನು ವೈವಿಧ್ಯಮಯವಾಗಿ ಮಾಡುವ ಮೂಲಕ ಯಾರೂ ಊಹಿಸಿ ವಂಚನೆ ಮಾಡದಂತೆ ಸದೃಢಪಡಿಸಿಕೊಳ್ಳಿ. ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು!" ಎಂದಿರುವ ಪೊಲೀಸರು ಪಾಸ್‌ವರ್ಡ್ ರಚನೆ ಹೇಗಿರಬೇಕು ಎಂದು ತಿಳಿಸಿದ್ದಾರೆ.
ಹಾಗೆಯೇ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಆದ ದಿನ ವ್ಹೀಲಿಂಗ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದನ್ನು ಹುಬ್ಬಳ್ಳಿ ಪೊಲೀಸರು 'ಕೆಜಿಎಫ್' ಸಿನಿಮಾದ ಸಂಭಾಷಣೆ ರೀತಿಯಲ್ಲಿ ಕ್ರಿಯೇಟಿವ್ ಆಗಿ ಪ್ರಕಟಿಸಿದ್ದರು.
"August 23..
ಆವತ್ತು ಎರಡು ಘಟನೆಗಳು ನಡೆದವು..👇
1. 'ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ 🚀 ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು'..💐
2. ಬೈಕ್ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು..💪🚔 " ಎಂದು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹುಬ್ಬಳ್ಳಿ ಪೊಲೀಸರು ಪ್ರಕಟಿಸಿದ್ದರು.