ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ವಿಟರ್ ಮಾಲೀಕ ಎಲನ್ ಮಸ್ಕ್ ಇಬ್ಬರೂ ಭೇಟಿಯಾಗಲಿರುವುದು ಕುತೂಹಲ ಕೆರಳಿಸಿದೆ. ಎಲನ್ ಮಸ್ಕ್ ಟ್ವಿಟರ್ ಖರೀದಿ ಬಳಿಕ ಪ್ರಧಾನಿ ಮೋದಿಯನ್ನು ಇದೇ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದು, ಗಮನ ಸೆಳೆದಿದೆ.
ಸರ್ಕಾರಿ ಮೂಲಗಳ ಪ್ರಕಾರ, ಇಂದು ಯುಎಸ್ನಲ್ಲಿ ಇರುವ ಪ್ರಧಾನಿ ಮೋದಿ ವಿವಿಧ ಕ್ಷೇತ್ರಗಳ ಹತ್ತಕ್ಕೂ ಅಧಿಕ ಚಿಂತಕ ನಾಯಕರನ್ನು ಭೇಟಿ ಮಾಡಲಿದ್ದು, ಆ ಪೈಕಿ ಎಲನ್ ಮಸ್ಕ್ ಕೂಡ ಒಬ್ಬರು ಎನ್ನಲಾಗಿದೆ. ಮೋದಿ 2015ರಲ್ಲಿ ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟರ್ಸ್ ಫ್ಯಾಕ್ಟರಿಗೆ ಭೇಟಿ ನೀಡಿದ್ದಾಗ ಮಸ್ಕ್ ಜತೆ ಭೇಟಿ ನಡೆದಿತ್ತು. ಆಗ ಮಸ್ಕ್ ಇನ್ನೂ ಟ್ವಿಟರ್ ಖರೀದಿಸಿರಲಿಲ್ಲ.
ಆದರೆ ಮಸ್ಕ್ ಟ್ವಿಟರ್ ಖರೀದಿ ಬಳಿಕ ಇದೇ ಮೊದಲ ಸಲ ಇಬ್ಬರ ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಟೆಸ್ಲಾ ಫ್ಯಾಕ್ಟರಿಗಾಗಿ ಮಸ್ಕ್ ಭಾರತದಲ್ಲಿ ಜಾಗದ ಹುಡುಕಾಟದಲ್ಲಿರುವಾಗಲೇ ಈ ಭೇಟಿ ನಡೆಯುತ್ತಿರುವುದರಿಂದ ಇದು ಮತ್ತಷ್ಟು ಗಮನ ಸೆಳೆದಿದೆ. -ಏಜೆನ್ಸೀಸ್