ನ್ಯೂಸ್

ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಜಡಿದ ಪಾಲಕರು!

ಲಾಹೋರ್: ಕಾಮತೃಷೆ ತೀರಿಸಿಕೊಳ್ಳುವ ಸಲುವಾಗಿ ಸಮಾಧಿಯೊಳಗಿಂದ ಹೆಣ್ಣು ಮಕ್ಕಳ ಮೃತದೇಹವನ್ನು ಹೊರತೆಗೆದು ಬಳಸಿಕೊಳ್ಳುತ್ತಿರು ಆಘಾತಕಾರಿ ಘಟನೆಗಳು ಪಾಕಿಸ್ತಾನದ ಕೆಲವೆಡೆ ನಡೆಯುತ್ತಿವೆ ಎಂದು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ವರದಿಯೊಂದು ಬಹಿರಂಗಪಡಿಸಿವೆ.

ಪ್ರತಿ ಎರಡು ಗಂಟೆಗೊಮ್ಮೆ ಪಾಕಿಸ್ತಾನದಲ್ಲಿ ಒಬ್ಬ ಮಹಿಳೆ ಅತ್ಯಚಾರಕ್ಕೆ ಒಳಗಾಗುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಮಹಿಳೆಯರ ಮೃತದೇಹವನ್ನೂ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿರುವುದು ಜನರನ್ನು ಬೆಚ್ಚಿ ಬೀಸಿದೆ. ಹೃದಯ ವಿದ್ರಾವಕ ಘಟನೆಯನ್ನು ತಪ್ಪಿಸುವ ಸಲುವಾಗಿ ಇಲ್ಲಿನ ಪಾಲಕರ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಜಡಿದಿದ್ದಾರೆ.

ಕಾಮತೃಷೆಗೆ ಮೃತದೇಹ ಬಳಕೆ

ಹೆಣ್ಣು ಮಕ್ಕಳ ಸಮಾಧಿಗೆ ಬೀಜ ಹಾಕಿರುವ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 2011ರ ನಂತರದಲ್ಲಿ ಪಾಕಿಸ್ತಾನದ ಕೆಲ ಭಾಗದಲ್ಲಿ ಸಮಾಧಿಯಿಂದ ಮಹಿಳೆಯರ ಶವವನ್ನು ಹೊರತೆಗೆದಿರುವುದು ವರದಿಯಾಗಿದೆ. ಈ ಹಿಂದೆ ಕರಾಚಿಯಲ್ಲಿ ಬಂಧಿತನಾಗಿದ್ದ ನಾಜಿಮಾಬಾದ್​ನ ಮಹಮ್ಮದ್ ರಿಜ್ವಾನ್ ಎಂಬಾತ ಸಮಾಧಿ ಒಡೆದು 48 ಮಹಿಳೆಯರ ಮೃತದೇಹವನ್ನು ಹೊರತೆಗೆದು, ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದ.

ಇತ್ತೀಚೆಗಷ್ಟೇ ಮುಹಮ್ಮದ್ ಮುನೀರ್ ಎಂಬುವವರ 15 ವರ್ಷದ ಮಗಳ ಶವ ಸ್ಮಶಾನದ ಹೊರಗೆ ಪತ್ತೆಯಾಗಿತ್ತು. ಈ ಬಗ್ಗೆ ಪರಿಶೀಲಿಸಿದ ಪೊಲೀಸರು ಲೈಂಗಿಕ ದೌರ್ಜನ್ಯದ ಉದ್ದೇಶದಿಂದ ಶವವನ್ನು ಸಮಾಧಿಯಿಂದ ಹೊರತೆಗೆಯಲಾಗಿದೆ ಎಂದು ಶಂಕಿಸಿದ್ದರು.

ಸಮಾಧಿಗೆ ಬೀಗ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿಯೊಂದು, 40 ಶೇ.ಕ್ಕಿಂತ ಹೆಚ್ಚು ಪಾಕಿಸ್ತಾನಿ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪುರುಷರಿಂದ ಹಿಂಸೆ ಅನುಭವಿಸಿದ್ದಾರೆ ಎಂದು ಹೇಳಿದೆ. ಇದೀಗ ಸಮಾಧಿಗೆ ಬೀಗ ಹಾಕಿರುವ ಫೋಟೋ ವೈರಲ್ ಆಗುತ್ತಿದ್ದಂತೆ, ಟ್ವಿಟ್ಟರ್ ಬಳಕೆದಾರ ಸಾಜಿದ್ ಯೂಸಫ್ ಶಾ 'ಪಾಕಿಸ್ತಾನ ಸೃಷ್ಟಿಸಿದ ಸಮಾಜಿಕ ಪರಿಸರವು ಲೈಂಗಿಕ ದೌರ್ಜನ್ಯ ಮತ್ತು ದಮನಿತ ಸಮಾಜವನ್ನು ಹುಟ್ಟುಹಾಕಿದೆ. ಕೆಲವರು ತಮ್ಮ ಮಗಳ ಸಮಾಧಿಯನ್ನು ಲೈಂಗಿಕ ದೌರ್ಜನ್ಯದಿಂದ ತಪ್ಪಿಸಲು ಮುಂದಾಗಿದ್ದಾರೆ' ಎಂದು ಬರೆದುಕೊಂಡಿದ್ದಾರೆ.