More

    ಎಲ್ಲರ ಮುಂದೆ ‘ಮಾವ’ ಎಂದು ಕರೆಯಬೇಡ! ಅಳಿಯನಿಗೆ ವಾರ್ನಿಂಗ್ ಕೊಟ್ಟ ಅಫ್ರಿದಿ

    ಇಸ್ಲಾಮಾಬಾದ್: ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿತ್ ಅಫ್ರಿದಿ ತನ್ನ ಅಳಿಯನಿಗೆ ಖಡಕ್ ಸೂಚನೆ ನೀಡಿದ್ದಾರೆ. ಎಲ್ಲರ ಮುಂದೆ ನನ್ನನ್ನ ಮಾವ(sasur) ಎಂದು ಕರೆಯಬೇಡ ಎಂದು ಹೇಳಿದ್ದಾರೆ.

    ಖಾಸಗಿ ಚಾನೆಲ್​ನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, “ನಾನು ನಿನ್ನ ಬಾಯಿಂದ ಈ ಮಾತನ್ನು ಮತ್ತೆ ಕೇಳಲು ಬಯಸುವುದಿಲ್ಲ”(“Sasur, mai tumhare muh se ye dubara na sunu) ಎಂದು ಶಾಹಿದ್ ಅಫ್ರಿದಿ ಅಳಿಯ ಶಾಹೀನ್‌ ಅಫ್ರಿದಿಗೆ ಹೇಳಿದ್ದಾರೆ. ಇದೀಗ ಅಫ್ರಿದಿ ಆಡಿರುವ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಇದನ್ನೂ ಓದಿ: ಕೊಹ್ಲಿಯನ್ನು ಹಿಂದಿಕ್ಕಿದ ರಾಹುಲ್; ವೇಗವಾಗಿ 7 ಸಾವಿರ ರನ್ ಕಂಪ್ಲೀಟ್

    ಮಾವ ಎಂದು ಕರೆಯಬೇಡ!

    ಶಾಹಿದ್ ಅಫ್ರಿದ ಸಂದರ್ಶನದಲ್ಲಿ ಮಾತನಾಡುತ್ತಾ, ಇತ್ತೀಚೆಗೆ ನಾನು ಕ್ರಿಕೆಟ್ ಟ್ರೋಫಿಯನ್ನು ಗೆದ್ದಿರುವ ಕಾರಣದಿಂದ ಶಾಹಿನ್ ನನ್ನನ್ನ ಮಾವ ಎಂದು ಕರೆಯಬಾರದು ಎಂದು ಹೇಳಿದರು. ಶಾಹಿದ್ ಅಫ್ರಿದಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಏಷ್ಯಾ ಲಯನ್ಸ್ ತಂಡದ ಪರವಾಗಿ ಆಡಿದ್ದರು. ಇಂಡಿಯಾ ಮಹಾರಾಜಸ್ ತಂಡವನ್ನು 9 ರನ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿದ್ದರು.

    ಮಾವ ಔಟ್ ಆದರೆ ಟಿವಿ ಆಫ್ ಮಾಡುತ್ತಿದ್ದೆ!

    ಅಫ್ರಿದಿ ಅಳಿಯ ಸಂದರ್ಶನದಲ್ಲಿ ಮಾತನಾಡುತ್ತಾ, ಐದು ವರ್ಷಗಳ ಹಿಂದೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಶಾಹಿದ್ ಅಫ್ರಿದಿ ವಿರುದ್ಧ ಬೌಲಿಂಗ್ ಮಾಡಿರುವುದು ನನಗೆ ವಿಶೇಷವಾದುದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಅಫ್ರಿದಿ ನನಗೆ ರೋಲ್ ಮಾಡೆಲ್. ನಾನು ಮಾವನ ಬ್ಯಾಟಿಂಗ್​ನ್ನು ಆನಂದಿಸುತ್ತಿದೆ. ಅವರು ಔಟ್ ಆದರೆ ಟಿವಿ ಆಫ್ ಮಾಡುತ್ತಿದೆ ಎಂದು ತಮ್ಮ ನಡುವಿನ ಅನ್ಯೋನ್ಯತೆಯ ಬಗ್ಗೆ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಅನ್‌ಫಾಲೋ ಮಾಡಿದ ಕೊಹ್ಲಿ! ಮುಂದುವರಿದ ಗಂಗೂಲಿ ಜತೆಗಿನ ಮುನಿಸು

    ಶಾಹಿನ್ ಮಗನಂತ ಅಳಿಯ!

    “ನಾನು ಯಾವಾಗಲೂ ಹೆಂಡತಿ ಮತ್ತು ಮಗಳೊಂದಿಗೆ ಸ್ನೇಹಿತನಂತೆ ಇರುತ್ತೇನೆ. ಇದೀಗ ಅಳಿಯ ಶಾಹಿನ್ ಅಫ್ರಿದಿ ನನ್ನ ಮಗನಂತಿದ್ದು ಒಳ್ಳೆಯ ಸ್ನೇಹಿತನಾಗಿದ್ದಾನೆ. ಶಾಹಿನ್ ಒಳ್ಳೆಯ ಹುಡುಗನಾಗಿದ್ದು, ನಾಯಕತ್ವ ಗುಣದಿಂದ ಹೆಚ್ಚು ಇಷ್ಟವಾಗುತ್ತಾನೆ. ಸಣ್ಣ ವಯಸ್ಸಿನಲ್ಲಿ ಹೆಚ್ಚು ಪ್ರಬುದ್ಧತೆ ಗಳಿಸಿದ್ದಾನೆ ಎಂದು ಅಳಿಯ ಬಗ್ಗೆ ಶಾಹಿದ್ ಅಫ್ರಿದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts