More

    VIDEO | ವೀಕೆಂಡ್​ನಲ್ಲಿ ಕೊಹ್ಲಿ-ಅನುಷ್ಕಾ ಸಿಟಿ ರೌಂಡ್ಸ್; ಸಿಟಿಆರ್‌ ಹೋಟೆಲ್​​ನಲ್ಲಿ ಮಸಾಲೆದೋಸೆ ಸವಿದ ಸ್ಟಾರ್ ಜೋಡಿ…

    ಬೆಂಗಳೂರು: ಸ್ಟಾರ್ ಕ್ರಿಕೆಟ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿಟಿಆರ್ ಹೋಟೆಲ್​​​ನಲ್ಲಿ ಮಸಾಲೆ ದೋಸೆ ಸವಿದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ-ಅನುಷ್ಕಾ ಜೋಡಿ ಸ್ನೇಹಿತರೊಂದಿಗೆ ಬೆಂಗಳೂರು ಸುತ್ತಾಡಿದ್ದಾರೆ.

    ಇದನ್ನೂ ಓದಿ: ಅನ್‌ಫಾಲೋ ಮಾಡಿದ ಕೊಹ್ಲಿ! ಮುಂದುವರಿದ ಗಂಗೂಲಿ ಜತೆಗಿನ ಮುನಿಸು

    ಸ್ನೇಹಿತರೊಂದಿಗೆ ಬೆಂಗಳೂರು ನಗರ ಸುತ್ತಾಡಿರುವ ಬಗ್ಗೆ ಅನುಷ್ಕಾ ಶರ್ಮ ತಮ್ಮ ಇನ್ಸ್​ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಸೆಂಟ್ರೆಲ್​ ಟಿಫಿನ್​ ರೂಂ ಮತ್ತು ಕಾರ್ನರ್​ ಹೌಸ್​ಗೆ ಭೇಟಿ ನೀಡಿ, ಮಸಾಲೆದೋಸೆ, ಐಸ್​ ಕ್ರೀಂ, ಮಂಗಳೂರು ಬೊಂಡಾ ಮತ್ತು ಕೇಸರಿಬಾತ್​ ರುಚಿ ಸವಿದಿದ್ದಾರೆ.

    ಸೆಲ್ಫಿ ತೆಗೆದುಕೊಳ್ಳು ಮುಗಿಬಿದ್ದ ಫ್ಯಾನ್ಸ್

    ಸಿಟಿಆರ್ ಹೋಟೆಲ್​ಗೆ ಕೊಹ್ಲಿ-ಅನುಷ್ಕಾ ಜೋಡಿ ಬಂದಿರುವ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟಾರ್ ಜೋಡಿ ಬಂದಿರುವುದು ಗೊತ್ತಾಗುತ್ತಿದ್ದಂತೆ ಹೋಟೆಲ್ ಮುಂಭಾಗ ಸಾಕಷ್ಟು ಅಭಿಮಾನಿಗಳು ಸೇರಿದ್ದಾರೆ. ಕೊಹ್ಲಿ-ಅನುಷ್ಕಾ ಹೋಟೆಲ್​ನಿಂದ ಹೊರಬರುತ್ತಿದ್ದಂತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    ಇದನ್ನೂ ಓದಿ: ಪದಾರ್ಪಣೆ ಪಂದ್ಯದಲ್ಲೇ ವಿಶಿಷ್ಟ ದಾಖಲೆ ಬರೆದ ಅರ್ಜುನ್ ತೆಂಡೂಲ್ಕರ್‌! ಯಾವುದು ಆ ದಾಖಲೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts