ನ್ಯೂಸ್

ಅಳಿವಿನ ಅಂಚಿನಲ್ಲಿರುವ ಪ್ಯಾಂಗೋಲಿನ್ ಕಳ್ಳಸಾಗಣೆ : ಮೂವರ ಬಂಧನ

rashmirhebbur

ಕೊಲ್ಕತ : ಅಳಿವಿನ ಅಂಚಿನಲ್ಲಿರುವ ಪ್ಯಾಂಗೊಲಿನ್ ಮತ್ತು 1.56 ಕಿಲೋಗ್ರಾಂನಷ್ಟು ಪ್ಯಾಂಗೊಲಿನ್ ಹೊರಗಣ ಚ​ರ್ಮದ ತುಣುಕು​(ಸ್ಕೇಲ್ಸ್​)ಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಮೂವರು ದುಷ್ಕರ್ಮಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.

ಸುಳಿವಿನ ಮೇರೆಗೆ, ಬೈಕುಂಠಪುರ ಅರಣ್ಯ ವಿಭಾಗದ ರೇಂಜ್​ ಆಫಿಸರ್​​ ಸಂಜಯ್ ದತ್ತ ನೇತೃತ್ವದಲ್ಲಿ ಸರುಗರ್ಗ್​ ಅರಣ್ಯ ವಲಯದ ತಂಡವೊಂದು ಜಲ್​ಪೈಗುರಿ ಜಿಲ್ಲೆಯ ಗಜೋಲ್ಡೋಬಾ ಪ್ರದೇಶದಿಂದ ಮೂರು ಜನರನ್ನು ಬಂಧಿಸಿತು. ಪರಿಶೀಲನೆ ನಡೆಸಿದಾಗ ಒಂದು ಜೀವಂತ ಪ್ಯಾಂಗೋಲಿನ್ ಮತ್ತು 1.567 ಕೆಜಿ ಪ್ಯಾಂಗೋಲಿನ್ ಸ್ಕೇಲ್ಸ್ ಕಪ್ಪು ಸ್ಕೂಲ್​ ಬ್ಯಾಗ್​ನಲ್ಲಿ ಸಿಕ್ಕಿದವು ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪಲ್​ಗುರಿಯ ನಿವಾಸಿಗಳಾದ ಸುನಿಲ್ ಒರಾವೊ, ಮಿಜನೂರ್​ ರಹಮಾನ್ ಮತ್ತು ಅಮ್ಜದ್​ ಹುಸೈನ್ ಎಂಬುವರು ಬಂಧಿತರು. ಆರೋಪಿಗಳು ಬೈಕ್​ ಸವಾರಿ ಮಾಡಿಕೊಂಡು ಪ್ರಾಣಿ ಮತ್ತು ಅದರ ಚರ್ಮದ ತುಣುಕುಗಳನ್ನು ಮತ್ತೊಬ್ಬರಿಗೆ ಮಾರುವುದಕ್ಕಾಗಿ ಈ ಪ್ರದೇಶಕ್ಕೆ ಬಂದಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂತು. ಅರಣ್ಯ ಇಲಾಖೆ ಸಿಬ್ಬಂದಿ ಪ್ಯಾಂಗೋಲಿನ್ ಮತ್ತು ಅದರ ಸ್ಕೇಲ್​ಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)