ನ್ಯೂಸ್

ಭಾರತ ನಿರ್ಣಯಕ್ಕೆ ಬೆದರಿದ ಪಾಕಿಸ್ತಾನ; ಪಾಕ್​ ಸೇನಾ ಮುಖ್ಯಸ್ಥನ ಕುಟುಂಬ ಸೇರಿ ಉನ್ನತಾಧಿಕಾರಿಗಳ ಮನೆಯ ಸದಸ್ಯರು ವಿದೇಶಕ್ಕೆ ಪಲಾಯನ! | Pahalgam Terror Attack

Pahalgam Terror Attack : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ತೆಗೆದುಕೊಂಡ ಕ್ರಮಗಳಿಂದ ಪಾಕಿಸ್ತಾನ ಸೇನೆಯು ಭಯಭೀತಗೊಂಡಿಂತೆ ಕಾಣುತ್ತಿದೆ. ಕಾರಣ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ತಮ್ಮ ಕುಟುಂಬವನ್ನು ವಿದೇಶಕ್ಕೆ ಕಳುಹಿಸಿದ್ದಾರೆ. ಅಲ್ಲದೆ, ಪಾಕಿಸ್ತಾನಿ ಸೇನೆಯ ಹಲವಾರು ಅಧಿಕಾರಿಗಳು ತಮ್ಮ ಕುಟುಂಬಗಳನ್ನು ಖಾಸಗಿ ವಿಮಾನಗಳ ಮೂಲಕ ಬ್ರಿಟನ್ ಮತ್ತು ನ್ಯೂಜೆರ್ಸಿಗೆ ಕಳುಹಿಸಿದ್ದಾರೆ ವರದಿಯಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಕೈಗೊಂಡ ನಿರ್ಣಯಗಳು ನೆರೆ ರಾಷ್ಟ ಪಾಕಿಸ್ತಾನ ಪತರುಗುಟ್ಟಿದೆ. ಸೂಕ್ತ ಕ್ರಮಗಳ ಮೂಲಕ ಭಯೋತ್ಪಾದಕರನ್ನು ಮಟ್ಟ ಹಾಕುವುದರ ಜತೆ ಟೆರರಿಸಂಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿಬೇಕು ಎಂದು ರಾಷ್ಟ್ರದ್ಯಂತ ಜನರು ಭಾರೀ ಒತ್ತಾಯಿಸುತ್ತಿದ್ದಾರೆ.

ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿವೆ. ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಈಗಾಗಲೇ ಐದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇವುಗಳಲ್ಲಿ ಒಂದು ನೆರೆಯ ರಾಷ್ಟ್ರದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದು. ಅಟಾರಿ ಗಡಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿದ್ದು, 48 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಆದೇಶಿಸಿದೆ. ಇದರಿಂದ ಪಾಕಿಸ್ತಾನ ಕಕ್ಕಬಿಕ್ಕಿಯಾಗಿದೆ. ಅಲ್ಲದೆ, ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡವಿದೆ. ಹೀಗಾಗಿ, ಪಾಕಿಸ್ತಾನ ಸೇನೆಯ ಉನ್ನತ ಹುದ್ದೆಯ ಮೇಲಾಧಿಕಾರಿಗಳು ತಮ್ಮ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ 48 ಗಂಟೆಗಳ ಒಳಗೆ, ಭಾರತೀಯ ನೌಕಾಪಡೆಯು ಗುರುವಾರ (ಏಪ್ರಿಲ್ 24, 2025) ಅರೇಬಿಯನ್ ಸಮುದ್ರದಲ್ಲಿ ಐಎನ್ಎಸ್ ಸೂರತ್ ನಿಂದ ಕ್ಷಿಪಣಿ ಪರೀಕ್ಷೆಯನ್ನು ನಡೆಸಿವ ಮೂಲಕ ಶತ್ರುಗಳಿಗೆ ಬಲವಾದ ಸಂದೇಶವನ್ನು ರವಾನಿಸಿದೆ

ಅಮಿತ್ ಶಾ ಎಲ್ಲಾ ಸಿಎಂಗಳಿಗೆ ಕರೆ

ಅಲ್ಲದೆ, ಇದೀಗ ಭಾರತದಲ್ಲಿ ವಾಸಿಸುತ್ತಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಗಡೀಪಾರು ಮಾಡುವಂತೆ ಮುಖ್ಯಮಂತ್ರಿಗಳಿಗೆ 'ಅಮಿತ್ ಶಾ' ಕರೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯದ ಬಗ್ಗೆ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತಿದ್ದು, ಆಯಾ ರಾಜ್ಯಗಳಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರು ಪಾಕಿಸ್ತಾನಕ್ಕೆ ಬೇಗನೆ ಮರಳುವಂತೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳನ್ನು ತಿಳಿಸಿವೆ.(ಏಜೆನ್ಸೀಸ್​)